ನಾವು ಅಸ್ಪೃಶ್ಯತೆಯನ್ನು ಮಡಿಲಲ್ಲಿ ಕಟ್ಟಿಕೊಂಡಿರುವವರು; ಒಳ ಮೀಸಲಾತಿ ಜಾರಿ ಮಾಡಿ: ಹೆಚ್‌ ಆಂಜನೇಯ

ನಾವು ಮೂಲ ಅಸ್ಪೃಶ್ಯರು, ಅವಮಾನ, ಅಸ್ಪೃಶ್ಯತೆಯನ್ನು ಮಡಿಲಲ್ಲೇ ಕಟ್ಟಿಕೊಂಡು ಹುಟ್ಟಿದವರು. ಅಳಿವಿನ ಹಂಚಿನಲ್ಲಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿ, ಒಳ ಮೀಸಲಾತಿ ಜಾರಿ ಮಾಡಿ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಳ‌ಮೀಸಲಾತಿಗಾಗಿ ಇಪ್ಪತೈದು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಂತೋಷ್ ಹೆಗ್ಡೆಯವರ ಪೀಠದ ತೀರ್ಪನ ಬಳಿಕ ಈಗ ಬಂದಿರುವ ತೀರ್ಪು ನಮಗೆ ಸಮಾದಾನ ತಂದಿದೆ. ಇರುವ ಮೀಸಲಾತಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹಂಚಿಕೆ ಮಾಡಿ ಎಂದು ಕೇಳುತ್ತಿದ್ದೇವೆಯೇ ಹೊರತು, ಮೀಸಲಾತಿ ಹೆಚ್ಚು ಮಾಡಿ ಎಂದಲ್ಲ. ಎಲ್ಲರಿಗೂ ನಮ್ಮ ಸಮುದಾಯದ ಬಗ್ಗೆ ಕನಿಕರ ಇದೆ, ಈಗ ಅಧಿಕಾರದಲ್ಲಿರುವ ಮುಂಖ್ಯಮಂತ್ರಿ ಬಿಎಸ್ ಯಡಯೂರಪ್ಪನವರು ನಮ್ಮ ಜನಾಂಗದ ಮೇಲೆ ಕನಿಕರ ತೋರಬೇಕು ಎಂದು ತಿಳಿಸಿದರು.

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಒಳ ಮೀಸಲಾತಿ ಜಾರಿ ಮಾಡಲು ಸಿದ್ದರಾಮಯ್ಯಗೆ  ಒಲವಿತ್ತು, ಕೆಲವರು ಅಡ್ಡಿಪಡಿಸಿದರು. ನಮಗೆ ಚುನಾವಣೆಗಳಲ್ಲಿ ಜನಾಂಗದ ಪ್ರತಿನಿಧಿ ಎಂದು ಸ್ಥಾನಮಾನ ಕೊಡುತ್ತಾರೆ. ಹಾಗಾಗಿ ಜನಾಂಗದ ಹಿತಾಸಕ್ತಿ ಕಾಪಾಡದೇ ಇದ್ದರೆ ನಾವು ಯಾವ ಪ್ರತಿನಿಧಿಗಳು ಎಂದು ಅವರು ಹೇಳಿದ್ದಾರೆ.

ಬಳಿಕ ಮಾತನಾಡಿದ ಸಂಸದ ಎ. ನಾರಾಯಣಸ್ವಾಮಿ, ಯಾವುದೇ ಸಮಾಜದ ಮೀಸಲಾತಿ ವಿರುದ್ಧ ನಾವು ಇಲ್ಲ, ಸದಾಶಿವ ಆಯೋಗದ ವರದಿ ಅವೈಜ್ಞಾನಿಕ, ಅದರಲ್ಲಿ ಲಂಬಾಣಿ, ಭೋವಿ ಸಮುದಾಯದ ಮೀಸಲಾತಿ ಕೈ ಬಿಡಲಾಗಿದೆ‌ ಎಂಬ ಚರ್ಚೆ ಕೂಡಾ ನಡೆದಿತ್ತು. ವರದಿ ಮಂಡನೆಯೇ ಆಗದೆ ಯುವ ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ನಡೆದಿತ್ತು. 7 ಜನ ನ್ಯಾಯಾಧೀಶರ ಪೀಠದ ಆದೇಶ ಆಗಬೇಕು. ಮೀಸಲಾತಿ ವಂಚಿತ ಸಮುದಾಯ ದೇಶದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಗೆ ಗೊತ್ತಾಗಿದೆ. 1999 ರಲ್ಲಿ ಯೋಜನಾ ಆಯೋಗವು ಯಾವುದೇ ಯೋಜನೆ ರೂಪಿಸುವಾಗ ಜನಸಂಖ್ಯೆ ಆಧಾರದಲ್ಲಿ ಮಾಡಬೇಕು ಎಂದಿದೆ ಎಂದು ತಿಳಿಸಿದ್ದಾರೆ.

ಎಡಗೈ ಸಮುದಾಯಕ್ಕೆ 6 ಬಲಗೈ 5, ಭೋವಿ, ಲಂಬಾಣಿ ಸಮುದಾಯಗಳಿಗೆ ಶೇ. 3, ಮೀಸಲಾತಿ ವಂಚಿತರಿಗೆ ಶೇ.1ರಷ್ಟು ಮೀಸಲಾತಿ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights