ಆಂಧ್ರದಲ್ಲಿ ರಮ್ಮಿ, ಪೋಕರ್ ಆನ್‌ಲೈನ್‌ ಜೂಜು ನಿಷೇಧ; ಆಡಿದರೆ ಆರು ತಿಂಗಳ ಜೈಲು

ಯುವಜನರನ್ನು ಅಡ್ಡದಾರಿಗೆಳೆಯುವ, ಜೂಜುಕೋರನ್ನಾಗಿಸುವ ಆನ್‌ಲೈನ್‌ ಜೂಜುಗಳಾದ ರಮ್ಮಿ ಮತ್ತು ಪೋಕರ್‌ನಂತಹ ಗೇಮ್‌ಗಳನ್ನು ಆಂಧ್ರಪ್ರದೇಶದಲ್ಲಿ ನಿಷೇಧಿಸಿ ಆದೇಶ ಹೊರಡಿಸಿರುವ ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರ, ಆನ್‌ಲೈನ್‌ ಜೂಜು ಆಡುವವರಿಗೆ ಆರು ತಿಂಗಳ ಜೈಲು ಶಿಕ್ಷೆ ಎಂದು ಘೋಷಿಸಿದೆ.

ಗುರುವಾರ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆನ್‌ಲೈನ್‌ ಜೂಜಾಟ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಎಪಿ ಗೇಮಿಂಗ್‌ ಕಾಯಿದೆ-1974 ಅನ್ನು ತಿದ್ದುಪಡಿ ಮಾಡಲು ಸಂಪುಟ ತೀರ್ಮಾನ ಕೈಗೊಂಡಿದೆ. ಆನ್‌ಲೈನ್ ಜೂಜಾಟ ಗೇಮ್‌ಗಳು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಆದ್ದರಿಂದ ನಾವು ಯುವಕರನ್ನು ರಕ್ಷಿಸಲು ಅಂತಹ ಎಲ್ಲಾ ಆನ್‌ಲೈನ್ ಜೂಜಾಟ ಗೇಮ್‌ಗಳು ನಿಷೇಧಿಸಲು ನಿರ್ಧರಿಸಿದ್ದೇವೆ ಎಂದು ಸಚಿವ ಪೆರ್ನಿ ವೆಂಕಟರಮಯ್ಯ ತಿಳಿಸಿದ್ದಾರೆ.

ಆನ್‌ಲೈನ್ ಜೂಜಾಟದ ಕಂಪನಿಗಳ ಮೊದಲ ಬಾರಿಯ ಅಪರಾಧಕ್ಕೆ ದಂಡ ವಿಧಿಸುವುದರ ಜೊತೆಗೆ ಒಂದು ವರ್ಷ ಜೈಲು ಶಿಕ್ಷೆ, ಎರಡನೇ ಅಪರಾಧಕ್ಕೆ ಎರಡು ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ, ಆನ್‌ಲೈನ್ ಜೂಜಾಟ ಆಡುವವರಿಗೂ ಸಹ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಾಗಿ ಸಚಿವರ ವೆಂಕಟರಮಯ್ಯ ತಿಳಿಸಿದ್ದಾರೆ.


ಇದನ್ನೂ ಓದಿ: ನಾವು ಅಸ್ಪೃಶ್ಯತೆಯನ್ನು ಮಡಿಲಲ್ಲಿ ಕಟ್ಟಿಕೊಂಡಿರುವವರು; ಒಳ ಮೀಸಲಾತಿ ಜಾರಿ ಮಾಡಿ: ಹೆಚ್‌ ಆಂಜನೇಯ

Spread the love

Leave a Reply

Your email address will not be published. Required fields are marked *