FACT CHECK | ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಜೊತೆ ಜ್ಯೋತಿ ಮಲ್ಹೋತ್ರಾ ! ವೈರಲ್ ಫೋಟೊದ ಅಸಲೀಯತ್ತೇನು?

ಹರಿಯಾಣದ ಟ್ರಾವೆಲ್ ವ್ಲಾಗರ್ ಮತ್ತು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹಿಸಾರ್ ಪೊಲೀಸರು ಮೇ 17, 2025 ರಂದು ಬಂಧಿಸಿದರು. ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಿದ ವೇದಿಕೆಗಳನ್ನು ಬಳಸಿಕೊಂಡು ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.

5 ಜನರು, ಗಡ್ಡ ಮತ್ತು ಜನರ ಮುಗುಳುನಗೆ ನ ಚಿತ್ರವಾಗಿರಬಹುದು

ಇದೆ ಸಂದರ್ಭದಲ್ಲಿ, ಜ್ಯೋತಿ ಮಲ್ಹೋತ್ರಾ ಅವರ ಒಂದೆರಡು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ಫೋಟೋಗಳಲ್ಲಿ, ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಜ್ಯೋತಿ ಮಲ್ಹೋತ್ರಾ ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.

ಪ್ರಮುಖವಾಗಿ ಬಲಪಂಥೀಯ ಸಾಮಾಜಿಕ ಜಾಲತಾಣದ ಖಾತೆಗಳು “ಕಾಂಗ್ರೆಸ್‌ನದ್ದು ಪಾಕಿಸ್ತಾನ ಪರವಾದ ನಿಲುವು, ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಜ್ಯೋತಿ ಮೆಲ್ಹೋತ್ರಾ ಜೊತೆ ಇರುವ ಫೋಟೋ ಇದಾಗಿದೆ. ಈಗ ಕಾಂಗ್ರೆಸ್‌ನ ನಿಲುವು ಏನು ಎಂಬುದು ಸ್ಪಷ್ಟವಾಗಿದೆ ಎಂಬಂತಹ ವಿವಿಧ ರೀತಿಯ ಬರಹಗಳೊಂದಿಗೆ ವೈರಲ್ ಫೋಟೋವನ್ನು ಶೇರ್ ಮಾಡಲಾಗುತ್ತಿದೆ. ಫೋಟೋಗಳಲ್ಲಿ ಕೂಡ ರಾಹುಲ್ ಗಾಂಧಿಯೊಂದಿಗೆ ಜ್ಯೋತಿ ಮೆಲ್ಹೋತ್ರಾ ಇರುವಂತೆ ಕಂಡು ಬಂದಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 3 ಅಕ್ಟೋಬರ್ 2019 ರಂದು “ಸೋನಿಯಾ ಗಾಂಧಿಯವರ ಭದ್ರಕೋಟೆಯಲ್ಲಿ ಕಾಂಗ್ರೆಸ್ ಬಂಡಾಯವನ್ನು ಎದುರಿಸುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ  ಡೆಕ್ಕನ್ ಹೆರಾಲ್ಡ್ ಪತ್ರಿಕೆ ಪ್ರಕಟಿಸಿದ ವರದಿಲಭ್ಯವಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಅವರ ಜೊತೆ ಅದಿತಿ ಸಿಂಗ್ ಎಂದು ಪ್ರೊಫೈಲ್ ಫೋಟೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದು ವೈರಲ್ ಫೋಟೋವಿನ ಮೂಲ ಫೋಟೋವಾಗಿದ್ದು, ಅದಿತಿ ಸಿಂಗ್ ಅವರ ಫೋಟೋವನ್ನು ಎಡಿಟ್ ಮಾಡಿ ಜ್ಯೋತಿ ಮಲ್ಹೋತ್ರಾ ಅವರ ಮುಖವನ್ನು ಅಳವಡಿಸಲಾಗಿರುವುದು ಸ್ಪಷ್ಟವಾಗಿದೆ. ಹಾಗಾಗಿ ಮೊದಲ ಫೋಟೋ ಎಡಿಟೆಡ್ ಎಂಬುದು  ಖಚಿತವಾಗಿದೆ.

ಎರಡೂ ಫೋಟೋಗಳನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ. ಮೊದಲ ಫೋಟೋ ಮೂಲತಃ ರಾಯ್ ಬರೇಲಿಯ ರಾಜಕಾರಣಿ ಅದಿತಿ ಸಿಂಗ್ ಅವರನ್ನು ರಾಹುಲ್ ಗಾಂಧಿ ಅವರೊಂದಿಗೆ ತೋರಿಸುತ್ತಿದೆ.

AI-ಆಧಾರಿತ ಫೇಸ್ ಸ್ವಾಪ್ ಟೂಲ್ ಅನ್ನು ಬಳಸಿ, ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬ ವ್ಯಕ್ತಿಯ ಮುಖಕ್ಕೆ ಸರಳವಾಗಿ ಸೇರಿಸಲು ಅವಕಾಶ ಮಾಡಿಕೊಡುತ್ತದೆ. ಅದನ್ನು ಬಳಸಿಕೊಂಡು ಅದಿತಿ ಸಿಂಗ್ ಅವರ ಮುಖವನ್ನು ಜ್ಯೋತಿ ಮಲ್ಹೋತ್ರಾ ಅವರ ಮುಖದೊಂದಿಗೆ ಬದಲಾಯಿಸಲಾಗಿದೆ.

ಎರಡನೇ ಫೋಟೋ 2022 ರ ಸೆಪ್ಟೆಂಬರ್ 18 ರಂದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿದ್ದಾಗ, ಕೇರಳದ ಅಲಪ್ಪುಳದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶುಭಾಶಯ ತಿಳಿಸುತ್ತಿರುವುದನ್ನು ತೋರಿಸುತ್ತದೆ.  ಎರಡೂ ಫೋಟೋಗಳಲ್ಲಿ, ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ಜ್ಯೋತಿ ಮಲ್ಹೋತ್ರಾ ಅವರ ಮುಖದೊಂದಿಗೆ ಮಹಿಳೆಯ ಮುಖವನ್ನು ಬದಲಾಯಿಸಲಾಗಿದೆ, ಅವರು ರಾಹುಲ್ ಗಾಂಧಿಯವರ ಪಕ್ಕದಲ್ಲಿ ಇದ್ದಾರೆ ಎಂದು ತಪ್ಪಾಗಿ ತೋರಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಹೇಳಿಕೆ ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ಫೋಟೋವನ್ನು ಪರಿಶೀಲಿಸಿದಾಗ, ಈ ಎರಡು ಫೋಟೋಗಳಲ್ಲಿ ಇರುವ ಕಾಂಗ್ರೆಸ್‌ನ ಮಹಿಳಾ ನಾಯಕಿಯರ ಫೋಟೊವನ್ನು, ಪಾಕಿಸ್ತಾನದ ಪರ ಗೂಢಚಾರ ನಡೆಸಿದ ಆರೋಪಿ ಜ್ಯೋತಿ ಮೇಲ್ಹೋತ್ರಾ ಫೋಟೊದೊಂದಿಗೆ ಬದಲಾಯಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ಮಾಡಿದ ಹಳೆಯ ವಿಡಿಯೋನ್ನು ಇತ್ತೀಚಿನದ್ದು ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights