FACT CHECK | ಸುನೀತಾ-ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಮರಳಿದ ತಕ್ಷಣ ಮಸ್ಕ್ ಮತ್ತು ಟ್ರಂಪ್‌ಅವರನ್ನು ಬೇಟಿಯಾಗಿದ್ದಾರೆಯೇ?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 286 ದಿನಗಳ ಕಾಲ ಸುದೀರ್ಘ ಅವಧಿಯ ಕಾರ್ಯಾಚರಣೆಯ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಮಾರ್ಚ್ 18 ರಂದು ಭೂಮಿಗೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಸುನೀತಾ ಅವರು ಮಸ್ಕ್-ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು,

ಮಾರ್ಚ್ 19, 2025 ರಂದು ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, “ಅಮೇರಿಕಾದ ನಾಸಾ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನಿಯಾದ ಭಾರತೀಯ ಮೂಲದ #ಸುನೀತಾ_ವಿಲಿಯಮ್ಸ್ ರವರು ಅಮೇರಿಕಾದ ಉದ್ಯಮಿ ಎಲ್ಲಾನ್ ಮಸ್ಕ್ ಹಾಗೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಪ್ರಯತ್ನದಿಂದ ಮತ್ತೆ ಸುರಕ್ಷಿತವಾಗಿ ಭೂಮಂಡಲ್ಲಕ್ಕೆ ಬಂದಿಳಿದಿದ್ದಾರೆ. ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. (Archive) ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೊ ಮತ್ತು ಪೋಸ್ಟ್‌ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಫೋಟೋವನನ್ನು ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಲಾಗಿದೆ ಎಂದು ನ್ಯೂಸ್ ಮೀಟರ್ ತಿಳಿಸಿದೆ.

ಈ ಫೋಟೋವನ್ನು ಗಮನಿಸಿದಾಗ ಇದರಲ್ಲಿ ಗ್ರೋಕ್ ವಾಟರ್‌ಮಾರ್ಕ್ ಇರುವುದು ಕಂಡುಬಂದಿದೆ. ಇದು AI- ರಚಿತವಾಗಿದೆ ಎಂದು ಸೂಚಿಸುತ್ತದೆ. AI-ರಚಿತ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲವಾರು ವ್ಯತ್ಯಾಸಗಳನ್ನು ಕೂಡ ನಾವು ಗಮನಿಸಿದ್ದೇವೆ, ಉದಾಹರಣೆಗೆ ಮಸ್ಕ್ ಅವರ ಮುಖ ನೈಜ್ಯತೆಗೆ ದೂರವಾಗಿದೆ ಮತ್ತು ಟ್ರಂಪ್ ಅವರ ನೋಟವು ಚಿಕ್ಕದಾಗಿದ್ದು, ಒಂದು ಕಣ್ಣು ವಿರೂಪಗೊಂಡಿದೆ.

 

ಅಂತಿಮವಾಗಿ, ನಾವು AI ಪತ್ತೆ ಸಾಧನ ಹೈವ್ ಮಾಡರೇಶನ್ ಬಳಸಿ ಚಿತ್ರವನ್ನು ವಿಶ್ಲೇಷಿಸಿದ್ದೇವೆ, ಇದು AI- ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಹೊಂದಿದೆ ಎಂದು ಶೇಕಡಾ 99 ರಷ್ಟು ಖಚಿತತೆಯೊಂದಿಗೆ ತೋರಿಸಿದೆ. ಹಾಗಾಗಿ ಈ ಚಿತ್ರ AI ನ ಸೃಷ್ಟಿ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕಾದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಮಾರ್ಚ್ 18 ರಂದು ಭೂಮಿಗೆ ಮರಳುವಂತೆ ಮಾಡಿದೆ. ಇದನ್ನೆ ಹಿನ್ನಲೆಯಾಗಿಟ್ಟುಕೊಂಡು ಗಗನಯಾತ್ರಿಗಳು ಭೂಮಿಗೆ ಬಂದಕೂಡಲೆ ಎಲ್ಲಾನ್ ಮಸ್ಕ್ ಹಾಗೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರನ್ನು ಭೇಟಿಯಾಗಿದ್ದಾರೆ ಎನ್ನುವಂತೆ ಫೋಟೊವನ್ನು AI  ಮೂಲಕ ಸೃಷ್ಟಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರೋಹಿತ್ ಶರ್ಮಾ ಅವರಿಗೆ ಅಂಬಾನಿ ಪತ್ನಿ ಬುಗಾಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights