FACT CHECK | ರಂಜಾನ್ನಲ್ಲಿ ಮುಸ್ಲಿಂ ಕುಟುಂಬವೊಂದು ಮನೆ ಕೆಲಸದಾಕೆಗೆ ಊಟ ನೀಡದೆ ಹೊರಗೆ ನಿಲ್ಲಿಸಿದೆ ಎಂದು 2016ರ ಹಳೆಯ ಪೋಟೊ ಹಂಚಿಕೆ
ರೆಸ್ಟೋರೆಂಟ್ವೊಂದರಲ್ಲಿ ಕುಟುಂಬವೊಂದು ಊಟಕ್ಕೆ ಕುಳಿತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ರೆಸ್ಟೋರೆಂಟ್ನ ಒಂದು ಬದಿಯಲ್ಲಿ ಕುಟುಂಬವೊಂದು ಕುಳಿತಿದ್ದರೆ, ಇನ್ನೊಂದು ಬದಿಯಲ್ಲಿ ಹುಡುಗಿ ಕುಳಿತಿರುವುದನ್ನು ಚಿತ್ರದಲ್ಲಿ ನೋಡಬಹುದು. ಈ ಚಿತ್ರ ಪಾಕಿಸ್ತಾನದ್ದು ಎಂದು ಹೇಳಲಾಗುತ್ತಿದೆ. ಮನೆ ಕೆಲಸದಾಕೆಯನ್ನು ಪಕ್ಕಕ್ಕೆ ಕೂರಿಸಿಕೊಂಡು ಆಕೆಯನ್ನು ಊಟ ಮಾಡಲೂ ಹೇಳದೆ ಶ್ರೀಮಂತ ಕುಟುಂಬವೊಂದು ರೆಸ್ಟೊರೆಂಟ್ನಲ್ಲಿ ಊಟ ಮಾಡುತ್ತಿದೆ. ಈ ದೃಶ್ಯ ಪಾಕಿಸ್ತಾನದ್ದು ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
एक पैसे वाला पाकिस्तानी मुस्लिम परिवार डिनर कर रहा है और मैड को केबिन से बाहर बैठाया हुआ है, यह कल की घटना है, माहे रमजान के आखिरी 10 दिन चल रहे हैं, अगर उसे भी खाने की मेज पर बैठा कर कुछ खिला देते तो क्या गरीब हो जाते ?
यह पिक देख कर सोच रहा हूं क्या यह कौम जमीन पर रखने लायक… pic.twitter.com/dXKskcUFdr
— Nadeem Shaikh (@NadeemOnly_) March 25, 2025
ನದೀಮ್ ಶೇಖ್ ಎಂಬ ಎಕ್ಸ್ ಬಳಕೆದಾರರ ಈ ಫೋಟೊವನ್ನು ಹಂಚಿಕೊಂಡು, ‘ಪಾಕಿಸ್ತಾನದ ಶ್ರೀಮಂತ ಮುಸ್ಲಿಂ ಕುಟುಂಬವು ರೆಸ್ಟೋರೆಂಟ್ನಲ್ಲಿ ಮನೆ ಕೆಲಸದಾಕೆಯನ್ನು ಹೊರಗೆ ಕೂರಿಸಿ ತಾವು ಮಾತ್ರ ಊಟ ಮಾಡುತ್ತಿದ್ದಾರೆ. ಇದು ನಿನ್ನೆಯ ಘಟನೆ. ರಂಜಾನ್ ಕೊನೆಯ 10 ದಿನಗಳು ನಡೆಯುತ್ತಿದ್ದು, ಆಕೆಯನ್ನು ಊಟದ ಟೇಬಲ್ನಲ್ಲಿ ಕೂರಿಸಿಕೊಂಡು ಊಟ ನೀಡಿದ್ದರೆ, ಅವನು ಬಡನಾಗುತ್ತಿದ್ದನೇ? ಎಂದು ಬರೆದುಕೊಂಡಿದ್ದಾರೆ.
एक पैसे वाला पाकिस्तानी मुस्लिम परिवार डिनर कर रहा है और मैड को केबिन से बाहर बैठाया हुआ है,यह कल की घटना है,रमजान के आखिरी 10दिन चल रहे हैं,उसे भी खाने की मेज पर बैठा कर कुछ खिला देते तो क्या गरीब हो जाते?
यह पिक देख कर सोच रहा हूं क्या यह कौम जमीन पर रखने लायक भी है या नही ? pic.twitter.com/KDSpjsXay5— Sunil Kumar Singh (@skumarsir1998) March 26, 2025
ಈ ಚಿತ್ರವನ್ನು ಸುನೀಲ್ ಕುಮಾರ್ ಸಿಂಗ್ ಎಂಬ ವ್ಯಕ್ತಿ ಕೂಡ ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 2,ಜೂನ್ 2016 ರ ಇಂಡಿಯಾ ಟುಡೆಯ ಮಾಡಿದ ವರದಿ ಲಭ್ಯವಾಗಿದೆ. ಇಂಡಿಯಾ ಟುಡೆ ವರದಿಯ ಪ್ರಕಾರ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರಿಗೆ ಸಂಬಂಧಿಸಿದೆ. ಸುದ್ದಿಯ ಪ್ರಕಾರ, ರೇಣುಕಾ ಚೌಧರಿ ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಚಿತ್ರದಲ್ಲಿ, ರೇಣುಕಾ ಚೌಧರಿ ಅವರ ಕುಟುಂಬ ಡೈನಿಂಗ್ ಟೇಬಲ್ನಲ್ಲಿ ಕುಳಿತಿತ್ತು, ಆದರೆ ಮಗುವನ್ನು ನೋಡಿಕೊಳ್ಳುವ ಹುಡುಗಿ ಪಕ್ಕದಲ್ಲಿ ನಿಂತಿತ್ತು ಎಂದು ಉಲ್ಲೇಖಿಸಲಾಗಿದೆ.
ಈ ಸುದ್ದಿಯ ಕೊನೆಯಲ್ಲಿ, ಫೋಟೋವನ್ನು ಸಹ ಲಗತ್ತಿಸಲಾಗಿದೆ, ಅದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ಇದೇ ರೀತಿಯ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕುಟುಂಬವೊಂದು ಆಹಾರ ಸೇವಿಸುತ್ತಿರುವ ದೃಶ್ಯ ಹಾಗೂ ಸೇವಕಿಯನ್ನು ಪ್ರತ್ಯೇಕವಾಗಿ ಕೂರಿಸಲಾಗಿದೆ ಎಂದು ವರದಿಯಾಗಿದೆ. ಜನರು ಕೂಡ ಇದನ್ನು ಖಂಡಿಸಿದರು ಆದರೆ ವಾಸ್ತವವಾಗಿ ಏನು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
![]()
8 ಫೆಬ್ರವರಿ 2018 ರ ಫೇಸ್ಬುಕ್ ಲಿಂಕ್ ಲಭ್ಯವಾಗಿದ್ದು, ಈ ಚಿತ್ರವನ್ನು ರೇಣುಕಾ ಚೌಧರಿ ಅವರ ವಿವಾದಾತ್ಮಕ ಚಿತ್ರದೊಂದಿಗೆ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ನಲ್ಲಿ, ‘ಪ್ರೀತಿಯ ಶ್ರೀಮಂತರೇ. ನಿಮ್ಮ ಮನೆ ಕೆಲಸದಾಕೆಗೆ ಆಹಾರವನ್ನು ನೀಡಲಾಗದಿದ್ದರೆ, ದಯವಿಟ್ಟು ಅವರನ್ನು ರೆಸ್ಟೋರೆಂಟ್ಗೆ ಕರೆದೊಯ್ಯಬೇಡಿ, ಅವರಿಗೆ ಅವಮಾನ ಮಾಡಬೇಡಿ. ಅವರೂ ನಿಮ್ಮಂತೆಯೇ ಮನುಷ್ಯರು ಎಂದು ಬರೆದುಕೊಂಡಿದ್ದಾರೆ.
![]()
ಒಟ್ಟಾರೆಯಾಗಿ ಹೇಳುವುದಾದರೆ, ರೆಸ್ಟೋರೆಂಟ್ನಲ್ಲಿ ಮನೆ ಕೆಲಸದಾಕೆಯನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಮುಸ್ಲಿಂ ಕುಟುಂಬವೊಂದು ರಂಜಾನ್ ಸಂದರ್ಭದಲ್ಲಿ ಊಟ ನೀಡದೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬುದು ಸುಳ್ಳು. ವಾಸ್ತವವಾಗಿ ಈ ಚಿತ್ರ 2016ರಲ್ಲಿ ವೈರಲ್ ಆಗಿತ್ತು. ಹಾಗಾಗಿ ಈ ಚಿತ್ರ ಪಾಕಿಸ್ತಾನದ್ದು, ಮುಸ್ಲಿಂ ಕುಟುಂಬದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕರ್ತವ್ಯ ನಿರತ ಪೊಲೀಸರು BJP ನಾಯಕನ ಕಾಲಿಗೆ ನಮಸ್ಕರಿಸಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

