FACT CHECK | ಇಸ್ತಾನ್ಬುಲ್ ಕಾಂಗ್ರೆಸ್ ಸೆಂಟರ್ಅನ್ನು ಟರ್ಕಿಯಲ್ಲಿ ಕಾಂಗ್ರೆಸ್ ಕಚೇರಿ ಎಂದು ಸುಳ್ಳು ಹೇಳಿದ ಅರ್ನಬ್ ಗೋಸ್ವಾಮಿ
ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ ಎಂದು ಸುದ್ದಿಯನ್ನು ಪ್ರಸಾರ ಮಾಡಲಾಗುತ್ತಿದೆ. “ವೀಕ್ಷಕರೇ, ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಟರ್ಕಿಯಲ್ಲಿ ಕಾಂಗ್ರೆಸ್ ಗೇನು ವ್ಯವಹಾರ?” ಎಂದು ತಮ್ಮ ಟಿವಿ ವಾಹಿನಿಯ ಪ್ರಸಾರದ ವೇಳೆ ಅರ್ನಬ್ ಗೋಸ್ವಾಮಿ ಅವರು ಪ್ರಶ್ನಿಸುತ್ತಿರುವ ವೀಡಿಯೊ ವೈರಲ್ ಆಗಿದೆ.
Did you know that the Congress Party has a registered office in Turkey? Can Rahul Gandhi explain what necessitated this move? This is bizarre and inexplicable on multiple levels. India deserves to know.
Remember: the enemy’s friend is an enemy too. pic.twitter.com/lOnPrS5SpY
— Amit Malviya (@amitmalviya) May 17, 2025
ರಿಪಬ್ಲಿಕ್ ಟಿವಿ ಇಸ್ತಾನ್ಬುಲ್ನಲ್ಲಿರುವ “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ಹೇಳಿಕೊಂಡಿರುವ ವಿಡಿಯೋವನ್ನು BJP ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದು, “ರಾಹುಲ್ ಗಾಂಧಿ ಅವರು ಇದರ ಬಗ್ಗೆ ವಿವರಿಸಬಹುದೇ? ಇದು ವಿಲಕ್ಷಣ ಸಂಗತಿ. ಇದನ್ನು ವಿವರಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಭಾರತವು ತಿಳಿದುಕೊಳ್ಳಲು ಬಯಸುತ್ತಿದೆ. ನೆನಪಿಡಿ: ಶತ್ರುವಿನ ಸ್ನೇಹಿತ ಕೂಡ ಶತ್ರು”, ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಹೇಳಿರುವ ಕಚೇರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಆಲ್ಟ್ ನ್ಯೂಸ್ನ ಸಹ-ಸಂಸ್ಥಾಪಕ, ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೇರ್ ತಮ್ಮ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ. ಅರ್ನಬ್ ಗೋಸ್ವಾಮಿ ಅವರ ಸುಳ್ಳು ಹೇಳಿಕೆಯನ್ನು ಬಯಲಿಗೆಳೆದಿದ್ದಾರೆ. ಬಿಜೆಪಿ ಐಟಿ ಸೆಲ್ ನ ಅಮಿತ್ ಮಾಳವೀಯ ಅವರು ಹಂಚಿಕೊಂಡಿರುವ ಗೋಸ್ವಾಮಿ ಅವರ ಹೇಳಿಕೆಯ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಝುಬೇರ್ ಪೋಸ್ಟ್ ಮಾಡಿದ್ದಾರೆ.
Arnab shows ‘Istanbul Congress Center’ and claims it to be the Congress office. pic.twitter.com/YTlbuvcZTK
— Mohammed Zubair (@zoo_bear) May 19, 2025
ಫ್ಯಾಕ್ಟ್ ಚೆಕಿಂಗ್ ವೆಬ್ ಸೈಟ್ ಆಲ್ಟ್ ನ್ಯೂಸ್ನ ಸಹ-ಸಂಸ್ಥಾಪಕ ಮುಹಮ್ಮದ್ ಝುಬೇರ್ ಝುಬೇರ್, ಗೋಸ್ವಾಮಿ ಉಲ್ಲೇಖಿಸಿದ ಸ್ಥಳವು ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್ ಆಗಿದೆ. ಇದು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ, ಸಾಮಾಜಿಕ, ಸಾಂಸ್ಕೃತಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಸಿದ್ಧ ಸಮಾವೇಶ ಕೇಂದ್ರವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಇನ್ನು ಟರ್ಕಿಯ ಇಸ್ತಾನ್ಬುಲ್ನಲ್ಲಿ ಕಾಂಗ್ರೆಸ್ ಕಚೇರಿ ಇದೆಯೇ ಎಂದು ನಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ಸೈಟ್ ಮತ್ತು ಇತರ ವಿಶ್ವಾಸಾರ್ಹ ಮೂಲಗಳಲ್ಲಿ ಪರಿಶೀಲನೆ ನಡೆಸಿದೆವು ಆದರೆ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕಾಂಗ್ರೆಸ್ನ ಯಾವ ವೆಬ್ಸೈಟ್ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಅಧಿಕೃತ ಮಾಹಿತಿಗಳಲ್ಲಿ ಕೂಡ ಈ ಫೋಟೋದಲ್ಲಿರುವ ಕಚೇರಿಯೇ ಟರ್ಕಿಯಲ್ಲಿನ ಕಾಂಗ್ರೆಸ್ ಕಚೇರಿ ಎಂದು ಉಲ್ಲೇಖಿಸಿರುವುದು ಕಂಡು ಬಂದಿಲ್ಲ. ಇನ್ನು 2019ರಲ್ಲಿ ಕಾಂಗ್ರೆಸ್ ತನ್ನ ಕಚೇರಿಯನ್ನು ಟರ್ಕಿಯಲ್ಲಿ ತೆರೆದಿದೆ ಎನ್ನುವ ಗುಮಾನಿ ಇದ್ದರು ಅದಕ್ಕೆ ನಿಖರವಾದ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ. ಹಾಗಾಗಿ ರಿಪಬ್ಲಿಕ್ ಟಿವಿಯ ವೈರಲ್ ಪ್ರತಿಪಾದನೆ ಸುಳ್ಳಾಗಿದೆ.

ಬಿಜೆಪಿಯ ಹಿರಿಯ ನಾಯಕ ವಿಜಯ್ ಜಾಲಿ ಅವರ ಪೋಸ್ಟ್ ಅನ್ನು ಮುಹಮ್ಮದ್ ಝುಬೈರ್ ಉಲ್ಲೇಖಿಸಿದ್ದಾರೆ. ಪೋಸ್ಟ್ ನಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೋಗನ್ ಅವರು ಬಿಜೆಪಿಯ ಶಾಲು ಧರಿಸಿರುವುದು ಕಂಡು ಬರುತ್ತದೆ.
BTW, Here is a 2018 facebook post by BJP leader Vijay Jolly. Turkish President Tayyip Erdogan was presented with a BJP scarf by Shri Vijay Jolly, former Convenor of BJP’s Foreign Cell. pic.twitter.com/kclnyDn6jM
— Mohammed Zubair (@zoo_bear) May 19, 2025
ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳ ಬಳಕೆದಾರು ಅರ್ನಬ್ ಗೋಸ್ವಾಮಿಯನ್ನು ಟೀಕಿಸಿದ್ದಾರೆ. “ಅರ್ನಬ್ ಅವರ ಸುದ್ದಿಯನ್ನು ಆನಂದಿಸುವ ಜನರು ಇದಕ್ಕೆ ಅರ್ಹರು!” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ರಾಷ್ಟ್ರವು ಇದನ್ನು ತಿಳಿದುಕೊಳ್ಳಲು ಬಯಸುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ,ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಟರ್ಕಿಯ ಇಸ್ತಾನ್ಬುಲ್ನಲ್ಲಿರುವ ಕಾಂಗ್ರೆಸ್ ಕಚೇರಿ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗು ಯಾವುದೇ ರೀತಿಯಾದ ಸಂಬಂಧವಿಲ್ಲ. ಈ ವೈರಲ್ ಫೋಟೋ ಟರ್ಕಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾಂಗಣವಾಗಿದೆ. ಇದನ್ನು ಸುಳ್ಳು ಮಾಹಿಯೊಂದಿಗೆ ರಿಪಬ್ಲಿಕ್ ಟಿವಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪ್ರವಾಸವನ್ನು ರದ್ದು ಮಾಡಬೇಡಿ ಎಂದು ಭಾರತೀಯ ಪ್ರವಾಸಿಗರಲ್ಲಿ ಮನವಿ ಮಾಡ್ತಾ ಟರ್ಕಿ?

