FACT CHECK | ಭಾರತ ಸರ್ಕಾರ ಸಲಹಾ ಪತ್ರಗಳನ್ನು ಪ್ರಕಟಿಸಿದೆ ಎಂದು ನಕಲಿ ಪೋಸ್ಟ್‌ ಹಂಚಿಕೆ

ಭಾರತ ಸರ್ಕಾರದ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಲಹಾ ಪತ್ರವೊಂದು ಪ್ರಸಾರವಾಗುತ್ತಿದೆ. ಸಲಹಾ ಪತ್ರದಲ್ಲಿ, ದೇಶದಲ್ಲಿ ಉಂಟಾಗಿರುವ ಗಡಿ ಪ್ರದೇಶದ ಉದ್ವಿಗ್ನ ಸ್ಥಿತಿಯ ಹಿನ್ನೆಲೆಯಲ್ಲಿ ಎಲ್ಲರೂ ಶಾಂತವಾಗಿರುವುದರ ಜೊತೆಗೆ ಮನೆಯಲ್ಲಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡುವಂತೆ ಸರ್ಕಾರ ಸೂಚಿಸಿದೆ ಎಂದು ಹೇಳಲಾಗಿತ್ತು.

The stamp of a fake on an image of an advisory being shared online claims that the Government has urged individuals to take precautionary measures and keep essential items ready at home.

ಈ ಸಲಹಾ ಪತ್ರದಲ್ಲಿ ಮನೆಯಲ್ಲಿ ಕನಿಷ್ಠ ₹50,000 ನಗದು, ಎರಡು ತಿಂಗಳಿಗೆ ಸಾಕಾಗುವ ಔಷಧಿಗಳು, ಆಹಾರ, ನೀರು, ಟಾರ್ಚ್ ಲೈಟ್, ಪವರ್ ಬ್ಯಾಂಕ್ ಮುಂತಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡುವಂತೆ ತಿಳಿಸಲಾಗಿತ್ತು. ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಹಾಗಿದ್ದರೆ ಸರ್ಕಾರ ಇಂತಹ ಪ್ರಕಟಣೆಯನ್ನು ಹೊರಡಿಸಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಇಂತಹ ಯಾವುದೇ ಸಲಹೆಯನ್ನು ಸರ್ಕಾರವು ನೀಡಿಲ್ಲ ಎಂದು ಪಿಐಬಿ ಸ್ಪಷ್ಟವಾಗಿ ತಿಳಿಸಿದೆ.

ಪಿಐಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಜನರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. “ಈ ಸುಳ್ಳು ಮಾಹಿತಿಯನ್ನು ನಂಬಬೇಡಿ. ಕೇವಲ ಸರ್ಕಾರದ ಅಧಿಕೃತ ಮೂಲಗಳಿಂದ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ” ಎಂದು ಪಿಐಬಿ ಸಲಹೆ ನೀಡಿದೆ.

ಪಿಐಬಿ ಫ್ಯಾಕ್ಟ್ ಚೆಕ್ ಘಟಕವು ಈ ಸುಳ್ಳು ಸಲಹಾ ಪತ್ರದ ಬಗ್ಗೆ ಎಚ್ಚರಿಕೆ ನೀಡುವ ಜೊತೆಗೆ, ಜನರಿಗೆ ಜಾಗೃತರಾಗಿರುವಂತೆ ಮತ್ತು ಸರ್ಕಾರದ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಕರೆ ನೀಡಿದೆ. ಸುಳ್ಳು ಸುದ್ದಿಗಳ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಪಿಐಬಿ ಮನವಿ ಮಾಡಿದೆ.

ಪಿಐಬಿ ಸಲಹೆ:

  • ಸರ್ಕಾರದ ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿಯನ್ನು ಪಡೆಯಿರಿ.
  • ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳಬೇಡಿ.
  • ಸುಳ್ಳು ಮಾಹಿತಿಯಿಂದ ಜಾಗೃತರಾಗಿರಿ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ಸರ್ಕಾರ ಯಾವುದೇ ಸಲಹಾ ಪತ್ರದ ಮೂಲಕ ಯಾವುದೇ ಸಂದೇಶಗಳನ್ನು ನೀಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ನಕಲಿ. ಹಾಗಾಘಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕ್ ನೀರನ್ನು ತಡೆಯಲು ಹೋಗಿ ಭಾರತದ ಅಣೆಕಟ್ಟು ಕುಸಿದಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights