FACT CHECK | ನಟ ಸಲ್ಮಾನ್ ಖಾನ್ ರಶ್ಮಿಕಾಗೆ ವೇದಿಕೆ ಮೇಲೆಯೇ ಕಿಸ್ ಮಾಡಿದ್ರಾ? ಇಲ್ಲಿದೆ ವೈರಲ್ ವಿಡಿಯೋದ ಅಸಲೀ ಕಥೆ
ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಮತ್ತು ‘ನ್ಯಾಷನಲ್ ಕ್ರಶ್ ಆಫ್ ಇಂಡಿಯಾ’ ರಶ್ಮಿಕಾ ಮಂದಣ್ಣ ಸಲ್ಮಾನ್ ಜೊತೆ ನಟಿಸಿರುವ ‘ಸಿಕಂದರ್’ ಇದೇ ಚಿತ್ರ ಮಾರ್ಚ್ 30 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವು ದಕ್ಷಿಣದಲ್ಲಿಯೂ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಈ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಈ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಇಬ್ಬರಿಗೂ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ, ರಶ್ಮಿಕಾ ಸಲ್ಮಾನ್ ಖಾನ್ ಅವರ ತುಟಿಗಳಿಗೆ ಮುತ್ತಿಟ್ಟಿದ್ದಾರೆ.
ಸಲ್ಮಾನ್ ಖಾನ್, ರಶ್ಮಿಕಾ ಮಂದನಾ ಚುಂಬನದ ವಿಡಿಯೋವನ್ನು ಅನಿ ಮೀನಾ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಕೊನೆಯವರೆಗೂ ನೋಡಿ..’ ಎಂದು ಶೀರ್ಷಿಕೆ ನೀಡಿದ್ದಾರೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರ ಈ 13 ಸೆಕೆಂಡುಗಳ ವಿಡಿಯೋದ ಕೊನೆಯಲ್ಲಿ ಚುಂಬಿಸುವುದನ್ನು ನೋಡಬಹುದು.
ಅನೇಕ ಬಳಕೆದಾರರು ಈ ವಿಡಿಯೋವನ್ನು YouTube ನಲ್ಲಿ ಹಂಚಿಕೊಂಡಿದ್ದಾರೆ. SherRock editz ಹೆಸರಿನ YouTube ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಂಡ ಅವರು, ‘ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣಗೆ ಮುತ್ತಿಟ್ಟರು’ ಎಂದು ಬರೆದಿದ್ದಾರೆ. AIshq ಹೆಸರಿನ ಯೂಟ್ಯೂಬ್ ಚಾನೆಲ್‌ನಿಂದಲೂ ಅದೇ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.
ಹಾಗಿದ್ದರೆ ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳಲ್ಲಿ ತೋರಿಸಿರುವಂತೆ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಟ ಸಲ್ಮಾನ್ ಖಾನ್ ರಶ್ಮಿಕಾ ತುಟಿಗೆ ಚುಂಬಿಸಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾನಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಮೊದಲಿಗೆ ನಾರ್ಮಲ್ ಆಗಿ ಕಾಣುತ್ತಾರೆ. ಆದರೆ, ಇಬ್ಬರೂ ಒಬ್ಬರಿಗೊಬ್ಬರು ಮುತ್ತಿಡಲು ಮುಂದಾದಾಗ ಅವರ ಮುಖದ ಸುತ್ತ ಬದಲಾಗುವುದನ್ನು ಕಾಣಬಹುದು. ಹಾಗಾಗಿ ಈ ವಿಡಿಯೋ ‘ಡೀಪ್ ಫೇಕ್’ ಆಗಿರಬಹುದು ಎಂಬ ಅನುಮಾನ ಮೂಡುತ್ತದೆ.
![]()
ವೈರಲ್ ವಿಡಿಯೋದಲ್ಲಿ ಮುತ್ತಿಡುವ ಭಾಗದ ವಿಡಿಯೋದ ಕೀ ಫ್ರೇಮ್‌ಗಳ ಸ್ಕ್ರೀನ್‌ಶಾಟ್ ತೆಗೆದುಕೊಂಡು AI ಇಮೇಜ್ ಡಿಟೆಕ್ಟರ್ Decopy.ai ಮೂಲಕ ಅದನ್ನು ಪರಿಶೀಲಿಸಿದ್ದೇವೆ. ಆಗ ಈ ದೃಶ್ಯಾವಳಿ ಶೇ.92.49ರಷ್ಟು ನಕಲಿ ಎಂಬುದಾಗಿ ತಿಳಿದುಬಂದಿದೆ.
Mumbai (Maharashtra) : Actor Salman khan on Actor Rashmika Mandanna #SalmanKhan #RashmikaMandanna pic.twitter.com/BEHNO5QeLu
— Deccan Chronicle (@DeccanChronicle) March 24, 2025
ಇದಲ್ಲದೆ, ಈ ವೀಡಿಯೊಗೆ ಸಂಬಂಧಿಸಿದ ಇತರ ಕೆಲವು ಕೀಫ್ರೇಮ್‌ಗಳ ಸಹಾಯದಿಂದ Google ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೂಲ ವಿಡಿಯೋದ ಹಲವಾರು ಲಿಂಕ್‌ಗಳನ್ನು ಲಭ್ಯವಾಗಿದೆ. ಸಿಕಂದರ್ ಸಿನಿಮಾದ ಪ್ರಚಾರದ ಭಾಗವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಉತ್ತರಿಸಿದರು. ಇಡೀ ವಿಡಿಯೋದಲ್ಲಿ ಎಲ್ಲಿಯೂ ಚುಂಬನದ ದೃಶ್ಯವಿಲ್ಲ. ಹಾಗಾಗಿ ಈ ವಿಡಿಯೋವನ್ನು ಡೀಪ್ ಫೇಕ್ ಮೂಲಕ ರಚಿಸಿರುವುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಿಕಂದರ್ ಸಿನಿಮಾದ ಪ್ರಚಾರದ ಭಾಗವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಉತ್ತರಿಸುವ ಮೂಲ ವಿಡಿಯೋದ ಒಂದು ಭಾಗವನ್ನು ಬಳಸಿಕೊಂಡು ಈ ಡೀಪ್‌ಫೇಕ್ ವೀಡಿಯೊವನ್ನು ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ‘ಗೋ ಬ್ಯಾಕ್ ಗ್ರೋಕ್’ ಎಂದು ಪೋಸ್ಟ್‌ರ್ ಹಿಡಿದು ಅಣ್ಣಾಮಲೈ ಪ್ರತಿಭಟಿಸಿದ್ದು ನಿಜವೇ?

