FACT CHECK | ಚೀನಾದ ತೇಲುವ ಸೋಲಾರ್ ಪ್ಲಾಂಟ್‌ಅನ್ನು ಗುಜರಾತ್‌ನದ್ದು ಎಂದು ತಪ್ಪಾಗಿ ಹಂಚಿಕೆ
ಗುಜರಾತ್‌ನಲ್ಲಿ ತೇಲುವ ಸೋಲಾರ್ ಪ್ಲಾಂಟ್‌ನಿಂದ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದು “ಗುಜರಾತ್ ಮಾಡಲ್” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಎಂದು ಹೇಳಲಾಗುತ್ತಿದೆ. ಹಲವು ಬಲಪಂಥೀಯ ಖಾತೆಗಳು ಈ ವಿಡಿಯೋವನ್ನು ಹಂಚಿಕೊಂಡು, “ಅಭಿವೃದ್ಧಿ ಎಂದರೆ ಇದು, ಉಚಿತ ಕರೆಂಟ್ ಕೊಟ್ಟು ಬೆಲೆ ಏರಿಸುವುದು ಅಭಿವೃದ್ಧಿ ಅಲ್ಲ” ಎಂದು ಬರೆದಿದ್ದಾರೆ.

ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕೆಲವರು ಬಿಜೆಪಿಯ ಗುಜರಾತ್ ಮಾಡಲ್ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಗುಜರಾತ್ ಮಾಡಲ್‌ನ ತೇಲುವ ಸೋಲಾರ್ ಪ್ಲಾಂಟ್ ಎನ್ನುವ ವಿಡಿಯೋ ಕುರಿತು ಪರಿಶೀಲಿಸಲು, ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಪರಿಶೀಲಿಸಿದಾಗ, ಚೀನಾದ ಶಾಂಡಾಂಗ್ ಪ್ರಾಂತ್ಯದ ತೇಲುವ ಸೋಲಾರ್ ಫಾರ್ಮ್‌ನ ದೃಶ್ಯಗಳಿಗೆ ಹೊಂದಿಕೆಯಾದವು.
ಇದನ್ನು PV Techನಂತಹ ವಿಶ್ವಾಸಾರ್ಹ ಸುದ್ದಿ ಮೂಲಗಳು ದೃಢೀಕರಿಸಿವೆ, ಇದು ಚೀನಾ ಎನರ್ಜಿ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್‌ನ 1GW ಯೋಜನೆಯನ್ನು ದಾಖಲಿಸಿದೆ. ಗುಜರಾತ್‌ನ ಯಾವುದೇ ತೇಲುವ ಸೋಲಾರ್ ಯೋಜನೆಗಳು ಈ ವಿಡಿಯೋದ ದೃಶ್ಯಗಳಿಗೆ ಸಂಬಂಧಿಸಿಲ್ಲ ಎಂದು ಈ ವರದಿಯ ಮೂಲಕ ಖಚಿತವಾಗಿದೆ.

ಇನ್ನು ಗುಜರಾತ್‌ನಲ್ಲಿ ತೇಲುವ ಸೋಲಾರ್ ಪ್ಲಾಂಟ್‌ಗಳಿವೆ, ಉದಾಹರಣೆಗೆ ವಡೋದರಾದ ಅಜ್ವಾ ಜಲಾಶಯದಲ್ಲಿ ಒಂದು ಯೋಜನೆಯನ್ನು ಪ್ರಸ್ತಾಪಿಸಲಾಗಿದೆ, ಆದರೆ ಇದು ಕೇವಲ 2MW ಸಾಮರ್ಥ್ಯದ್ದಾಗಿದ್ದು, ವೈರಲ್ ವಿಡಿಯೋದಂತಹ ದೊಡ್ಡ ಯೋಜನೆಯಲ್ಲ. ಗುಜರಾತ್‌ನ ಯಾವುದೇ ತೇಲುವ ಸೋಲಾರ್ ಪ್ಲಾಂಟ್ ವೈರಲ್ ವಿಡಿಯೋದ ದೃಶ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಅದೇ ಸಮಯದಲ್ಲಿ ವೈರಲ್ ವಿಡಿಯೋ ಚೀನಾದ ವಿಡಿಯೋದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಬಳಸಿಕೊಂಡು ಬಹುತೇಕ ಬಲಪಂಥೀಯ ಖಾತೆಗಳು ಸುಳ್ಳು ಮಾಹಿತಿಯನ್ನೇ ನೀಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಗುಜರಾತ್ ತೇಲುವ ಸೋಲಾರ್ ಪ್ಲಾಂಟ್‌ನದ್ದಲ್ಲ, ಅದು ಚೀನಾದ ಶಾಂಡಾಂಗ್ ಪ್ರಾಂತ್ಯದ ತೇಲುವ ಸೋಲಾರ್ ಫಾರ್ಮ್‌ನ ದೃಶ್ಯಗಳಾಗಿವೆ. ಈ ವಿಡಿಯೋವನ್ನು ಬಳಸಿಕೊಂಡಿರುವ ಬಲಪಂಥೀಯರು ಗುಜರಾತ್ ಮಾಡಲ್ ಎಂದು ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಾನು ರೈತನ ಮಗ ನಾನು ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ರಾ ಜಗದೀಪ್ ಧನಕರ್ ?

