FACT CHECK | 60 ವರ್ಷದ ಮುಸ್ಲಿಂ ವ್ಯಕ್ತಿ ಯುವತಿಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆ ಎಂದು AI ಫೋಟೊ ಹಂಚಿಕೆ

ವೃದ್ಧ ಮುಸ್ಲಿಂ ವ್ಯಕ್ತಿ ಮತ್ತು ಗರ್ಭಿಣಿ ಯುವತಿಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಹೇಳಿಕೆಗಳೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದ್ದು, ಒಬ್ಬ ಬಳಕೆದಾರರು ವೈರಲ್ ಚಿತ್ರದಲ್ಲಿರುವ ವ್ಯಕ್ತಿ ಹುಡುಗಿಯ ಭಾವ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆ ಎಂದು ಬರೆದಿದ್ದಾರೆ.

@ArunKosli ಎಂಬ ಎಕ್ಸ್‌ ಬಳಕೆದಾರನೊಬ್ಬ ವೃದ್ಧ ಮತ್ತು ಹುಡುಗಿಯ ಚಿತ್ರವನ್ನು ಹಂಚಿಕೊಂಡು, ‘ಇದು ಮುಷರಫ್ ಮಿಯಾ’ ಎಂದು ಬರೆದಿದ್ದಾರೆ. ಅವನು ತನ್ನ 60 ನೇ ವಯಸ್ಸಿನಲ್ಲಿ ನಾದನಿ ಹಮೀದಾಳನ್ನು ಗರ್ಭಿಣಿಯನ್ನಾಗಿ ಮಾಡಿದನು. ಎಂದು ಪೋಸ್ಟ್‌ ಮಾಡಿದ್ದಾನೆ.

ಅದೇ ಸಮಯದಲ್ಲಿ, ಫನ್ನಿ ಮೀಮ್ಸ್ ಆಫ್ ನಾಗಾಲ್ಯಾಂಡ್ ಎಂಬ ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಪೊಸ್ಟ್‌ಅನ್ನು ಹಂಚಿಕೊಳ್ಳುವಾಗ ಮುಸ್ಲಿಂ ಸಮುದಾಯದ ಜನರನ್ನು ಕೆಟ್ಟವರಂತೆ ಬಿಂಬಿಸಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, pregunlimited ಎಂಬ ಹೆಸರಿನ Instagram ಪೇಜ್‌ ಲಭ್ಯವಾಗಿದೆ. ಈ ಪುಟದಲ್ಲಿ ಕೆಲವು ಪೋಸ್ಟ್‌ಗಳನ್ನು ಸರ್ಚ್ ಮಾಡಿದಾಗ, ಮಾರ್ಚ್ 10 ರಂದು ಅಪ್‌ಲೋಡ್ ಮಾಡಲಾದ ಪೋಸ್ಟ್‌ವೊಂದು ಕಂಡುಬಂದಿದೆ. ಇದರಲ್ಲಿ ಹಲವು ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿತ್ತು ಮತ್ತು ಆ ಪೋಸ್ಟ್‌ನ ಮೊದಲ ಚಿತ್ರ ವೈರಲ್ ಆದ ಫೋಟೋ ಆಗಿತ್ತು. ಆ ಪೋಸ್ಟ್‌ನ ಇತರ ಚಿತ್ರಗಳನ್ನು  ನೋಡಿದಾಗ, ಆ ವೃದ್ಧ ವ್ಯಕ್ತಿ ಇತರ ಅನೇಕ ಮಹಿಳೆಯರೊಂದಿಗೆ ಸಹ ಕಾಣಿಸಿಕೊಂಡಿರುವ ಪೋಟೊಗಳು ಒಳಗೊಂಡಿವೆ.

 

View this post on Instagram

 

A post shared by Pregnancy Unlimited (@pregunlimited)

ಈ Instagram ಪುಟವನ್ನು ಮತ್ತಷ್ಟು ಸರ್ಚ್ ಮಾಡಿದಾಗ, ಈ ಪುಟದಲ್ಲಿ AI ಫೋಟೋಗಳನ್ನು ಮಾತ್ರ ಪೋಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

View this post on Instagram

 

A post shared by Pregnancy Unlimited (@pregunlimited)

ಒಟ್ಟಾರೆಯಾಗಿ ಹೇಳುವುದಾದರೆ, ಭಾವ ತನ್ನ 60 ನೇ ವಯಸ್ಸಿನಲ್ಲಿ ನಾದಿನಿಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ, AI ನಿಂದ ರಚಿಸಿದ ನಕಲಿ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಈರೀತಿ ಹಂಚಿಕೊಳ್ಳುವಾಗ ಮುಸ್ಲಿಂ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿ, ಅವರ ಬಗ್ಗೆ ಸಮಾಜದಲ್ಲಿ ಅಗೌರವ ತರುವ ದುರುದ್ದೇಶದಿಂದ ಈ ರೀತಿ ಪೋಸ್ಟ್‌ಗಳನ್ನು ಮಾಡಲಾಗಿದೆ. ಇಂತವುಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವಕ್ಪ್‌ ತಿದ್ದುಪಡಿ ಮಸೂದೆ ಅಂಗೀಕಾರದ ಬೆನ್ನಲ್ಲೆ ಅಕ್ರಮ ಆಸ್ತಿಗಳ ವಿಚಾರಣೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights