FACT CHECK | ಇಂಟರ್ ಮಿಲನ್ ಫುಟ್ಬಾಲ್ ಆಟಗಾರರು ಪ್ಯಾಲಸ್ತೇನರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹಳೆಯ ಫೋಟೊ ಹಂಚಿಕೆ

ಇಟಲಿ ಮೂಲದ ಫುಟ್ಬಾಲ್ ಕ್ಲಬ್ ಇಂಟರ್ ಮಿಲನ್ ಆಟಗಾರರು ಪ್ಯಾಲೆಸ್ತೀನಿಯನ್ ಧ್ವಜವನ್ನು ಹಿಡಿದು ಮಕ್ಕಳನ್ನು ಸ್ವಾಗತಿಸುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಫುಟ್ಬಾಲ್ ತಂಡ ಪ್ಯಾಲೆಸ್ತೀನ್‌ ಗೆ ಬೆಂಬಲವನ್ನು ನೀಡಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

ಇಂಟರ್ ಮಿಲನ್ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದೆ ಎಂಬ ವೈರಲ್ ಫೋಟೋ ಹಿಂದಿನ ಸತ್ಯ ಏನು?

ಇಂಟರ್ ಮಿಲನ್ “ತಮ್ಮ ಪಂದ್ಯಕ್ಕೂ ಮೊದಲು ಪ್ಯಾಲೆಸ್ತೀನ್ ಗೆ  ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿದೆ” ಎಂದು ಹೇಳುವ ಫೋಟೋವನ್ನು ಎಕ್ಸ್ ಮತ್ತು ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡಿದ್ದಾರೆ. ಇದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿರುವುದನ್ನು ನೀವು ಇಲ್ಲಿ,ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್‌ನಲ್ಲಿ “Inter Milan” ಮತ್ತು “Palestine” ಎಂಬ ಕೀವರ್ಡ್ ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಫುಟ್ಬಾಲ್ ಕ್ಲಬ್ ಮಧ್ಯಪ್ರಾಚ್ಯದ ದೇಶಕ್ಕೆ ಬೆಂಬಲ ನೀಡಿದೆ ಎಂದು ಹೇಳುವ ಯಾವುದೇ ಇತ್ತೀಚಿನ ವರದಿಗಳು ಕಂಡುಬಂದಿಲ್ಲ.

ನಂತರ ಗೂಗಲ್ ಲೆನ್ಸ್‌ನಲ್ಲಿ ವೈರಲ್ ಫೋಟೋದ ಬಗ್ಗೆ ಸರ್ಚ್ ಮಾಡಿದಾಗ, ಸ್ಟಾಕ್ ಇಮೇಜ್ ಡಿಪಾಸಿಟರಿ ಗೆಟ್ಟಿ ಇಮೇಜಸ್‌ ನಲ್ಲಿ ಇದೇ ಚಿತ್ರ ಕಂಡುಬಂದಿದೆ. ಇದು ವೈರಲ್ ಚಿತ್ರದ ಪೂರ್ಣ ಆವೃತ್ತಿಯನ್ನು ಒಳಗೊಂಡಿತ್ತು, ಇದರಲ್ಲಿ ಇಸ್ರೇಲಿ ಧ್ವಜವನ್ನು ಹಿಡಿದಿರುವ ಇನ್ನೊಬ್ಬ ಹುಡುಗ ಕೂಡ ಇದ್ದನು. “ಸೆಪ್ಟೆಂಬರ್ 23, 2009 ರಂದು ಇಟಲಿಯ ಮಿಲನ್‌ನಲ್ಲಿ ಸ್ಟೇಡಿಯೊ ಗೈಸೆಪ್ಪೆ ಮೀಝಾದಲ್ಲಿ FC ಇಂಟರ್ ಮಿಲನ್ ಮತ್ತು SSC ನಪೋಲಿ ನಡುವಿನ ಸೀರಿ A ಪಂದ್ಯದ ಮೊದಲು ಇಂಟರ್ ಕ್ಯಾಂಪ್‌ನ ಇಸ್ರೇಲಿ ಮತ್ತು ಪ್ಯಾಲೆಸ್ತೀನಿಯನ್ ಮಕ್ಕಳು ಆಟಗಾರರಿಗೆ FC ಇಂಟರ್ ಮಿಲನ್‌ನ ಹೈ ಫೈವ್ ನೀಡುತ್ತಾರೆ” ಎಂದು ಚಿತ್ರದ ಶೀರ್ಷಿಕೆಯಲ್ಲಿದೆ.

ಪಂದ್ಯದ ಇತರ ಚಿತ್ರಗಳನ್ನು, ಇಲ್ಲಿ ನೋಡಬಹುದು. ಇದರಲ್ಲಿ ಇಂಟರ್ ಕ್ಯಾಂಪ್‌ನ ಬ್ರೆಜಿಲ್ ಮತ್ತು ಚೀನೀ ಮಕ್ಕಳು ಪಂದ್ಯಕ್ಕೂ ಮುನ್ನ ಆಟಗಾರರನ್ನು ಸ್ವಾಗತಿಸುತ್ತಿರುವುದನ್ನು ತೋರಿಸುತ್ತವೆ.

ಇಂಟರ್ ಮಿಲನ್ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದೆ ಎಂಬ ವೈರಲ್ ಫೋಟೋ ಹಿಂದಿನ ಸತ್ಯ ಏನು?

ಇಂಟರ್ ಕ್ಯಾಂಪಸ್ ಒಂದು ಜಾಗತಿಕ ಸಂಸ್ಥೆಯಾಗಿದ್ದು, ಇದು ಕ್ರೀಡೆಯ ಮೌಲ್ಯಗಳು ಮತ್ತು ಫುಟ್ಬಾಲ್ ಆಟವನ್ನು ಶೈಕ್ಷಣಿಕ ಸಾಧನವಾಗಿ ಬಳಸಿಕೊಂಡು ಸಾವಿರಾರು ನಿರ್ಗತಿಕ ಮಕ್ಕಳಿಗೆ “ಆಟವಾಡುವ ಹಕ್ಕು” ನೀಡುತ್ತದೆ.

 

2009 ರ ಪಂದ್ಯದ ಮುಖ್ಯಾಂಶಗಳನ್ನು ಜನವರಿ 2023 ರಲ್ಲಿ ಇಂಟರ್ ಮಿಲನ್‌ನ ಅಧಿಕೃತ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ , ಇದರಲ್ಲಿ ಮಕ್ಕಳು ತಮ್ಮ ದೇಶಗಳ ಧ್ವಜಗಳನ್ನು ಹಿಡಿದು ಮೈದಾನದಲ್ಲಿ ಆಟಗಾರರನ್ನು ಸ್ವಾಗತಿಸುವ ದೃಶ್ಯಗಳನ್ನು ಸಹ ಒಳಗೊಂಡಿತ್ತು.

ಇಂಟರ್ ಮಿಲನ್ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದೆ ಎಂಬ ವೈರಲ್ ಫೋಟೋ ಹಿಂದಿನ ಸತ್ಯ ಏನು?

ಮೇ 2015 ರಲ್ಲಿ ರೆಡಿಫ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮತ್ತೊಂದು ಲೇಖನವು ವೈರಲ್ ಚಿತ್ರದ ಪೂರ್ಣ ಆವೃತ್ತಿಯನ್ನು ಹೊಂದಿತ್ತು. ಎರಡರ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪಂದ್ಯಕ್ಕೂ ಮುನ್ನ ಇಂಟರ್ ಮಿಲನ್ ಪ್ಯಾಲೆಸ್ತೀನ್ ಗೆ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಹಳೆಯ ಫೋಟೋವನ್ನು ಎಡಿಟ್‌ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಇರಾನ್‌ನಲ್ಲಿ ಮೊಸಾದ್ ಗೂಢಾಚಾರರನ್ನು ಸಾರ್ವಜನಿಕವಾಗಿ ನೇಣಿಗೇರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights