FACT CHECK | ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ RSS ಬ್ರಿಟಿಷರ ಪರವಾಗಿತ್ತು ಎಂದು ಎಡಿಟ್‌ ಮಾಡಿದ ಚಿತ್ರ ಹಂಚಿಕೆ

RSS ಸಮವಸ್ತ್ರ ಧರಿಸಿ ಸಾಲಾಗಿ ನಿಂತಿರುವ RSS ಸದಸ್ಯರು ರಾಣಿ ಎಲಿಜಬತ್‌ಗೆ ಗೌರವ ಸಮರ್ಪಿಸುವುದನ್ನುತೋರಿಸುವ ಫೋಟೊವನ್ನು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರವನ್ನು ಹಂಚಿಕೊಂಡ ಬಳಕೆದಾರರು, ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಆರ್‌ಎಸ್‌ಎಸ್ (RSS) ಸದಸ್ಯರು ಬ್ರಿಟಿಷ್ ರಾಣಿಗೆ ಗೌರವ ರಕ್ಷೆಯನ್ನು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

3 ಜನರು ಮತ್ತು ಪಠ್ಯ 'ब्रिटेन माता की जय| यह फोटो बड़ी मुश्किल से हाथ लगा है, हर फोन तक पहुंचना चाहिए। सब को पता चले देश का गद्दार कौन है| See Translation #जव पुरा देश अंग्रेजों से लड़ रहा था, तब #कुछ गद्दार इंगर्लेड कि रानी को #सलामी दे रहे थे, सुनां है इनके वंशज खुद को देशभक्त कहते हैं...' ಹೇಳುತ್ತಿದೆ ನ ಚಿತ್ರವಾಗಿರಬಹುದು

RSS ಸಂಘಪರಿವಾರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಬೂಟು ನೆಕ್ಕುತ್ತಿದ್ದರು ಎಂಬುದಕ್ಕೆ ಇದು ನಿದರ್ಶನ ಎಂಬ ಪ್ರತಿಪಾದನೆಯೊಂದಿಗೆ ಅದೇ ಚಿತ್ರವನ್ನು ಫೇಸ್‌ಬುಕ್ ಬಳಕೆದಾರರು ಸಹ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ. 

ಫ್ಯಾಕ್ಟ್‌ಚೆಕ್ :

ರಾಣಿ ಎಲಿಜಬತ್‌ಗೆ ವಿದೇಯರಾಗಿ ನಿಂತು ಗೌರವ ವಂದನೆ ನೀಡುತ್ತಿರುವ ಫೋಟೊವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 15, 2008 ರಂದು ಮಾವಲ್ ಜಾಗರಣ್‌ನಲ್ಲಿ ಪ್ರಕಟವಾದ ಲೇಖನವೊಂದು ಲಭ್ಯವಾಗಿದೆ.

ಈ ಲೇಖನದಲ್ಲಿ ಲಭ್ಯವಾಗಿರುವ ಫೋಟೊ ವೈರಲ್ ಚಿತ್ರವನ್ನೆ ಹೋಲುವಂತಹ ಫೋಟೊವನ್ನು ಒಳಗೊಂಡಿದೆ. ಈ ಚಿತ್ರದಲ್ಲಿ RSS ಸದಸ್ಯರು ಸಾಲಾಗಿ ನಿಂತಿರುವುದನ್ನು ತೋರಿಸಲಾಗಿದೆ, ಆದರೆ ಅವರ ಸಾಲಿನ ಮುಂದೆ ಯಾವುದೇ ರಾಣಿಯು ನಿಂತಿರುವುದು ಕಂಡುಬಂದಿಲ್ಲ. 

ವೈರಲ್ ಆಗಿರುವ ಚಿತ್ರದಲ್ಲಿ ಅಧಿಕಾರಿ ಮತ್ತು ರಾಣಿ ಎಲಿಜಬೆತ್ ಅವರ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆ ಫೋಟೋ 1956 ರದ್ದು ಎಂದು ತಿಳಿದುಬಂದಿದೆ. ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಫಿಲಿಪ್ ನೈಜೀರಿಯಾದ ರಾಜಮನೆತನದ ಪ್ರವಾಸದಲ್ಲಿದ್ದಾಗ, ರಾಣಿ ಎಲಿಜಬೆತ್ ಕಡುನಾ ವಿಮಾನ ನಿಲ್ದಾಣದಲ್ಲಿ ಒಂದು ರೆಜಿಮೆಂಟ್ ಅನ್ನು ಪರಿಶೀಲಿಸಿದರು ಎಂದು ಹೇಳಲಾಗಿದೆ.

ವೈರಲ್ ಆಗಿರುವ ಚಿತ್ರ ಮತ್ತು ಮೂಲ ಚಿತ್ರಗಳ ನಡುವಿನ ಹೋಲಿಕೆಯನ್ನು ಮೇಲೆ ನೋಡಬಹುದು. ವೈರಲ್ ಆಗಿರುವ ಚಿತ್ರವನ್ನು ಎಡಿಟ್‌ ಮಾಡಲಾಗಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಎರಡು ವಿಭಿನ್ನ ಚಿತ್ರಗಳನ್ನು ಸಂಯೋಜಿಸಲಾಗಿದೆ ಮತ್ತು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

Morphed Image Of RSS Members With British Queen Viral With False Claims |  BOOM

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಹೇಳಿರುವಂತೆ ಆರ್‌ಎಸ್‌ಎಸ್ ಸದಸ್ಯರು ಬ್ರಿಟಿಷ್ ರಾಣಿಗೆ ಗೌರವ ರಕ್ಷೆಯನ್ನು ನೀಡುತ್ತಿದ್ದಾರೆ ಎಂಬುದು ಸುಳ್ಳು. ಎರಡು ಬೇರೆ ಬೇರೆ ಫೋಟೊಗಳನ್ನು ಸಂಯೋಜಿಸಿ, ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚಲಿಸುವ ರೈಲಿಗೆ ಸಿಕ್ಕಿಹಾಕಿಕೊಳ್ಳುವ ನಾಯಿಯೊಂದು ಸಾವನಪ್ಪಿದೆಯಾ ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights