FACT CHECK | ಇರಾನ್ನಲ್ಲಿ ಸರ್ಕಾರದ ವಿರುದ್ದ ಜನ ಪ್ರತಿಭಟಿಸುತ್ತಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ಇರಾನ್-ಇಸ್ರೇಲ್ ಕದನ ತೀವ್ರವಾಗುತ್ತಿರುವಂತೆಯೇ, ಇರಾನ್ ನಲ್ಲಿ ಸರ್ಕಾರದ ವಿರುದ್ಧವೇ ಜನರು ತಿರುಗಿಬಿದ್ದಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್ ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು , ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, 7 ವರ್ಷಗಳ ಹಿಂದೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ.
♦️فیلمی از حمله پلیس به مردم معترض در #کرمانشاه منتشر شده است. این تجمع مردم، آرام بود اما پلیس افراد را از جمعیت جدا و بازداشت کرد.
شما هم عکس و فیلم های خود را به https://t.co/EJ5AlfA7R1 بفرستید pic.twitter.com/qjcozgcykY— VOA Farsi صدای آمریکا (@VOAfarsi) December 29, 2017
ಡಿಸೆಂಬರ್ 29, 2017ರಂದು VOAfarsi ಎಂಬ ಬಳಕೆದಾರರು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಹಂಚಿಕೊಂಡಿದ್ದು, ಕೆರ್ಮೆನ್ ಶಾದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ದಾಳಿ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಸಭೆ ಶಾಂತಿಯುತವಾಗಿತ್ತು, ಆದರೆ ಪೊಲೀಸರು ಜನರ ಮೇಲೆ ದಾಳಿ ಮಾಡಿ ಬಂಧಿಸಿದರು. (ಪಾರ್ಸಿಯಿಂದ ಭಾಷಾಂತರಿಸಲಾಗಿದೆ) ಎಂದಿದೆ.
![]()
ಇದೇ ರೀತಿಯ ವಿವರಣೆಯೊಂದಿಗೆ,ಪೋಸ್ಟ್ ಅನ್ನು voafars ಇನ್ಸ್ಟಾಗ್ರಾಂ ಪೇಜ್ ನಲ್ಲೂ ಕಂಡಿದ್ದೇವೆ. ಆ ಬಳಿಕ ನಾವು ಘಟನೆಯ ಕುರಿತಾದ ವರದಿಗಳ ಬಗ್ಗೆ ಕೀವರ್ಡ್ ಸರ್ಚ್ ನಡೆಸಿದಾಗ, ಇರಾನ್ ನ ವಿವಿಧ ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿವೆ.

ಜನವರಿ 28, 2017ರ ir.voanews ವರದಿ (ಜೂನ್ 16, 2021ರಂದು ಈ ವರದಿ ಅಪ್ಡೇಟ್ ಆಗಿದೆ) ಪ್ರಕಾರ, ಮಷಾದ್ ಮತ್ತು ಖೊರಾಸನ್ ಮತ್ತು ಶಹರೂದ್ನ ಹಲವಾರು ಇತರ ನಗರಗಳಲ್ಲಿ ನಡೆದ ಪ್ರತಿಭಟನಾ ರ್ಯಾಲಿ ಒಂದು ದಿನದ ನಂತರ, ಇರಾನ್ನ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಭಟಿಸಿದ ಜನರು ಕೆರ್ಮನ್ಶಾ ಮತ್ತು ಖೊರಾಮಾಬಾದ್ ನಗರಗಳಲ್ಲಿ ಜಮಾಯಿಸಿ ಇಸ್ಲಾಮಿಕ್ ಗಣರಾಜ್ಯ ಇರಾನ್ನ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದಿದೆ. ಈ ವರದಿಯಲ್ಲಿ ಪ್ರತಿಭಟನೆ ಬೆಲೆ ಏರಿಕೆ ಮತ್ತು ಭೂಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ, ಸರ್ಕಾರದ ನೀತಿಗಳ ವಿರುದ್ಧ ಆಗಿತ್ತು ಎಂದಿದೆ.
![]()
ಡಿಸೆಂಬರ್ 8, 2017ರ radiofarda ವರದಿಯಲ್ಲೂ (ಜೂನ್ 16, 2021ರಂದು ಈ ವರದಿ ಅಪ್ಡೇಟ್ ಆಗಿದೆ) ಕೆರ್ಮನ್ ಶಾದಲ್ಲಿ ಬೆಲೆ ಏರಿಕೆ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆದಿದೆ ಎಂದಿದೆ.
![]()
ಒಟ್ಟಾರೆಯಾಗಿ ಹೇಳೂವುದಾದರೆ, 2017ರಲ್ಲಿ ಇರಾನ್ ನಲ್ಲಿ ಸರ್ಕಾರದ ನೀತಿಗಳ ವಿರುದ್ಧ ನಡೆದ ಪ್ರತಿಭಟನೆಯ ದೃಶ್ಯಗಳನ್ನು, ಪ್ರಸ್ತುತ ಇಸ್ರೇಲ್-ಇರಾನ್ ಕದನಕ್ಕೆ ಲಿಂಕ್ ಮಾಡಿ ಇರಾನ್ ನಲ್ಲಿ ಸರ್ಕಾರದ ವಿರುದ್ಧವೇ ಜನರು ತಿರುಗಿಬಿದ್ದಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ ಎಂದು ನ್ಯೂಸ್ ಚೆಕ್ಕರ್ ತಿಳಿಸಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ; ಸಿಕ್ಕಿಬಿದ್ದವ ಮುಸ್ಲಿಂ ಅಲ್ಲ

