FACT CHECK | ಕಲ್ಲಂಗಡಿ ತಿನ್ನುವುದರಿಂದ ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆ ಆಗುತ್ತಾ?
ಬೇಸಿಗೆಯಲ್ಲಿ ಹೆಚ್ಚಿನ ಜನ ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಾರೆ, ಕಾರಣ ಅರಲ್ಲಿರುವ ನೀರಿನ ಅಂಶದಿಂದ ದಾಹ ತೀರುತ್ತದೆ. ಆದರೆ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಹೌದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಹೇಳಿರುವ ಪ್ರಕಾರ, ಕಲ್ಲಂಗಡಿ ಹಣ್ಣು ಸೇವನೆ ಮಾಡುವುದರಿಂದ ಕಣ್ಣುಗಳ ಆರೋಗ್ಯವು ವೃದ್ಧಿಯಾಗುತ್ತದೆ ಎಂದ ಹೇಳಲಾಗಿದೆ.
ಹಾಗಿದ್ದರೆ ವಿಡಿಯೋದಲ್ಲಿ ತಿಳಿಸಿರುವಂತೆ ಕಲ್ಲಂಗಡಿ ಹಣ್ನುಗಳನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯ ವೃದ್ದಿಸುತ್ತದೆ ಎಂಬ ಹೇಳಿಕೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯಂತೆ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಕಣ್ಣಿನ ಆರೋಗ್ಯ ವೃದ್ದಿಸುತದೆಯೇ ಎಂದು ತಿಳಿಯಲು ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದ್ದು ಪ್ರತಿ ದಿನ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ಸುಳ್ಳು ಎಂದು ಆಹಾರ ತಜ್ಞೆ ಮತ್ತು ಪ್ರಮಾಣೀಕೃತ ಮಧುಮೇಹ ಶಿಕ್ಷಣತಜ್ಞೆ ಪೂಜಾ ಶಾ ಭಾವೆ (CDE, MSc. CND, BSc. FSN) ಅವರು ಹೇಳಿದ್ದಾರೆ.
![]()
ಆಹಾರ ತಜ್ಞೆ ಮತ್ತು ಪ್ರಮಾಣೀಕೃತ ಮಧುಮೇಹ ಶಿಕ್ಷಣತಜ್ಞೆ ಪೂಜಾ ಶಾ ಭಾವೆ (CDE, MSc. CND, BSc. FSN) ಅವರು ಕಲ್ಲಂಗಡಿ ಹಣ್ಣು ತಿಂದರೆ ಕಣ್ಣಿನ ಸಮಸ್ಯೆ ಬರದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ! ಹೀಗಾಗಿ ಇದು ಆಧಾರ ರಹಿತ ಮಾಹಿತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಲ್ಲಂಗಡಿ ಹಣ್ಣು ಸೇವನೆ ಮಾಡುವುದರಿಂದ ಕಣ್ಣು ಮಸುಕಾಗುವಿಕೆ ಅಥವಾ ಕಣ್ಣಿನಲ್ಲಿ ಪೊರೆ ಕಾಣಿಸಿಕೊಳ್ಳುವಿಕೆ ಸಮಸ್ಯೆ ದೂರವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಈ ಹಣ್ಣನ್ನು ಮಿತವಾಗಿ ಸೇವನೆ ಮಾಡುವುದ ರಿಂದ, ದೇಹಕ್ಕೆ ಶಕ್ತಿ ಹಾಗೂ ಮನಸ್ಸಿಗೆ ತಾಜಾತನವನ್ನು ನೀಡುವಲ್ಲಿ ಇದು ಸದಾ ಮುಂದಿದೆ. ಇನ್ನು 92% ನೀರಿನ ಅಂಶ ತುಂಬಿರುವ ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಸಹ ದೇಹಕ್ಕೆ ಅಗತ್ಯವಾಗಿ ಬೇಕಾದ ರೀತಿಯಲ್ಲಿ ಸಿಗುತ್ತವೆ.

ಕಣ್ಣುಗಳಿಗೆ ತಂಪಾದ ಪ್ರಭಾವವನ್ನು ಉಂಟು ಮಾಡುವಂತಹ ಪೋಷಕಾಂಶಗಳು ಈ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಹಣ್ಣಿನಲ್ಲಿ ಪ್ರಮುಖವಾಗಿ ಲೈಕೋಪೀನ್ ಅನ್ನು ಹೊಂದಿರುತ್ತದೆ, ಇದು ಉತ್ಕರ್ಷಣ ನಿರೋಧಕವಾಗಿದ್ದು ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ವಿಳಂಬಗೊಳಿಸುತ್ತದೆ. ಕಲ್ಲಂಗಡಿ ವಿಟಮಿನ್ ಎ ಮತ್ತು ಸಿ ಅನ್ನು ಸಹ ಹೊಂದಿದೆ, ಇದು ಆರೋಗ್ಯಕರ ಕಣ್ಣುಗಳು ಮತ್ತು ದೃಷ್ಟಿಗೆ ಅವಶ್ಯಕವಾಗಿದೆ.
ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗುವುದಿಲ್ಲ ಮತ್ತು ಯಾವುದೇ ಸೂಪರ್‌ಫುಡ್ ಅದನ್ನು ತಡೆಯಲು ಸಾಧ್ಯವಿಲ್ಲ!ಇದರ ಹಿಂದಿನ ಕಾರಣಗಳು , ಕಣ್ಣಿನ ಪೊರೆ, ಗ್ಲುಕೋಮಾ, ಮಧುಮೇಹ ರೆಟಿನೋಪತಿ, ಅಧಿಕ ರಕ್ತದೊತ್ತಡ ರೆಟಿನೋಪತಿ ಅಥವಾ ಸರಳವಾಗಿ ಸಂಕುಚಿತಗೊಂಡ ಕನ್ನಡಕಗಳಾಗಿರಬಹುದು ಈ ಪರಿಸ್ಥಿತಿಗಳಿಗೆ ವೈದ್ಯಕೀಯ ರೋಗನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಆಹಾರದಿಂದ ಮಾತ್ರ ಅವುಗಳನ್ನು ಸುಧಾರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ಕಲ್ಲಂಗಡಿ ಹಣ್ಣು ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ ಎಂಬ ಹೇಳಿಕೆಯು ಸಜಾಗ್ ಫ್ಯಾಕ್ಟ್ ಚೆಕ್ ತಂಡದ ತನಿಖೆಯಲ್ಲಿ ಸುಳ್ಳು ಎಂದು ಕಂಡುಬಂದಿದೆ. ದೃಷ್ಟಿ ಮಸುಕಾಗಿದ್ದರೆ ಅಥವಾ ಕಣ್ಣುಗಳಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡರೆ, ಕಣ್ಣಿನ ವೈದ್ಯರನ್ನು ಸಂಪರ್ಕಿಸಬೇಕು. ಕಲ್ಲಂಗಡಿ ತಿನ್ನುವುದು ಕಣ್ಣುಗಳು ಸೇರಿದಂತೆ ಇಡೀ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ಅದನ್ನು ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸ್ಟ್ರೀಟ್ ಫುಡ್ ಅಂಗಡಿಯಲ್ಲಿ ಆಹಾರದ ಮೇಲೆ ಇಲಿಗಳು ಓಡಾಡುತ್ತಿರುವ ವಿಡಿಯೋ ನಕಲಿ

