FACT CHECK | ರಾಜೀವ್ ಗಾಂಧಿ ಪುಣ್ಯತಿಥಿಯಲ್ಲಿ ರಾಹುಲ್ ಗಾಂಧಿ ಫೋಟೊ ಇಟ್ಟು ಪೂಜೆ ಮಾಡಿದ್ದು ನಿಜವೇ?

ರಾಜೀವ್ ಗಾಂಧಿ ಪುಣ್ಯತಿಥಿಯಂದು (ಮೇ 21) ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಫೋಟೋ ಇಟ್ಟು ಗೌರವ ಸಮರ್ಪಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ರಾಜೀವ್ ಗಾಂಧಿ ಪುಣ್ಯತಿಥಿಯಂದು ರಾಹುಲ್ ಗಾಂಧಿ ಫೋಟೋಕ್ಕೆ ಕಾಂಗ್ರೆಸ್ಸಿಗರ ಗೌರವ ಸಮರ್ಪಣೆ, ವೈರಲ್ ಫೋಟೋ ಹಿಂದಿನ ಸತ್ಯ ಏನು?

ಫೇಸ್‌ಬುಕ್‌ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಅಪ್ಪ ಯಾರು ಮಗ ಯಾರು ಅಂತ ತಿಳಿಯದ ಮೂರ್ಖ ಗುಲಾಮರು ಕಾಂಗ್ರೆಸ್ಸಿನಲ್ಲಿದ್ದಾರೆ! ತೀರಿ ಹೋಗಿದ್ದು ಅಪ್ಪ, ಆದರೇ ವಯನಾಡಿನ ಕಾಂಗ್ರೆಸ್ಸ್ ಗುಲಾಮರು ಶ್ರದ್ಧಾಂಜಲಿ ಅರ್ಪಿಸಿದ್ದು ಮಗನಿಗೆ!!”  ಎಂದಿದೆ.

ಮಲ್ಲಿಕಾರ್ಜುನ ಬಿಜಾಪುರ ಎಂಬ ಮತ್ತೊಬ್ಬ ಫೇಸ್‌ಬುಕ್ ಬಳಕೆದಾರ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, “ಅಪ್ಪ ಯಾರು ಮಗ ಯಾರು ಎಂದು ತಿಳಿಯದಂಥಾ ಮುಗ್ಧರು ನಮ್ಮತ್ತೆ ಪಕ್ಷದಲ್ಲಿದ್ದಾರೆ.. ನಮ್ಮ ಮಾವನವರ ಫೋಟೋಗೆ ಹೂ ಹಾಕೋದು ಬಿಟ್ಟು,, ನಮ್ಮ ಅಳಿಯನ ಫೋಟೋ ಹಾಕಿ ಅವರ ಅಭಿಮಾನ ತೋರಿಸಿದ್ದ ವಯನಾಡ ಜನತೆಗೆ ಧನ್ಯವಾದಗಳು..” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ನಿಜವಾಗಿಯೋ ರಾಜೀವ್ ಗಾಂಧಿ ಪುಣ್ಯ ತಿಥಿಯಂದು ರಾಹುಲ್ ಗಾಂಧಿ ಫೋಟೊವನ್ನು ಇಡಲಾಗಿತ್ತೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ರಾಜೀವ್ ಗಾಂಧಿ ಪುಣ್ಯ ತಿಥಿಯಂದು ರಾಹುಲ್ ಗಾಂಧಿ ಫೋಟೊವನ್ನು ಇಡಲಾಗಿದೆ ಎಂದು ಪರಿಶೀಲಿಸಲು,ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಯಾವುದೇ ಮಾಧ್ಯಮಗಳ ವರದಿಗಳು ಲಭ್ಯವಾಗಿಲ್ಲ.

ಆ ನಂತರ ವೈರಲ್ ಫೊಟೋದಲ್ಲಿ ಕಾಣಿಸಿಕೊಂಡಿರುವ ಕೇರಳದ ನೆಯ್ಯಟ್ಟಿಂಕರ ಮೂಲದ ತಿರುವನಂತಪುರಂ ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿನೋದ್ ಸೇನ್ ಅವರನ್ನು ನ್ಯೂಸ್‌ ಚೆಕ್ಕರ್ ಸಂಪರ್ಕಿಸಿ ಮಾಹಿತಿ ಪಡೆದಿದೆ.

ಈ ಫೋಟೋದ ಬಗ್ಗೆ ಮಾತನಾಡಿದ ವಿನೋದ್ ಸೇನ್ ಅವರು, “ಇದು ತಿರುವನಂತಪುರದ ನೆಯ್ಯಟ್ಟಿಂಕರ ಕ್ಷೇತ್ರದ ಫೋಟೋ. ಫೋಟೋದಲ್ಲಿರುವ ಜನರು ಎಸ್.ಕೆ.ಅಶೋಕ್ ಕುಮಾರ್ ಮತ್ತು ನಾನಾಗಿದ್ದೇನೆ. ನಾನು ತಿರುವನಂತಪುರಂ ಡಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಸ್.ಕೆ.ಅಶೋಕ್ ಕುಮಾರ್ ಆ ಸಮಯದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದರು.ಈಗ ನನ್ನ ಬಳಿ  ಮೂಲ ಫೋಟೋ ಇಲ್ಲ. ತಿರುವನಂತಪುರದಲ್ಲಿ ಓಣಂ ಅಂಗವಾಗಿ ತಿರುವನಂತಪುರ ಪಂಚಾಯತ್ ನಲ್ಲಿ ಕಿಸಾನ್ ಕಾಂಗ್ರೆಸ್ ಆಯೋಜಿಸಿದ್ದ ಓಣಂ ಮಾರುಕಟ್ಟೆಯ ಉದ್ಘಾಟನೆಯ ಫೋಟೋ ಇದಾಗಿದೆ.

ಫೋಟೋದಲ್ಲಿ ದೀಪವನ್ನು ನಾನು ಬೆಳಗಿಸುತ್ತಿದ್ದೇನೆ. ಎಸ್.ಕೆ. ಅಶೋಕ್ ಕುಮಾರ್ ಅವರು ದೀಪ ಬೆಳಗಿಸಿ ಓಣಂ ಮಾರುಕಟ್ಟೆಯನ್ನು ಉದ್ಘಾಟಿಸಿದ ನಂತರ ನಾನೂ ದೀಪ ಬೆಳಗಿಸಿದೆ. ತಿರುವನಂತಪುರ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿತ್ರಂ ಲಾಲು ಅವರು ರಾಹುಲ್ ಅವರ ಕಟ್ಟಾ ಅಭಿಮಾನಿ. ಅವರು ಆ ಫೋಟೋವನ್ನು ಅಲ್ಲಿ ಇಟ್ಟಿದ್ದರು” ಎಂದು ಸೇನ್ ಹೇಳಿದ್ದಾರೆ.

ರಾಜೀವ್ ಗಾಂಧಿ ಪುಣ್ಯತಿಥಿಯಂದು ರಾಹುಲ್ ಗಾಂಧಿ ಫೋಟೋಕ್ಕೆ ಕಾಂಗ್ರೆಸ್ಸಿಗರ ಗೌರವ ಸಮರ್ಪಣೆ, ವೈರಲ್ ಫೋಟೋ ಹಿಂದಿನ ಸತ್ಯ ಏನು?

ವಿನೋದ್ ಸೇನಿನ್ ಅವರ ಫೇಸ್ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದರೆ ಫೋಟೋದಲ್ಲಿರುವ ವ್ಯಕ್ತಿ ಇವರೇ  ಎಂದು ತಿಳಿಯುತ್ತದೆ.

ರಾಜೀವ್ ಗಾಂಧಿ ಪುಣ್ಯತಿಥಿಯಂದು ರಾಹುಲ್ ಗಾಂಧಿ ಫೋಟೋಕ್ಕೆ ಕಾಂಗ್ರೆಸ್ಸಿಗರ ಗೌರವ ಸಮರ್ಪಣೆ, ವೈರಲ್ ಫೋಟೋ ಹಿಂದಿನ ಸತ್ಯ ಏನು?

ಸೇನ್ ಅವರ ಎಡಭಾಗದಲ್ಲಿ ಕ್ಯಾಮೆರಾ ಕಡೆಗೆ ಮುಖ ಮಾಡಿ ನಿಂತಿರುವ ವ್ಯಕ್ತಿ ಅಶೋಕ್ ಕುಮಾರ್ .  ಅವರ ಫೇಸ್‌ಬುಕ್ ಖಾತೆಯನ್ನು ಪರಿಶೀಲಿಸಲಾಗಿದ್ದು, ಅಲ್ಲಿ ಫೋಟೋದಲ್ಲಿರುವವರು ಅವರೇ ಎಂದು ದೃಢಪಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜೀವ್ ಗಾಂಧಿ ಪುಣ್ಯತಿಥಿಯಂದು ವಯನಾಡ್ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಫೊಟೋ ಇಟ್ಟು ಗೌರವ ಸಮರ್ಪಿಸಿಲ್ಲ. ಬದಲಾಗಿ ಇದು ತಿರುವನಂತಪುರದಲ್ಲಿ ಓಣಂ ಅಂಗವಾಗಿ ಮಾರುಕಟ್ಟೆಯೊಂದರ ಉದ್ಘಾಟನೆ ಸಂದರ್ಭದ ಫೋಟೋ ಆಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ನಡೆಸಿದ ಸಂವಾದದಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಪೋರ್ಟರ್‌ನಂತೆ ನಟಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights