FACT CHECK | ಬದರಿನಾಥ ಧಾಮಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ನದಿಗೆ ಬಿದ್ದಿದೆ ಎಂದು AI ವಿಡಿಯೋ ಹಂಚಿಕೆ
ಬದರಿನಾಥ ಧಾಮಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಗುರುವಾರ (ಜೂನ್ 26) ಉತ್ತರಾಖಂಡದ ರುದ್ರಪ್ರಯಾಗದಲ್ಲಿರುವ ಅಲಕನಂದಾ ನದಿಗೆ ಬಿದ್ದು ಕನಿಷ್ಠ ನಾಲ್ಕು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತೋರಿಸುವ ಎರಡು ಚಿತ್ರಗಳು ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ 20 ಪ್ರಯಾಣಿಕರಿದ್ದ ಬಸ್ ಅಲಕನಂದ ನದಿಗೆ ಬಿದ್ದು ಹಲವರು ಮೃತಪಟ್ಟರೆ, ಕೆಲವರು ಕಾಣೆಯಾಗಿದ್ದರು. ಈ ಘಟನೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಬಸ್ವೊಂದು ನದಿಗೆ ಬಿದ್ದಿರುವ ವಿಡಿಯೊ ಹಂಚಿಕೆಯಾಗುತ್ತಿದೆ. ಇದು ರುದ್ರಪ್ರಯಾಗದ ಅಪಘಾತದ ವಿಡಿಯೊ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಆಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಪೋಸ್ಟ್ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಕೆಲವರು ಇದೇ ಚಿತ್ರವನ್ನು ಇಂತಹುದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಲಭ್ಯವಾಗಿದೆ.
ನ್ಯೂಸ್ 18 ಪಂಜಾಬಿ, ಅಗ್ನಿಬನ್ ಮುಂತಾದ ಕೆಲವು ಮಾಧ್ಯಮಗಳಲ್ಲಿಯೂ ಇದೇ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರಲ್ಲಿ ಹಲವು ವ್ಯತ್ಯಾಸಗಳಿರುವುದು ಕಂಡುಬಂತು. ಚಿತ್ರದಲ್ಲಿರುವ ಬಸ್, ನೀರಿನ ಹಿನ್ನೆಲೆ ಇವೆಲ್ಲ ವಾಸ್ತವ ಅಲ್ಲ ಎನ್ನುವಂತೆ ಭಾಸವಾಯಿತು.
ಇದೇ ಸುಳಿವಿನ ಆಧಾರದಲ್ಲಿ ಚಿತ್ರವನ್ನು ಹೈವ್ ಮಾಡರೇಷನ್ ಮೂಲಕ ಪರಿಶೀಲನೆ ನಡೆಸಿದಾಗ, ಇದನ್ನು ಕೃತಕ ಬುದ್ಧಿಮತ್ತೆಯಿಂದ (ಎಐ) ಸೃಷ್ಟಿಸಲಾಗಿದೆ ಎನ್ನುವುದು ತಿಳಿದುಬಂತು. ಸೈಟ್ ಇಂಜಿನ್ ಎನ್ನುವ ಎಐ ಪತ್ತೆ ಸಾಧನದ ಮೂಲಕ ಪರೀಕ್ಷಿಸಿದಾಗ ಇದು ಎಐ ನಿರ್ಮಿತ ಚಿತ್ರ ಎನ್ನುವುದು ಖಚಿತವಾಯಿತು. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.‘
ಒಟ್ಟಾರೆಯಾಗಿ ಹೇಳುವುದಾದರೆ, AI ನಿಂದ ರಚಿಸಿದ ಚಿತ್ರಗಳನ್ನು ಹಂಚಿಕೊಂಡು ಬದರಿನಾಥ ಧಾಮಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಉತ್ತರಾಖಂಡದ ರುದ್ರಪ್ರಯಾಗದಲ್ಲಿರುವ ಅಲಕನಂದಾ ನದಿಗೆ ಬಿದ್ದು ಯಾತ್ರಿಕರು ಸಾವನಪ್ಪಿದ್ದಾರೆ ಎಂದು ನಕಲಿ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹುಲಿಗಳ ಮಾರುಕಟ್ಟೆ ಎಂದು AI ವಿಡಿಯೋ ಹಂಚಿಕೆ

