FACT CHECK | ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ; ಸಿಕ್ಕಿಬಿದ್ದವ ಮುಸ್ಲಿಂ ಅಲ್ಲ

25 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಯುವಕನೊಬ್ಬನನ್ನು ಅರೆನಗ್ನಗೊಳಿಸಿ ಹೊಡೆಯುವುದನ್ನು ಕಾಣಬಹುದು. ಹಸುವಿನ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಬಜರಂಗದಳ ಸದಸ್ಯರು ಮುಸ್ಲಿಂ ಯುವಕನನ್ನು ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್ ಬಳಕೆದಾರ ಶಾಲಿನಿ ಸನಾತನಿ ಸಾಧ್ವಿ ಎಂಬುವವರು ಜೂನ್ 9 ರಂದು ವಿಡಿಯೋ ಪೋಸ್ಟ್ ಮಾಡಿ, “ಹಸುವಿನ ಮೇಲೆ ಅತ್ಯಾಚಾರ ಮಾಡದ ಇವನನ್ನು ಬಜರಂಗದಳ ಸಹೋದರರು ಅಡ್ಡರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಥಳಿಸಿದರು. ಇಂತಹ ಕಾಮಾಂಧ ಅಬ್ದುಲ್‌ನನ್ನು ಹಿಂದೂಗಳು ಏನು ಮಾಡಬೇಕು..” ಎಂದು ಬರೆದಿದ್ದಾರೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅನೇಕ ಸುದ್ದಿ ವೆಬ್‌ಸೈಟ್‌ಗಳಲ್ಲಿ ಸಂಬಂಧಿತ ಸುದ್ದಿಗಳನ್ನು ಕಂಡುಕೊಂಡಿದ್ದೇವೆ.

ದೈನಿಕ್ ಭಾಸ್ಕರ್ ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಬಳಸಿಕೊಂಡು, “ರಾಯ್ಪುರದಲ್ಲಿ ಯುವಕನೊಬ್ಬ ಹಸುವಿನೊಂದಿಗೆ ಅಶ್ಲೀಲ ಕೃತ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಸುತ್ತಮುತ್ತಲಿನ ಜನರು ಯುವಕನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಡಿಯೋ ಮಾಡಿದ್ದಾರೆ ಎಂದು ವರದಿಯಾಗಿದೆ.

Chhattisgarh Raipur cows rape case | रायपुर में युवक ने की गौवंश से अश्लील हरकत: गुस्साए लोगों ने आरोपी को पीटा; नग्न कर निकाला जुलूस - Raipur News | Dainik Bhaskar

ಇಡೀ ಪ್ರಕರಣವು ಅವಂತಿ ವಿಹಾರ್ ನ ಖಮ್ಹರ್ದಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದೆ. ಆರೋಪಿ ಯುವಕನ ಹೆಸರು ಅನುಜ್ ತಂಡಿ ಎಂದು ಹೇಳಲಾಗಿದ್ದು, ಶನಿವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ದುಷ್ಕೃತ್ಯ ಎಸಗಿದ ಆರೋಪಿಯನ್ನು ಅರೆಬೆತ್ತಲೆ ಮೆರವಣಿಗೆಯಲ್ಲಿ ಕರೆದೊಯ್ದು ಖಮ್ಹರ್ದಿ ಪೊಲೀಸರಿಗೆ ಒಪ್ಪಿಸಿದರು” ಎಂದು ಸುದ್ದಿ ಪ್ರಕಟವಾಯಿತು.

ಅದೇ ರೀತಿ, ಜೂನ್ 7 ರಂದು IBC24 ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ, “ಈ ಪ್ರಕರಣವು ಅವಂತಿ ವಿಹಾರ್‌ನ ಖಮ್ಹರ್ದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಶಾಲಾ ಮೈದಾನದಲ್ಲಿ ಹಸುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದ ಯುವಕನನ್ನು ಜನರು ಹಿಡಿದಿದ್ದಾರೆ. ಆರೋಪಿ ಯುವಕನ ಹೆಸರು ಅನುಜ್ ತಂಡಿ ಎಂದು ಹೇಳಲಾಗಿದ್ದು, ಘಟನೆಯ ನಂತರ, ಹಿಂದೂ ಸಂಘಟನೆಯ ಕಾರ್ಯಕರ್ತರು ಆ ಪ್ರದೇಶದಲ್ಲಿ ಯುವಕನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗುವಂತೆ ಮಾಡಿ ಪೊಲೀಸರಿಗೆ ಒಪ್ಪಿಸಿದರು. ” ಎಂದು ವರದಿಯಾಗಿದೆ.

ಈ ಬಗ್ಗೆ ವಿಶ್ವಾಸ್ ನ್ಯೂಸ್‌ ತನಿಕೆ ನಡೆಸಿದ್ದು, ಸ್ಥಳಿಯ ಕ್ರೈಂ ನ್ಯೂಸ್ ವರದಿಗಾರ ದೀಪಕ್ ಶುಕ್ಲಾ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಆರೋಪಿ ಯುವಕ ಹಸುವಿನೊಂದಿಗೆ ಆಕ್ಷೇಪಾರ್ಹ ಕೃತ್ಯಗಳನ್ನು ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ. ಅವರ ಹೆಸರು ಅನುಜ್ ತಂಡಿ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಸುವಿನೊಂದಿಗೆ ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದ ಯುವಕನ ಹೆಸರು ಅನುಜ್ ತಂಡಿ ಎಂದು ಯುವಕ ಮುಸ್ಲಿಂ ಅಲ್ಲ ಎಂದು ವಿಶ್ವಾಸ್ ನ್ಯೂಸ್‌ನ ತನಿಖೆಯಿಂದ ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವಿಮಾನ ಅಪಘಾತದಲ್ಲಿ ಮೃತಪಟ್ಟವರ 242 ಶವಗಳು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights