FACT CHECK | ಸ್ಟ್ರೀಟ್‌ ಫುಡ್‌ ಅಂಗಡಿಯಲ್ಲಿ ಆಹಾರದ ಮೇಲೆ ಇಲಿಗಳು ಓಡಾಡುತ್ತಿರುವ ವಿಡಿಯೋ ನಕಲಿ

ಹಗಲು ಹೊತ್ತಿನಲ್ಲೆ ಫುಟ್‌ಪಾತ್‌ ನ ಅಂಗಡಿಯೊದರಲ್ಲಿ ಇರಿಸಿದ್ದ ಆಹಾರ ಪದಾರ್ಥಗಳ ಮೇಲೆ  ಇಲಿಗಳು ಓಡಾಡುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕಚೋರಿಗಳನ್ನು ತುಂಬಿರುವ ಪಾತ್ರೆಯ ಮೇಲೆ ಇಲಿಗಳು ಓಡಾಡುತ್ತರುವುದು ಕಂಡುಬಂದಿದೆ ಮತ್ತು ಅದು ಸಾಮಾಜಿಕ ಮಾಧ್ಯಮದಲ್ಲಿ ವಿಡಂಬನಾತ್ಮಕ ಶೀರ್ಷಿಕೆಗಳೊಂದಿಗೆ ವೈರಲ್ ಆಗುತ್ತಿದೆ, ಭಾರತದಲ್ಲಿ ಸ್ಟ್ರೀಟ್‌ ಫುಡ್‌ ತಿನ್ನುವುದು  ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಇದನ್ನು ತಪ್ಪಿಸಬೇಕು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://www.youtube.com/watch?v=3tSUunJhoiY&embeds_referring_euri=https%3A%2F%2Fwww.telugupost.com%2F&source_ve_path=MjM4NTE

ಹಲವು ಯೂಟ್ಯೂಬ್‌ಗಳಲ್ಲಿ ಈ ವಿಡಿಯೋವನ್ನು ಅಪ್‌ಲೋಡ್‌ ಮಾಡಿ, ಇಲಿಗಳು ತಿನ್ನುವ ಆಹಾರವನ್ನು ನೀವು ತಿನ್ನಬೇಕು ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದ ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 2024 ರಲ್ಲಿ ‘ಕಚೋರಿ ಯಾ ಗೋಲ್ಗಪ್ಪ’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ YouTube ವಿಡಿಯೋ ಲಭ್ಯವಾಗಿದೆ. ಸೆಪ್ಟೆಂಬರ್ 20, 2024 ರಂದು ದಾಲ್ ಕಚೋರಿ ಎಂಬ ಶೀರ್ಷಿಕೆಯೊಂದಿಗೆ Instagram ಬಳಕೆದಾರರು ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಚೋರಿಯನ್ನು ತಯಾರಿಸುವ ರಸ್ತೆ ಬದಿಯ ಅಂಗಡಿಯ ಮೂಲ ವೀಡಿಯೊಗಳು ಲಭ್ಯವಾಗಿದ್ದು,ಈ ವೀಡಿಯೊಗಳಲ್ಲಿ ಕಚೋರಿಯ ಪಾತ್ರೆಯಲ್ಲಿ ಯಾವುದೇ ಇಲಿ ಓಡಾಡುವುದು ಕಂಡುಬರುವುದಿಲ್ಲ.

‘ ಅಕ್ಟೋಬರ್ 2023 ರಲ್ಲಿ ಫಿರೋಜಾಬಾದ್‌ನಲ್ಲಿ  ಬಾಪ್ ವಾಲಾ ಕಚೋರಿ ಅಂಗಡಿ’ ಎಂಬ ಶೀರ್ಷಿಕೆಯೊಂದಿಗೆ ಮತ್ತೊಬ್ಬ YouTube ಬಳಕೆದಾರರು ಅದೇ ವೀಡಿಯೊ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲ ವೀಡಿಯೊಗಳಲ್ಲಿ ನಮಗೆ ಯಾವುದೇ ಇಲಿ ಕಂಡುಬಂದಿಲ್ಲ.

 

View this post on Instagram

 

A post shared by rajasthanifoodie (@rajasthanifoodie1)

ಮಾರ್ಚ್ 20, 2025 ರಂದು Instagram ನಲ್ಲಿ @aiwalafoodie ಎಂಬ ಬಳಕೆದಾರರು ಹಂಚಿಕೊಂಡ ಅದೇ ವೀಡಿಯೊಗೆ ಲಭ್ಯವಾಗಿದ್ದು, ಇದು AI ನಿಂದ ರಚಿಸಲ್ಪಟ್ಟಿದೆ ಎಂದು ಕಂಡುಬಂದಿದೆ. ಈ ಪೇಜನಲ್ಲಿ ಪೋಸ್ಟ್ ಮಾಡಲಾದ ಹಲವಾರು ರೀತಿಯ ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ, ಲೈಫ್ ಸ್ಟೈಲ್ ವೀಡಿಯೊಗಳನ್ನು AI ನಿಂದ ರಚಿಸಲಾಗಿದೆ ಎಂದು ಹೇಳುತ್ತದೆ.

ಮತ್ತಷ್ಟು ಸರ್ಚ್ ಮಾಡಿದಾಗ, ಅಕ್ಟೋಬರ್ 12, 2024 ರಂದು  YouTube ನಲ್ಲಿ ಮೂಲ ವೀಡಿಯೊ ಲಭ್ಯವಾಗಿದ್ದು, ಇದು ವೈರಲ್ ಆಗಿರುವ ಐದು ಸೆಕೆಂಡುಗಳ ಕ್ಲಿಪ್ ಅನ್ನು AI ಬಳಸಿ ಬದಲಾಯಿಸಲಾಗಿದೆ ಎಂದು ದೃಢಪಡಿಸುತ್ತದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾಷಣ ಮಾಡುವಾಗ ವ್ಯಕ್ತಿಯೊಬ್ಬ ಟ್ರಂಪ್ ತಲೆಗೆ ಹೊಡೆಯುತ್ತಿರುವಂತೆ ಎಡಿಟ್‌ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights