ಹೈಕಮಾಂಡ್ ಗೆ ಬಿಸಿ ತುಪ್ಪವಾದ ಸಿದ್ದರಾಮಯ್ಯ ತಳಿದ ಮತ್ತೊಂದು ನಿಲುವು…!

ಹೊಸ ಸಾರಥಿಯನ್ನು ನೇಮಕ ಮಾಡುವಲ್ಲಿ ಹೈಕಮಾಂಡ್ ಅನುಸರಿಸುತ್ತಿರುವ ವಿಳಂಬ ನೀತಿ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಬಣಪ್ರತಿಷ್ಠೆ ಮುನ್ನೆಲೆಗ ಬರಲು ಕಾರಣವಾಗಿದೆ. ನಾಯಕರು ಪರಸ್ಪರರ ಕಾಲೆಳೆಯುವ ಕಾರ್‍ಯಕ್ಕೆ ಮುಂದಾಗಿದ್ದಾರೆ.

ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಗ್ಯಾರಂಟಿ ಎನ್ನುತ್ತಿರುವಾಗಲೇ ಕಾರ್‍ಯಾಧ್ಯಕ್ಷ ನೇಮಕದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಳೆದ ಬಿಗಿ ನಿಲುವು ಹೈಕಮಾಂಡ್‌ಗೆ ನುಂಗಲಾಗದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಈ ಮಧ್ಯೆ ಹೈಕಮಾಂಡಿನ ನಿರ್ಲಿಪ್ತ ಧೋರಣೆಯಿಂದಾಗಿ ರಾಜ್ಯದ ಕಾಂಗ್ರೆಸ್ ನಾಯಕರ ನಡುವೊನ ಮುಸುಕಿನ ಗುದ್ದಾಟ ಬಹಿರಂಗ ಸ್ವರೂಪ ಪಡೆದುಕೊಂಡಿದೆ. ಬೆಂಬಲಿಗರಿಗೆ ಕಾರ್‍ಯಾಧ್ಯಕ್ಷ ಸ್ಥಾನಕ್ಕೆ ಪಟ್ಟು ಹಾಗೂ ಸಿಎಲ್ಪಿ-ಪ್ರತಿಪಕ್ಷ ನಾಯಕನ ಹುದ್ದೆ ಬೇರ್ಪಡಿಕೆಗೆ ಸಿದ್ದು ಮೇಲೆ ಮೂಲ ನಿವಾಸಿಗಳು ಹರಿಹಾಯ್ದಿದ್ದಾರೆ.

ಮಾಜಿ ಡಿಸಿಎಂ ಜಿ. ಪರಮೇಶ್ವರ, ಹಿರಿಯ ನಾಯಕ ಎಚ್ಕೆ ಪಾಟೀಲ್, ಮುನಿಯಪ್ಪ ಸಿದ್ದರಾಮಯ್ಯ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಲ್ಪಿ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪರಮೇಶ್ವರ ಅವರು ಹುದ್ದೆ ಬೇರ್ಪಡಿಸಲು ಪಟ್ಟು ಹಿಡಿಯುವ ಮೂಲಕ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದಾರೆ.

ಇನ್ನು ಯಾವುದಾದರೋಮದು ಹುದ್ದೆಯ ನಿರೀಕ್ಷೆಯಲ್ಲಿರುವ ಎಚ್ಕೆ ಪಾಟೀಲರು ಸಹ ಸಿಎಲ್ಪಿ ಮತ್ತು ಪ್ರತಿಪಕ್ಷ ಸ್ಥಾನಗಳಿಗೆ ಪ್ರತ್ಯೇಕ ನಾಯಕರು ಬೇಕು ಎಂದಿದ್ದು, ಇದಕ್ಕೆ ಯುಪಿಡ ಹಾಗೂ ಮಹಾರಾಷ್ಟ್ರದಲ್ಲಿನ ಉದಾಹರಣೆ ನೀಡಿದ್ದಾರೆ.

ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾದಷ್ಟೂ ರಾಜ್ಯ ನಾಯಕರ ನಡುವಿನ ಬಣಜಗಳ ಬರುವ ದಿನಗಳಲ್ಲಿ ಇನ್ನಷ್ಟು ಕಾವು ಪಡೆಯುವುದಂತೂ ಸತ್ಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights