FACT CHECK | ಚೀನಾದಲ್ಲಿ ನಡೆದಿರುವ ಹೊಸ ವರ್ಷಾಚರಣೆಯ ಹಳೆಯ ದೃಶ್ಯಗಳನ್ನು RCB ಅಭಿಮಾನಿಗಳ ಸಂಭ್ರಮಾಚರಣೆ ಎಂದು ತಪ್ಪಾಗಿ ಹಂಚಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಕೆಂಪು ಬಟ್ಟೆ ಧರಿಸಿದ ಬೃಹತ್ ಜನಸಮೂಹವನ್ನು ತೋರಿಸುವ ವೀಡಿಯೊವನ್ನು ಅನೇಕ ಜನರು ಹಂಚಿಕೊಳ್ಳುತ್ತಿದ್ದು, ಮೊದಲ ಐಪಿಎಲ್ ಗೆಲುವಿನ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು ವಿಜಯೋತ್ಸವ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. RCB

ಹಾಗಿದ್ದರೆ ನಿಜವಾಗಿಯೂ ಈ ದೃಶ್ಯಗಳು RCB ಗೆಲುವಿಗೆ ಸಂಬಂಧಿಸಿದಿಯೇ ಎಂದು ಪರಿಶೀಲಿಸೋಣ. RCB
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಜನವರಿ 1, 2025 ರಂದು ಚೀನಾದ ಸ್ಥಳೀಯ ಸುದ್ದಿ ಸಂಸ್ಥೆ ಶಾಂಘೈ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಮೂಲ ದೃಶ್ಯಗಳು ಲಭ್ಯವಾಗಿದೆ. ವಿಡಿಯೋ ವಿವರಣೆಯ ಪ್ರಕಾರ, ‘‘ಚೀನಾದ ನಾನ್ಚಾಂಗ್ ನಗರ ಕೇಂದ್ರದಲ್ಲಿ ಸಾವಿರಾರು ಜನರು ಒಟ್ಟುಗೂಡಿ ಹೊಸ ವರ್ಷವನ್ನು ಬಲೂನ್ಗಳನ್ನು ಹಾರಿಸುವ ಮೂಲಕ ಆಚರಿಸಿದರು’’ ಎಂದಿದೆ. RCB
ಇದೇ ವೈರಲ್ ವೀಡಿಯೊವನ್ನು ಶಾಂಘೈ ಎಕ್ಸ್ಪ್ಲೋರ್ ಎಂಬ ಚೀನಾದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವುದು ಕೂಡ ನಮಗೆ ಸಿಕ್ಕಿದೆ. ಇದರಲ್ಲಿ ಕೂಡ ಹೊಸ ವರ್ಷದ ಸಂಭ್ರಮಾಚರಣೆ ಎಂದು ಬರೆಯಲಾಗಿದೆ.

ಇಷ್ಟೇ ಅಲ್ಲದೆ ವೈರಲ್ ಆಗಿರುವ ವೀಡಿಯೊದಲ್ಲಿ ಹಲವಾರು ಸ್ಥಳಗಳಲ್ಲಿ ಚೀನೀ ಭಾಷೆಯಲ್ಲಿ ಬೋರ್ಡ್ ಇರುವುದನ್ನು ನಾವು ಗಮನಿಸಿದ್ದೇವೆ. ಈ ಪೈಕಿ ಒಂದು ಬಿಲ್ಡಿಂಗ್ ಮೇಲಿನ ಡಿಸ್ಪ್ಲೇಯಲ್ಲಿ ಚೀನಿ ಬರಹ ಇರುವುದನ್ನು ಕಾಣಬಹುದು. ಇದನ್ನು ಅನುವಾದ ಮಾಡಿದಾಗ ‘ಹೊಸ ವರ್ಷದ ಶುಭಾಷಯ’ ಎಂದು ಬರೆಯಲಾಗಿದೆ ಎಂಬುದು ತಿಳಿಯಿತು.
ಐಪಿಎಲ್ 2025 ಟೂರ್ನಿ ಮಾರ್ಚ್ 22 ರಂದು ಪ್ರಾರಂಭವಾಗಿ ಜೂನ್ 3 ರಂದು ಮುಕ್ತಾಯಗೊಂಡಿತು. ಆದರೆ, ವೈರಲ್ ವೀಡಿಯೊ ಐಪಿಎಲ್ ಋತುವಿಗೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, RCB ಈ ವೀಡಿಯೊಕ್ಕೆ ಯಾವುದೇ ಸಂಬಂಧವಿಲ್ಲ. ಇದು ಚೀನಾಕ್ಕೆ ಸಂಬಂಧಿಸಿದ ಹಳೆಯ ವೀಡಿಯೊ ಆಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೊಬೈಲ್ ಟವರ್ಗಳನ್ನು ಅಳವಡಿಸುವ ಕುರಿತು ಕರೆ ಅಥವಾ ಸಂದೇಶಗಳು ಬಂದರೆ ಎಚ್ಚರವಾಗಿರಿ, ವಂಚಕರ ಬಲೆಗೆ ಬೀಳದಿರಿ

