FACT CHECK | ಜಪಾನ್-ರಷ್ಯಾ ಭೂಕಂಪದ ದೃಶ್ಯ ಎಂದು ಸಂಬಧವಿಲ್ಲದ ವಿಡಿಯೋ ಹಂಚಿಕೆ

ಭೂಕಂಪನದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗುತ್ತಿದ್ದು, ಜಪಾನ್-ರಷ್ಯಾ ಭೂಕಂಪ ಮತ್ತು ಸುನಾಮಿಗೆ ಸಂಬಂಧಿಸಿದೆ ಎಂದು ಪ್ರತಿಪಾದಿಸಿ  ಅಂಗಡಿಯೊಂದರಲ್ಲಿ  ಅನಾಹುತವಾದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು, “ಜಪಾನ್‌ನಲ್ಲಿ ಭೂಕಂಪನ; ಬೃಹತ್ ಸುನಾಮಿಯ ಎಚ್ಚರಿಕೆ 8.7 ತೀವ್ರತೆಯ ಭೂಕಂಪದ ನಂತರ ಪೂರ್ವ ರಷ್ಯಾದ ಕುರಿಲ್ ದ್ವೀಪಗಳ ಕೆಲವು ಭಾಗಗಳಿಗೆ ಸುನಾಮಿ ಅಲೆಗಳು ಅಪ್ಪಳಿಸಿವೆ.” ಹೇಳಿಕೆಯೊಂದಿಗೆ ಅಂಗಡಿ ವೀಡಿಯೋ ಹಂಚಿಕೊಳ್ಳಲಾಗಿದೆ.

ರಷ್ಯಾದ ಕಮ್ಚಟ್ಕಾ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸ್ಕ್‌ ನಿಂದ 135 ಕಿ.ಮೀ.ಯಷ್ಟು ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 8.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರಿಂದಾಗಿ ಜಪಾನ್ ಸೇರಿದಂತೆ ಅಮೆರಿಕ ಮತ್ತು ಫೆಸಿಫಿಕ್ ಸಾಗರದ ತೀರದಲ್ಲಿ ಭಾರೀ ಸುನಾಮಿ ಭೀತಿ ಉಂಟಾಗಿದೆ. ಆದರೆ ಈ ವಿಡಿಯೋ ಅಲ್ಲಿಯ ಘಟನೆಗೆ ಸಂಬಂಧಿಸಿದೆಯೇ ಎಂಬ ಬಗ್ಗೆ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ

ಇದೇ ರೀತಿಯ ಪ್ರತಿಪಾದನೆಯೊಂದುಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೋಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 29, 2025 ರಂದು  ಎಕ್ಸ್  ಮತ್ತು  ಫೇಸ್‌ಬುಕ್‌ನಲ್ಲಿ  ಪೋಸ್ಟ್ ಮಾಡಲಾದ ಅದೇ ರೀತಿಯ ವೀಡಿಯೋ ಲಭ್ಯವಾಗಿದೆ . ಇದು ಮಾರ್ಚ್ 28, 2025 ರಂದು ಮ್ಯಾನ್ಮಾರ್ ಗೆ ಅಪ್ಪಳಿಸಿದ 7.7 ತೀವ್ರತೆಯ ಭೂಕಂಪದ ಪರಿಣಾಮವನ್ನು ತೋರಿಸಿದೆ ಎಂದು ಹೇಳುತ್ತದೆ. ಅಂದರೆ ಇದು ಜುಲೈ 30, 2025 (ಇಂದಿನ) ಭೂಕಂಪಕ್ಕೂ ಹಿಂದಿನದ್ದು.

ಮತ್ತಷ್ಟು ಸರ್ಚ್ ಮಾಡಿದಾಗ,  ಅದರಲ್ಲೂ ಅದೇ ರೀತಿಯ ವೀಡಿಯೋ ಹಂಚಿಕೊಳ್ಳಲಾಗಿದೆ.

“ಮ್ಯಾನ್ಮಾರ್‌ನ ಎಲೆಕ್ಟ್ರಾನಿಕ್ಸ್ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳು ಮಾರ್ಚ್ 28 ರಂದು ಸಂಭವಿಸಿದ 7.7 ತೀವ್ರತೆಯ ಭೂಕಂಪದ ಭಯಾನಕ ಕ್ಷಣವನ್ನು ಸೆರೆಹಿಡಿಯುತ್ತವೆ, ಇದು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಎರಡನ್ನೂ ಧ್ವಂಸಗೊಳಿಸಿದ ಪ್ರಬಲ ಭೂಕಂಪವಾಗಿದೆ…” ಎಂದು ಪೋಸ್ಟ್‌ನಲ್ಲಿದೆ. ಮಾರ್ಚ್ 31 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ರೀತಿಯ ಡೈಲಿ ಮೇಲ್ ಪೋಸ್ಟ್ ಅನ್ನು ಕೂಡ  ಇಲ್ಲಿ ಕಾಣಬಹುದು , ಇದು ವೈರಲ್ ವೀಡಿಯೋ ರಷ್ಯಾದಿಂದ ಬಂದದ್ದಲ್ಲ ಎಂಬುದನ್ನು ಇನ್ನಷ್ಟು ದೃಢಪಡಿಸುತ್ತದೆ.

ಮಾರ್ಚ್ 2025 ರಲ್ಲಿ ಮ್ಯಾನ್ಮಾರ್ ಭೂಕಂಪ

7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು , ಇದರ ಪರಿಣಾಮವಾಗಿ ತೀವ್ರವಾದ ಕಂಪನವು ಆ ಪ್ರದೇಶವನ್ನು ಧ್ವಂಸಗೊಳಿಸಿತು ಮತ್ತು ಬ್ಯಾಂಕಾಕ್, ಥೈಲ್ಯಾಂಡ್ ಮತ್ತು ನೈಋತ್ಯ ಚೀನಾದವರೆಗೆ ಅನುಭವಿಸಿತು, ಕನಿಷ್ಠ 3,000 ಮಂದಿ ಸಾವನ್ನಪ್ಪಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಮ್ಯಾನ್ಮಾರ್‌ನಲ್ಲಿ ನಡೆದ ಭೂಕಂಪನದ ದೃಶ್ಯಗಳನ್ನು ಜಪಾನ್-ರಷ್ಯಾ ಭೂಕಂಪನಕ್ಕೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಂದೂ ಹುಡುಗಿಯನ್ನು ವಂಚಿಸಿದ ಮುಸ್ಲಿಂ ವ್ಯಕ್ತಿ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights