ದೇಶದಲ್ಲಿ ಕೊರೊನಾದಿಂದ 32,198 ಜನ ಗುಣಮುಖ : ಚೇತರಿಕೆ ಪ್ರಮಾಣದಲ್ಲಿ ಏರಿಕೆ!

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 32,198 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಷ್ಟೇ ಚೇತರಿಕೆಯ ಸಂಖ್ಯೆಯೂ ಸಮನಾಗಿದೆ.

ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,32,08,330ಕ್ಕೆ ತಲುಪಿದ್ದು, ಹೊಸದಾಗಿ 33,376 ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳಲ್ಲಿ 308 ಸಾವುಗಳು ಸಂಭವಿಸಿದ್ದು ಈವರೆಗೆ 4,42,317 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ನಿಂದ ಒಟ್ಟು 32,198 ರೋಗಿಗಳು ಚೇತರಿಸಿಕೊಂಡಿದ್ದು, ಭಾರತದ ಒಟ್ಟು ಗುಣಮುಖರಾದವರ ಸಂಖ್ಯೆ 3,23,74,497 ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 15,92,135 ಮಾದರಿಗಳನ್ನು ಕೋವಿಡ್‌ಗಾಗಿ ಪರೀಕ್ಷಿಸಲಾಗಿದೆ. ದೇಶದಲ್ಲಿ ಪ್ರಸ್ತುತ 3,91,516 ಸಕ್ರಿಯ ಪ್ರಕರಣಗಳಿವೆ.

ಶನಿವಾರ ಅತಿಹೆಚ್ಚು ಪ್ರಕರಣಗಳನ್ನು ದಾಖಲಿಸಿರುವ ಐದು ರಾಜ್ಯಗಳಲ್ಲಿ ಕೇರಳದಲ್ಲಿ 25,010 ಪ್ರಕರಣಗಳು, ತಮಿಳುನಾಡಿನಲ್ಲಿ 1,631 ಪ್ರಕರಣಗಳು, ಆಂಧ್ರ ಪ್ರದೇಶ 1,608 ಪ್ರಕರಣಗಳು, ಕರ್ನಾಟಕ 967 ಪ್ರಕರಣಗಳು ಮತ್ತು ಪಶ್ಚಿಮ ಬಂಗಾಳ 753 ಪ್ರಕರಣಗಳು ದಾಖಲಾಗಿವೆ.

ಶನಿವಾರದಂದು ಕೇರಳದಲ್ಲಿ ಗರಿಷ್ಠ ಕೋವಿಡ್ -19 ಸಾವುನೋವುಗಳು ವರದಿಯಾಗಿವೆ (177), ನಂತರ ಮಹಾರಾಷ್ಟ್ರದಲ್ಲಿ 44 ದೈನಂದಿನ ಸಾವುಗಳನ್ನು ದಾಖಲಿಸಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 65,27,175 ಕೋವಿಡ್ -19 ಡೋಸ್‌ಗಳನ್ನು ನೀಡಲಾಗಿದ್ದು, ದೇಶಾದ್ಯಂತ ಒಟ್ಟು ಡೋಸ್‌ಗಳ ಸಂಖ್ಯೆ 73,05,89,688 ಕ್ಕೆ ತಲುಪಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights