FACT CHECK | ಗಾಂಧಿ ಪ್ರತಿಮೆಗೆ ಯಾರೋ ಹಾಕಿದ್ದ ದುಡ್ಡನ್ನು ತೆಗೆದು ಜೇಬಿನಲ್ಲಿ ಇಟ್ಟುಕೊಂಡ್ರಾ ರಾಹುಲ್ ಗಾಂಧಿ?

ರಾಹುಲ್ ಗಾಂಧಿ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ರಾಹುಲ್ ಗಾಂಧಿ ಗಾಂಧಿ ಸಮಾಧಿ ಮುಂದೆ ಹಾಕಿರುವ ನಾಣ್ಯವನ್ನು ತೆಗೆದುಕೊಂಡು ತಮ್ಮ ಜೇಬಿನಲ್ಲಿ ಇರಿಸಿಕೊಂಡಿದ್ದಾರೆ, ಇಂತಹ ಗತಿ ಇವರಿಗೆ ಬರಬಾರದಿfತು ಎಂಬ ವ್ಯಂಗ್ಯದ ರೀತಿಯಲ್ಲಿ ಹೇಳಿಕೊಂಡು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಉದಯ್ ಬಾನು ಎಂಬ ಫೇಸ್‌ಬುಕ್ ಬಳಕೆದಾರನೊಒಬ್ಬ ವಿಡಿಯೋವನ್ನು ಹಂಚಿಕೊಂಡು” ಹುಟ್ಟು ಗುಣ ಘಟ್ಟ ಹತ್ತಿದರೂ ಬಿಡದು* ಎನ್ನುವ ಮಾತಿದೆ… ಇಲ್ಲಿ ನೋಡಿ ಈತ ಗಾಂಧಿ ಪ್ರತಿಮೆಯ ಮುಂದೆ ಯಾರೋ ಹಾಕಿದ ಕಾಣಿಕೆಯನ್ನು ತನ್ನ *ಜೇಬಿಗೆ ಇಳಿಸಿದ್ದಾನೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ಕರ್ನಾಟಕ ಎಂಬ ಫೇಸ್‌ಬುಕ್ ನಲ್ಲೂ ಇದೇ ರೀತಿಯ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಯೋಗೇಶ್ ಬಾಬು ಎಂಬ ಫೇಸ್‌ಬುಕ್ ಬಳಕೆದಾರರು, ಬಿಜೆಪಿ ಕರ್ನಾಟಕ ಎಂಬ ಫೇಸ್‌ಬುಕ್ ನಲ್ಲಿ  ಪೋಸ್ಟ್‌ ಮಾಡಿದ ಅದೇ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅದನ್ನು ಇಲ್ಲಿ ನೋಡಬಹುದು.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ನೋಡಬಹುದು. ವೈರಲ್ ವಿಡಿಯೋದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಣಬಹುದು. ವಿಡಿಯೋದಲ್ಲಿ ರಾಹುಲ್ ಗಾಂಧಿ ಸಮಾದಿಯಿಂದ ಯಾವುದೋ ವಸ್ತುವನ್ನು ತಗೆದು ತಮ್ಮ ಜೇಬಿನಲ್ಲಿ ಇರಿಸಿಕೊಳ್ಳುವುದನ್ನು ಕಾಣಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯಂತೆ ಗಾಂಧಿ ಪ್ರತಿಮೆಗೆ ಯಾರೋ ಹಾಕಿರುವ ಹಣವನ್ನು ತಮ್ಮ ಜೇಬಿಗೆ ಇರಿಸಿಕೊಂಡಿರುವುದು ನಿಜವೇ ಎಂದು ಪರಿಶೀಲಿಸಲು, ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಇಂಡಿಯಾ ಟುಡೆ ಗ್ಲೋಬಲ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡಿ ಮಾಡಲಾದ 3ಗಂಟೆಗೂ ಹೆಚ್ಚು ಸುಧೀರ್ಘವಾಗಿರುವ ವಿಡಿಯೋ ಲಭ್ಯವಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ಕಿರಿಯ ಪ್ರಧಾನಿ ಮತ್ತು ರಾಷ್ಟ್ರವನ್ನು ಆಧುನೀಕರಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ರಾಜೀವ್ ಗಾಂಧಿಯವರ ಪರಂಪರೆಯನ್ನು ಸ್ಮರಿಸಲು ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಇತರ ಗಣ್ಯರು ಒಟ್ಟುಗೂಡಿದ್ದಾರೆ ಎಂದು ವಿಡಿಯೋದ ಡಿಸ್‌ಕ್ರಿಪ್ಶನ್‌ನಲ್ಲಿ ಬರೆಯಲಾಗಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 34 ನೇ ಪುಣ್ಯತಿಥಿಯಂದು ದೆಹಲಿಯ ವೀರ್ ಭೂಮಿಯಲ್ಲಿ ಕಾಂಗ್ರೆಸ್ ನಾಯಕರು ಬುಧವಾರ ಪುಷ್ಪ ನಮನ ಸಲ್ಲಿಸಿದರು ಎಂಬ ಟೈಟಲ್‌ನೊಂದಿಗೆ ವಿಡಿಯೋವನ್ನು ‘ದಿ ಪ್ರಿಂಟ್‌’ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.ಈ ವಿಡಿಯೋದಲ್ಲಿ 2ನಿಮಿಷ 55 ಸೆಕೆಂಡುಗಳ ಟೈಮ್ ಸ್ಟಾಪ್‌ನಲ್ಲಿ ರಾಹುಲ್ ಗಾಂಧಿ ವಸ್ತುವೊಂದನ್ನು ತೆಗೆದುಕೊಳ್ಳುವುದನ್ನು ನೋಡಬಹುದು.

ವೈರಲ್ ವಿಡಿಯೋದಲ್ಲಿ ಹೇಳಲಾಗಿರುವ ಸುಳ್ಳುಗಳು :

  1. ರಾಹುಲ್ ಗಾಂಧಿ ಗಾಂಧಿ ಪ್ರತಿಮೆ ಬಳಿ ಯಾರೋ ಹಾಕಿದ ಕಾಣಿಕೆಯನ್ನು ತೆಗೆದುಕೊಂಡಿದ್ದಾರೆ ? ಎಂದು ಆದರೆ ವಾಸ್ತವವಾಗಿ ಇದು ರಾಹುಲ್ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಮಾಧಿಯಾಗಿದೆ. ರಾಜೀವ್ ಗಾಂಧಿಯವರ 34 ನೇ ಪುಣ್ಯತಿಥಿಯ ಸಂದರ್ಭದ್ದು ಎಂಬುದು ಸ್ಪಷ್ಟವಾಗಿದೆ.
  2. ಅಷ್ಟಕ್ಕು ರಾಹುಲ್ ಗಾಂಧಿ ಸಮಾಧಿಯಿಂದ ತೆಗೆದುಕೊಂಡು ಜೇಬಿಗೆ ಇಟ್ಟುಕೊಂಡಿರುವುದು ನಾಣ್ಯ ಅಥವಾ ಹಣವಲ್ಲ. ಸಮಾಧಿ ಮೇಲೆ ಇದ್ದ ಹೂವಿನ ಎಸಳನ್ನು ತೆಗೆದು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೇ 22 ರಂದು ಎಕ್ಸ್‌ ಬಳಕೆದಾರರರಾದ ರವೀಂದರ್ ಕಪೂರ್ ಎಂಬುವವರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇಂದು ಬೆಳಿಗ್ಗೆ ರಾಹುಲ್ ಗಾಂಧಿ, ರಾಜೀವ್ ಗಾಂಧಿಯವರ ಸಮಾಧಿಗೆ ಭೇಟಿ ನೀಡಿದಾಗ ತುಂಬಾ ಭಾವುಕರಾಗಿದ್ದರು ವೀರ ಭೂಮಿ  ಅವರು ಪ್ರತಿದಿನ ತಮ್ಮ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಾರೆ. ಅವರು ಸಮಾಧಿಯಿಂದ ಹೂವಿನ ದಳವನ್ನು ತೆಗೆದುಕೊಂಡು ತಮ್ಮ ಹಿಂದಿನ ಜೇಬಿನಲ್ಲಿ ಇಟ್ಟುಕೊಂಡರು  ರಾಗ ತಂದೆ ರಾಜೀವ್ ಗಾಂಧಿ ಅವರೊಂದಿಗೆ ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದರು ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 34ನೇ ಪುಣ್ಯತಿಥಿಯ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿ ಹೂವಿನ ದಳವನ್ನು ಜೀಬಿಗೆ ಇಟ್ಟುಕೊಂಡ ದೃಶ್ಯವನ್ನು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಜೊತೆ ಜ್ಯೋತಿ ಮಲ್ಹೋತ್ರಾ ! ವೈರಲ್ ಫೋಟೊದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights