FACT CHECK | ಫ್ಲಿಪ್‌ಕಾರ್ಟ್ ರಾಹುಲ್ ಗಾಂಧಿ ಫೋಟೋ ಬಳಸಿ ಬಿಳಿ ಟೀ ಶರ್ಟ್‌ಗಳನ್ನು ಮಾರಾಟ ಮಾಡುತ್ತಿಯೇ?
ಫ್ಲಿಪ್‌ಕಾರ್ಟ್ ಚಳುವಳಿಯ ಭಾಗವಾಗಿ ರಾಹುಲ್ ಗಾಂಧಿ ಅವರ ಫೋಟೋವನ್ನು ಬಳಸಿಕೊಂಡು ಅವರ ಬಿಳಿ ಬಣ್ಣದ ಟಿ-ಶರ್ಟ್ ಮತ್ತು ಕಾಂಗ್ರೆಸ್‌ನ ಟಿ-ಶರ್ಟ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ನ್ಲಿ ಬರೆದುಕೊಂಡಿದ್ದಾರೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಪೋಸ್ಟ್‌ಅನ್ನು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಂಡು flipkart ಧೈರ್ಯವನ್ನು ತೋರಿಸಿದೆ ಮತ್ತು ರಾಹುಲ್ ಗಾಂಧಿಯವರ ಚಿತ್ರವನ್ನು ಬಳಸಿಕೊಂಡು ಕಾಂಗ್ರೆಸ್‌ನ ಬಿಳಿ ಬಣ್ಣದ ಟಿ-ಶರ್ಟ್ ಚಳುವಳಿಗೆ ಬೆಂಬಲವನ್ನು ಘೋಷಿಸಿದೆ ಎಂದು ಬರೆದುಕೊಂಡಿದ್ದಾರೆ.
I was searching t-shirts for my husband and look what is there at Flipkart pic.twitter.com/ZJfVarmMZj
— Kavita Purushottam Gupta (@kavitagupta21) June 25, 2025
ಕವಿತಾ ಎಂಬ ಎಕ್ಸ್ ಬಳಕೆದಾರರು ಇದೇ ಫೋಟೊವನ್ನು ಹಂಚಿಕೊಳ್ಳುತ್ತಾ, ನಾನು ನನ್ನ ಪತಿಗಾಗಿ ಟಿ-ಶರ್ಟ್‌ಗಳನ್ನು ಹುಡುಕುತ್ತಿದ್ದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಏನಿದೆ ಎಂದು ನೋಡಿದೆ ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
Flipkart features Rahul Gandhi in a Congress party t-shirt ad 🙂 pic.twitter.com/Ruud1Tyda1
— Harsh Upadhyay (@upadhyay_harsh1) June 7, 2025
ಫ್ಲಿಪ್‌ಕಾರ್ಟ್‌ನಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಟೀ-ಶರ್ಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹರ್ಷ ಉಪಾಧ್ಯಾಯ್ ಎಂಬ ಎಕ್ಸ್ ಬಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲಿಸಲು flipkart ರಾಹುಲ್ ಗಾಂಧಿಯವರ ಚಿತ್ರದೊಂದಿಗೆ ಬಿಳಿ ಬಣ್ಣದ ಟಿ ಶರ್ಟ್ ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಯಾವುದಾದರೂ ವರದಿಗಳು ಪ್ರಕಟವಾಗಿವೆ ಎಂಬುದನ್ನು ಗೂಗಲ್ ಸಹಾಯದಿಂದ ಸರ್ಚ್ ಮಾಡಿದಾಗ, ಈ ಕುರಿತು ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ಸಾಕಷ್ಟು ವರದಿಗಳನ್ನು ಮಾಡುತ್ತಿದ್ದವು. ಆದರೆ ಅಂತಹ ವರದಿಗಳು ಲಭ್ಯವಿಲ್ಲ.

ಈ ಕಾರಣದಿಂದಾಗಿ ನಾವು flipkart ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೀ ವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಅಲ್ಲಿಯೂ ರಾಹುಲ್ ಗಾಂಧಿಯವರ ಚಿತ್ರದೊಂದಿಗೆ ಕಾಂಗ್ರೆಸ್ ಟಿ-ಶರ್ಟ್ ಅನ್ನು flipkart ಮಾರಾಟ ಮಾಡುತ್ತಿರುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಅದು ನಿಜವಾಗಿದ್ದರೆ ಫ್ಲಿಪ್‌ಕಾರ್ಟ್‌ನ ಪ್ರಾಡಕ್ಟ್ ವಿಭಾಗದಲ್ಲಿ ಲಭ್ಯವಾಗಬೇಕಿತ್ತು. ಹೀಗಾಗಿ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ರಾಹುಲ್ ಗಾಂಧಿ ಅವರ ಚಿತ್ರದೊಂದಿಗೆ ಕಾಂಗ್ರೆಸ್‌ನ ಟೀ-ಶರ್ಟ್ ಅನ್ನು ಫ್ಲಿಪ್‌ಕಾರ್ಟ್ ಮಾರಾಟ ಮಾಡಲು ಆರಂಭಿಸಿದೆ ಎಂಬುದು ಸಂಪೂರ್ಣ ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಟ ಸಲ್ಮಾನ್ ಖಾನ್ ಐಸಿಯುನಲ್ಲಿ ದಾಖಲಾಗಿದ್ದಾರೆಯೇ?

