FACT CHECK | ರೈಲೊಂದು ಹಳಿತಪ್ಪಿ ಸೇತುವೆಯಿಂದ ನದಿಗೆ ಬಿದ್ದು ಅಪಘಾತ ಸಂಭವಿಸಿದೆ ಎಂದು AI ವಿಡಿಯೋ ಹಂಚಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ದೃಶ್ಯಗಳಲ್ಲಿ ರೈಲು ಅಪಘಾತ ಸಂಭವಿಸಿರುವುದನ್ನು ಕಾಣಬಹುದು. ನೀಲಿ ಬಣ್ಣದ ಎರಡು ಬೋಗಿಗಳು ಹಳಿ ತಪ್ಪಿ ನದಿ ಸೇತುವೆಗೆ ಡಿಕ್ಕಿ ಹೊಡೆಯುವುದನ್ನು ಇಲ್ಲಿ ತೋರಿಸಲಾಗಿದೆ. ಜನರು ಸೇತುವೆಯ ಕೆಳಗೆ ಮತ್ತು ಹಳಿತಪ್ಪಿದ ಬೋಗಿಯ ಮೇಲ್ಭಾಗದಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಕೆಲ ಸಮಯದ ನಂತರ, ಬೋಗಿಯ ಮುಂಭಾಗಕ್ಕೆ ಬೆಂಕಿ ಹೊತ್ತಿಕೊಂಡು, ಭಾರಿ ಸ್ಪೋಟ ಸಂಭವಿಸಿ ಜನರು ಬೆಂಕಿಯ ಕೆನ್ನಾಗಿಗೆಯಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತೋರಿಸಲಾಗಿದೆ.
ಈ ಪೋಸ್ಟ್ ಅನ್ನು “ರೈಲು ಅಪಘಾತ” ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ವೀಕ್ಷಿಸಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವೀಡಿಯೊದಿಂದ ಸಂಬಂಧಿತ ಕೀವರ್ಡ್‌ಗಳು ಮತ್ತು ಕೀಫ್ರೇಮ್‌ಗಳನ್ನು ತಗೆದು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ರೈಲು ದುರಂತದ ಬಗ್ಗೆ ಯಾವುದೇ ನಿಜವಾದ ಸುದ್ದಿ ಅಥವಾ ಲೇಖನ ಕಂಡುಬಂದಿಲ್ಲ. ಇದು ನಿಜವಾದ ಘಟನೆಯಾಗಿದ್ದರೆ, ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳು ಇದನ್ನು ಈಗಾಗಲೇ ವರದಿ ಮಾಡಿರುತ್ತಿದ್ದವು.

ವೈರಲ್ ವಿಡಿಯೋದ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಸಹಜ ಚಲನೆಗಳು ಕಂಡುಬರುತ್ತಿದ್ದು ಇದನ್ನು ಕೃತಕ ಬುದ್ಧಿಮತ್ತೆಯಿಂದ (ಏಐ) ನಿರ್ಮಿಸಿರಬಹುದು ಎಂಬ ಅನುಮಾನದಿಂದ. ವೈರಲ್ ವಿಡಿಯೋವನ್ನು “ಹೈವ್ ಮಾಡರೇಶನ್” ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ನಂತರ ನಾವು ಅದನ್ನು ಪರಿಶೀಲಿಸಿದ್ದೇವೆ.

ಇದರಿಂದ ಬಂದ ಫಲಿತಾಂಶದ ಪ್ರಕಾರ ಈ ವಿಡಿಯೋ 98.1% ರಷ್ಟು AI- ರಚಿತ ಮತ್ತು ಡೀಪ್‌ಫೇಕ್ ನಿಂದ ರಚಿಸಲ್ಪಟ್ಟಿದೆ ಎಂದು ತೀರ್ಮಾನಿಸಿದೆ. ಸೈಟ್ ಎಂಜಿನ್ ಬಳಸಿ ನಾವು ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದೇವೆ ಮತ್ತು ನೀಲಿ ಬೋಗಿಗಳು ನದಿಗೆ ಹಳಿತಪ್ಪಿ ಬೆಂಕಿ ಹೊತ್ತಿಕೊಂಡಂತೆ ಕಾಣುವ ರೈಲು ಅಪಘಾತದ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ ಎಂದು ತೀರ್ಮಾನಿಸಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ,ರೈಲೊಂದು ಸೇತುವೆಯಿಂದ ನದಿಗೆ ಬೀಳುವುದನ್ನು ತೋರಿಸುವ ರೈಲು ದುರಂತದ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊವು ಕೃತಕ ಬುದ್ಧಿಮತ್ತೆ (AI) ರಚಿತ ವಂಚನೆಯಾಗಿದೆ. ಇಲ್ಲಿ ಸೂಚಿಸುವಂತೆ ಯಾವುದೇ ನಿಜವಾದ ಘಟನೆಯಲ್ಲ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಮೇರಿಕಾದ ಶ್ವೇತ ಭವನ ದಲ್ಲಿ ಪಾಕಿಸ್ತಾನದ ಪ್ರತಿನಿಧಿಗಳು ಆಹಾರಕ್ಕಾಗಿ ನೂಕುನುಗ್ಗಲು ಮಾಡಿದ್ದು ನಿಜವೇ?

