Categories
Breaking News District Political State

ಸಿಎಂ ಮತ್ತು ಸಂತೋಶ್ ಜಗಳ್ ಬಂದಿ – ರಾಜ್ಯಕ್ಕೆ ತಗುಲಿದ ಕುಷ್ಠರೋಗ – ಮಾನ್ಪಡೆ ಕಿಡಿ

ಬಿಜೆಪಿ ನಡುವಿನ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಸಿಎಂ ಯಡಿಯೂರಪ್ಪ ಮತ್ತು ಸಂತೋಶ್ ಜಗಳ್ ಬಂದಿಯಿಂದ ರಾಜ್ಯದ ಅಭಿವೃದ್ಧಿಗೆ ಕುಷ್ಟರೋಗ ತಗುಲಿದೆ. ಈಗಲಾದ್ರೂ ಅಭಿವೃದ್ಧಿ ಮಾಡಿ, ರೈತರ ಹಿತ ಕಾಪಾಡಿ ಅಂತ ರೈತ ಮುಖಂಡ ಮಾರುತಿ ಮಾನ್ಪಡೆ ಆಗ್ರಹ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂತೋಶ್ ಜಗಳ್ ಬಂದಿಯಿಂದಾಗಿ ರಾಜ್ಯಕ್ಕೆ ಕುಷ್ಠರೋಗ ತಗಲುವಂತೆ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪಗೆ ಮುಕ್ತವಾಗಿ ಕೆಲಸ ಮಾಡಲು ಬಿಡ್ತಿಲ್ಲ. ಯಡಿಯೂರಪ್ಪ ಮತ್ತು ಸಂತೋಶ್ ಗುಂಪುಗಳ ನಡುವೆ ಕಿತ್ತಾಟ ನಡೆದೇ ಇದ್ದು, ರಾಜ್ಯದ ಅಭಿವೃದ್ಧಿ ಕುಷ್ಠರೋಗ ತಗುಲಿದ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು.

ಹೈಕಮಾಂಡ್ ಸಹ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಬಿಜೆಪಿ ಹಿರಿಯ ನಾಯಕರೂ ಯಡಿಯೂರಪ್ಪಗೆ ತೊಂದರೆ ಕೊಡ್ತಿದಾರೆ. ಮತ್ತೊಂದೆಡೆ ಸಂತೋಷ್ ಸರ್ಕಾರ ನಡೆಯಲು ಬಿಡ್ತಿಲ್ಲ. ಇಬ್ಬರ ಜನಗಳದ ನಡುವೆ ಕೂಲಿಕಾರರು, ಜನಸಾಮಾನ್ಯರು ಬಡವಾಗುವಂತಾಗಿದೆ. ರೈತರಿಗೂ ಪದೇ ಪದೇ ಅನ್ಯಾಯವಾಗುತ್ತಿದೆ. ಕೂಡಲೇ ಜಗಳವಾಡೋದನ್ನು ಬಿಟ್ಟು ಸರಿಯಾದ ಆಡಳಿತ ಕೊಡಿ ಎಂದು ಮಾನ್ಪಡೆ ಆಗ್ರಹಿಸಿದ್ದಾರೆ.

ತೊಗರಿ ಖರೀದಿ ಆರಂಭಿಸದಿರೋದಕ್ಕೆ ಕಿಡಿ….
ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ ಎಂದು ಇದೇ ವೇಳೆ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ. ರೈತ ಸಂಘಟನೆಗಳ ಪರ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರದಿಂದ ಬೇಜವಾಬ್ದಾರಿ ವರ್ತನೆ ಮಾಡುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ತೊಗರಿ ಖರೀದಿ ವಿಳಂಬ ಮಾಡುತ್ತಿದೆ. ರೈತರು ತಮ್ಮ ಬಳಿಯಿದ್ದ ತೊಗರಿ ಮಾರಿದ ಮೇಲೆ ಸರ್ಕಾರ ತೊಗರಿ ಖರೀದಿಸಿ ಪ್ರಕ್ರಿಯೆ ಆರಂಭಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ಪ್ರೋತ್ಸಾಹ ಧನ ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡಲಾಗುತ್ತಿದೆ. ಇದರಿಂದ ರೈತ ಸಮುದಾಯ ಕಂಗಾಲಾಗಿದೆ. ಕೂಡಲೇ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಜೊತೆಗೆ ಪ್ರತಿ ರೈತನಿಗೆ 10 ಕ್ವಿಂಟಲ್ ತೊಗರಿ ಖರೀದಿ ಮಿತಿಯನ್ನು ತೆಗೆಯಬೇಕು. ಪ್ರತಿ ರೈತನಿಂದ ಕನಿಷ್ಠ 25 ಕ್ವಿಂಟಲ್ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಎಂ.ಪಿ. ಕಛೇರಿ ಎದುರು ಅನಿರ್ಧಿಷ್ಟ ಧರಣಿ….
ತೊಗರಿ ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ(ಜನವರಿ 16) ಕಲಬುರ್ಗಿ ಸಂಸದ ಉಮೇಶ್ ಜಾಧವ್ ಕಛೇರಿ ಎದುರು ಹೋರಾಟ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ರೈತ ಸಂಘ, ರೈತ, ಕೃಷಿ ಕೂಲಿಕಾರರ ಸಂಘ ಮತ್ತಿತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಾಳೆಯಿಂದ ಅನಿರ್ಧಿಷ್ಟ ಧರಣಿ ಆರಂಭಿಸಲಾಗುವುದು. ಈ ಮುಂಚೆ ಸಂಸದರ ನಿವಾಸದ ಎದುರು ಪ್ರತಿಭಟನೆ ನಡೆಸಿದಾಗ, ಉದ್ದೇಶಪೂರ್ವಕವಾಗಿಯೇ ಉಮೇಶ್ ಜಾಧವ್ ಹೋರಾಟಗಾರರನ್ನು ಭೇಟಿ ಮಾಡಿರಲಿಲ್ಲ. ಈಗ ಮಾತ್ರ ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯೋದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Categories
Breaking News District Political State

ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಸಿಎಂ ವಿರುದ್ದ ಹೆಚ್.ಡಿ.ರೇವಣ್ಣ ವಾಗ್ದಾಳಿ

ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಕಾವೇರಿ ನಿಗಮ ವ್ಯಾಪ್ತಿಯ 5 ಸಾವಿರ ಕೋಟಿ ವೆಚ್ಚದ ಕಾಮಗಾರಿ ತಡೆಹಿಡಿದಿದ್ದಾರೆ. ಈ ಭಾಗದಲ್ಲಿ ಮತ ನೀಡಲ್ಲಾ ಎಂಬ ಕಾರಣಕ್ಕೆ ಕಾಮಗಾರಿಗೆ ಸರ್ಕಾರ ತಡೆ ಒಡ್ಡಿದೆ. ಸಿಎಂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಈ ಬಗ್ಗೆ ಮಾತನಾಡಿದ ಹೆಚ್.ಡಿ.ಆರ್, ನಮ್ಮ ಮೇಲಿನ ದ್ವೇಷಕ್ಕೆ ಜನ್ರ ಕೆಲಸಗಳಿಗೆ ತಡೆ ಹಿಡಿಯಬೇಡಿ. ಟೆಂಡರ್ ಆಗಿ ಫೈನಲ್ ಹಂತದ ಕಾಮಗಾರಿಗಳನ್ನೂ ತಡೆ ಹಿಡಿದಿದ್ದಾರೆ. ಕೆಆರ್,ಪೇಟೆಯಲ್ಲಿ ಅವರದೇ ಶಾಸಕರು ಗೆದ್ದಿದ್ದಾರೆ ಆದ್ರೂ ಕಾವೇರಿ ಜಲಾನಯನ ಪ್ರದೇಶದ ಕಾಮಗಾರಿ ತಡೆ ಹಿಡಿದಿದ್ದಾರೆ.

ಈ ಸರ್ಕಾರದ ಹೆಸರು ಕಾಮಗಾರಿ ತಡೆ ಹಿಡಿಯುವ ಸರ್ಕಾರ. ಹಾಸನ ಜಿಲ್ಲೆಯ ಆರು ಮಂದಿ‌ ಶಾಸಕರು ಸಿಎಂಗೆ ಮನವಿ ಮಾಡಿದ್ದೇವೆ. ಪ್ರಶ್ನೋತ್ತರ ಕಲಾಪ ತಡೆ ಹಿಡಿಯಬೇಡಿ ಎಂದು ಸ್ಪೀಕರ್ ಗರ ಮನವಿ. ಸದಸ್ಯರ ಹಕ್ಕನ್ನು ಮೊಟಕುಗೊಳಿಸಬೇಡಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿಪಕ್ಷ ಸದಸ್ಯರ ಹಕ್ಕು ಮೊಟಕುಗೊಳಿಸುತ್ತಿದ್ದಾರೆ.

ಸ್ಪೀಕರ್ ಗೆ ಹಾಸನ ಜಿಲ್ಲೆಯ ಎಲ್ಲಾ ಶಾಸಕರೆಲ್ಲರೂ ಪತ್ರ ಬರೆಯುತ್ತೇವೆ. ಶಾಸಕರ ಹಕ್ಕು ಕಿತ್ತುಕೊಂಡರೆ ಸದನದ ಒಳಗೆ ಹೊರಗೆ ಹೋರಾಟ. ಹಿಂದಿನ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿನ ಕಾಮಗಾರಿ ತಡೆ ಹಿಡಿದಿದ್ದಾರೆ. ಹಾಸನದ ತೋಟಗಾರಿಕಾ ಇಲಾಖೆ ಕಾಲೇಜನ್ನ ತಡೆ ಹಿಡಿದಿದ್ದಾರೆ. ಕ್ಯಾಬಿನೆಟ್ ಅಪ್ರೋವಲ್ ಆಗಿದೆ ಆದ್ರೂ ಹಾಸನಕ್ಕೆ ಮಂಜೂರಾದ ಈ ಕಾಲೇಜನ್ನ ತಡೆ ಹಿಡಿದಿದ್ದಾರೆಂದು ಹರಿಹಾಯ್ದಿದ್ದಾರೆ.

Categories
Breaking News Political State

ಇನ್ನೂ ಆಗಿಲ್ಲ ಸಂಪುಟ ವಿಸ್ತರಣೆ : ಸಿಎಂ ಮಾತ್ರ ಫುಲ್ ಆ್ಯಕ್ಟೀವ್ – ಇದರ ಗುಟ್ಟೇನು..?

ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಭರ್ಜರಿ ಜಯ ಗಳಿಸಿದ ಬಳಿಕ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮೂರೂವರೆ ವರ್ಷ ಸಿಎಂ ಸ್ಥಾನ ಫಿಕ್ಸ್ ಆಗಿರೋ ಹಿನ್ನೆಲೆಯಲ್ಲಿ ಹೊಸ ಜೋಷ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ಕ್ಯಾಬಿನೆಟ್ ಇನ್ನೂ ಪೂರ್ತಿ ಆಗಿಲ್ಲ. ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು. ಆದರೆ ಬಿಜೆಪಿಯ ಕೇಂದ್ರದ ನಾಯಕರು ಸಿಎಂ ಯಡಿಯೂರಪ್ಪಗೆ ಇನ್ನೂ ಸಂಪುಟ ವಿಸ್ತರಣೆ ಮಾತುಕತೆಗೆ ಸಮಯ ಕೊಟ್ಟಿಲ್ಲ. ಹೀಗಾಗಿ ಇನ್ನೂ ಸ್ವಲ್ಪ ದಿನ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿಯುತ್ತದೆ. ಈ ಮಧ್ಯೆ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗಿಂತಲೂ ಬಜೆಟ್ ತಯಾರಿಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಈ ಅವಧಿಯ ಬಿಜೆಪಿ ಸರ್ಕಾರದ ಮೊದಲ ಬಜೆಟ್ ನ್ನ ಸಿಎಂ ಯಡಿಯೂರಪ್ಪ ಫೆಬ್ರವರಿಯಲ್ಲಿ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈಗಿನಿಂದಲೇ ಬಜೆಟ್ ಸಿದ್ಧತೆ ಪ್ರಾರಂಭ ಮಾಡಿದ್ದಾರಂತೆ. ಬಜೆಟ್ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡಿದ್ದಾರೆ ಅಂದ್ರೆ, ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದಂತೆ ಬಜೆಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರಂತೆ.

Categories
Breaking News District Political State

ಮೋದಿಗೆ ಗುಮ್ಮಲು ಸಿಎಂ- ಡಿಕೆಶಿ ‘ಜುಗಲ್ ಬಂದಿ’ : ಐಟಿ ಕಚೇರಿ ಎದುರು ಪ್ರತಿಭಟನೆ

ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ, ಸಿಎಸ್ ಪುಟ್ಟರಾಜು, ಎಂಎಲ್‌ಸಿ ಬಿಎಂ ಫಾರೂಕ್ ಸೇರಿದಂತೆ 10 ಪ್ರಭಾವಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ವಿರೋಧಿಸಿ ಬೆಂಗಳೂರು ಐಟಿ ಕಚೇರಿ ಎದುರು ಜೋಡೆತ್ತುಗಳ ಪ್ರತಿಭಟನೆ ನಡೆಸಿದ್ದಾರೆ.

ಐಟಿ ಅಸ್ತ್ರ ಉಪಯೋಗಿದಿದ ಬಿಜೆಪಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ಧ ಘೋಷಣೆ ಕೂಗಲಾಗುತ್ತಿದೆ.  ಪ್ರತಿಭಟನೆಯಲ್ಲಿ ಸ್ವತ: ಬೀದಿಗಿಳಿದು ಸಿಎಂ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಕುಮಾರಸ್ವಾಮಿಯೊಂದಿಗೆ , ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ.

ಚುನಾವಣೆ ವೇಳೆ ಕೋಟ್ಯಂತರ ಹಣ ಸಾಗಣೆ ಶಂಕೆ ಹಿನ್ನೆಲೆ ಐಟಿ ದಾಳಿ ನಡೆಸಲಾಗಿದೆ. ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ ಭಾಗದಲ್ಲಿ ಹಣ ಸಾಗಣೆ ಶಂಕೆ ಹಿನ್ನೆಲೆ ದಾಳಿ ನಡೆದಿದೆ. ಮಂಡ್ಯಕ್ಕೆ ಹಣ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಚುನಾವಣಾ ಅಕ್ರಮದ ಬಗ್ಗೆ ವಾರದಿಂದ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಮೈಸೂರು, ಮಂಡ್ಯದಲ್ಲಿ ಅಕ್ರಮವಾಗಿ ಹಣ ಸಾಗಾಟದಲ್ಲಿ ಸಚಿವ ಸಿ.ಎಸ್. ಪುಟ್ಟರಾಜು ಪ್ರಮುಖ ಪಾತ್ರ ವಹಿಸಿರುವ ಅನುಮಾನದಿಂದ ದಾಳಿ ನಡೆಸಿದ್ದಾರೆ.

ಎಚ್​.ಡಿ. ರೇವಣ್ಣ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯ ಹಾಸನ ಕಚೇರಿ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಹಾಸನದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರ ವಿಚಾರಣೆ ನಡೆಸಲಾಗುತ್ತಿದೆ. ಹಾಗೇ, ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಡತಗಳ ಪರಿಶೀಲನೆ ಮಾಡಲಾಗುತ್ತಿದೆ.

ಸಿಎಂ ಆಪ್ತ ಸಿಎಸ್ ಪುಟ್ಟರಾಜು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಅತ್ತ ಸಚಿವ ಎಚ್ ಡಿ ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ರಾಯಗೌಡ ಅವರ ಚೆನ್ನರಾಯಪಟ್ಟಣದ ನಿವಾಸವೂ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮಂಡ್ಯದಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳ ಮತ್ತೊಂದು ತಂಡವೇ ಈ ದಾಳಿ ಮಾಡಿದ್ದು, ಸುಮಾರು 10 ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಎಚ್ ಡಿ ರೇವಣ್ಣ ಅವರ ಮೂವರು ಆಪ್ತರಿಗೆ ಸೇರಿದೆ ಎನ್ನಲಾದ 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.