Categories
Breaking News District Political State

ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಹರಿಹರ ಸ್ವಾಮೀಜಿ ವಿರುದ್ಧ ಯತ್ನಾಳ ವಾಗ್ದಾಳಿ…

ಹರಿಹರ ಸ್ವಾಮೀಜಿ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಸ್ವಾಮಿಜಿಯವರು  ವರ್ತನೆ ತಿದ್ದಿಕೊಳ್ಳಬೇಕೆಂದು ಹರಿಹರ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ‌ ಬಸನಗೌಡ ರಾ. ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ನಿನ್ನೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, “”ಯಡಿಯೂರಪ್ಪ ಅವರೇ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ವೀರಶೈವ ಪಂಚಮಸಾಲಿ ಸಮುದಾಯ ನಿಮ್ಮ ಬೆನ್ನಿಗಿದೆ. ನೀವು ನಮ್ಮ ಸಮುದಾಯದ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಮುರುಗೇಶ ನಿರಾಣಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ನೀವು ಅವರನ್ನು ಕೈ ಬಿಟ್ಟರೇ ನಮ್ಮ ಸಮುದಾಯ ನಿಮ್ಮನ್ನು ಕೈ ಬಿಡಲಿದೆ” ಎಂದು ಹೇಳಿದರು. ಇದಕ್ಕೆ ಸಿಎಂ ಯಡಿಯೂರಪ್ಪ ಕೆಂಡಮಂಡಲವಾಗಿ ಎಚ್ಚರಿಕೆ ಬೇಡ ಸಲಹೆ ಕೊಂಡಿ ಎಂದು ಕೋಪಗೊಂಡಿದ್ದರು.

ಇದೇ ವಿಚಾರಕ್ಕೆ ಇಂದು ಯತ್ನಾಳ್ ಗರಂ ಆಗಿದ್ದಾರೆ . ಇಂದು ಮಾದ್ಯಮದೊಂದಿಗೆ ಮಾತನಾಡಿದ ಯತ್ನಾಳ್, ಯಾರೂ ಗೊಡ್ಡ ಬೆದರಿಕೆ ಹಾಕಬಾರದು. ನಾವೆಲ್ಲ ಸಿಎಂ‌ ಪರ ಗಟ್ಟಿಯಾಗಿದ್ದೇವೆ. ಮಠಾಧೀಶರಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ನೋಡಬೇಕು. ನನಗೂ ಸಚಿವನಾಗಲು ಅರ್ಹತೆ ಇದೆ. ಆದರೆ, ನಾನು ಸಚಿವ ಸ್ಥಾನ ಬೇಡಲ್ಲ. ಸಿಎಂ ರನ್ನು‌ ಕಾರ್ಯಕ್ರಮಕ್ಜೆ ಅವಮಾನಿಸಿದ್ದು ಸರಿಯಲ್ಲ.”

ಈ ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರಂಥ ಲಿಂಗಾಯಿತ ನಾಯಕರಿಗೆ ನಮ್ಮವರೇ ಮುಳುವಾದರು. ಉತ್ತರ ಕರ್ನಾಟಕ ಪ್ರವಾಹ ಬಂದಾಗ ಸ್ವಾಮೀಜಿ ಯಾಕೆ ಧ್ವನಿ ಎತ್ತಲಿಲ್ಲ. ಇಂಥವರ ಮಾರ್ಗದರ್ಶನದಲ್ಲಿ ಸಚಿವರಾದರೆ ಪ್ರತಿದಿನ ಇವರ ಮಠದ ಎದುರು ನಿಲ್ಲಬೇಕಾಗುತ್ತೆ. ನಿನ್ನೆ ನಿರಾಣಿ ಮಾಡಿದ್ದು ತಪ್ಪು. ನಿರಾಣಿ ಸಿಎಂಗೆ ತಂದೆ ಸಮಾನ ಅಂತಾರೆ. ಹಾಗಿದ್ದರೆ ಹೀಗೇಕೆ‌ ಮಾಡಿದ್ರು? ನಿರಾಣಿ ಕೂಡಲ ಸಂಗಮ, ಹರಿಹರ ಎರಡೂ ಮಠಗಳನ್ನು ನಿಭಾಯಿಸಲು ಹೊರಟಿದ್ದಾರೆ.

ನಿರಾಣಿ ಮತ್ತು ಸ್ವಾಮೀಜಿಗಳ ಈ ನಡೆಯನ್ನು ಪಂಚಮಸಾಲಿ ಸಮಾಜ ಒಪ್ಪುವುದಿಲ್ಲ. ಇಬ್ಬರು ನಿರಾಣಿ ಸಹೋದರರು‌ ಕೂಡಲ ಸಂಗಮ ಮ್ಯಾನೇಜ್ ಮಾಡ್ತಿದ್ದಾರೆ. ಮುರುಗೇಶ ನಿರಾಣಿ ಹರಿಹರ ಪರ ಮ್ಯಾನೇಜ್ ಮಾಡ್ತಿದ್ದಾರೆ. ನಿರಾಣಿ ಅವರ ಮನೆಯ ಬೆಕ್ಕು,ನಾಯಿಗೂ ಸ್ಥಾನಮಾನ ಕೇಳುತ್ತಾರೆ. ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗ್ಬೇಕಾ? ನಿರಾಣಿ ಏನು ಉಪಕಾರ ಮಾಡಿದ್ದಾರೆ? ನಾಲ್ಕೈದು ಸಕ್ಕರೆ ಕಾರ್ಖಾನೆ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

 

Categories
Breaking News National Political

‘ಸಾಧ್ಯವಾದ್ರೆ ಬಿಜೆಪಿಯ ವಿಜಯ ಯಾತ್ರೆ ತಡೆಯಲಿ’ ದೀದಿಗೆ ಶಾ ಸವಾಲ್

ಪ್ರಧಾನಿ ಮೋದಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡುವಿನ ಚುನಾವಣಾ ವಾಕ್ಸಮರದ ಬಳಿಕ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಮತ್ತು ದೀದಿ ನಡುವೆ ಸಮರ ಆರಂಭವಾಗಿದೆ. ಅಮಿತ್‌ ಶಾ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಜಾದವ್‌ಪುರದಲ್ಲಿ ಕಾಪ್ಟರ್‌ ಇಳಿಸಲು ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಬಿಜೆಪಿ ಟೀಕಿಸಿದ್ದರೆ, ಜನರೇ ಬರದ ಕಾರಣ, ಸ್ವತಃ ಬಿಜೆಪಿ ರಾರ‍ಯಲಿಯನ್ನು ರದ್ದು ಮಾಡಿದೆ ಎಂದು ಟಿಎಂಸಿ ತಿರುಗೇಟು ನೀಡಿದೆ.

ಸೋಮವಾರ ಜಾದವ್‌ಪುರದಲ್ಲಿ ಆಯೋಜಿಸಿದ್ದ ರಾರ‍ಯಲಿಯನ್ನು ಬಿಜೆಪಿ ಕಡೇಗಳಿಗೆಯಲ್ಲಿ ರದ್ದುಪಡಿಸಿದೆ. ಇದಕ್ಕೆ ಬಂಗಾಳ ಸರ್ಕಾರ ಶಾ ಕಾಪ್ಟರ್‌ ಇಳಿಸಲು ಅನುಮತಿ ನೀಡದ್ದೇ ಕಾರಣ. ಪಶ್ಚಿಮ ಬಂಗಾಳ ಸರ್ಕಾರ ಪ್ರಜಾಪ್ರಭುತ್ವವನ್ನು ನಿರಂಕುಶತ್ವವಾಗಿ ಬದಲಾಯಿಸಿದೆ. ಚುನಾವಣಾ ಆಯೋಗ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಈ ಆರೋಪವನ್ನು ಟಿಎಂಸಿ ನಿರಾಕರಿಸಿದೆ. ಜನರನ್ನು ಸೇರಿಸಲು ಸಾಧ್ಯವಾಗದೇ ಇದ್ದಿದ್ದಕ್ಕೆ ಬಿಜೆಪಿ ರ‍್ಯಾಲಿಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದೆ. ಬಿಜೆಪಿಯ ಆರೋಪ ಸಂಪೂರ್ಣ ನಿರಾಧಾರ. ಬಿಜೆಪಿ ರಾರ‍ಯಲಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಜನರಿಲ್ಲದ ಕಾರಣಕ್ಕೆ ಅವರಾಗಿಯೇ ರಾರ‍ಯಲಿಯನ್ನು ರದ್ದುಮಾಡಿದ್ದಾರೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳದ ಕೈನಿಂಗ್‌ನಲ್ಲಿ ಚುನಾವಣಾ ರಾರ‍ಯಲಿಯೊಂದರಲ್ಲಿ ಮಾತನಾಡಿದ ಅಮಿತ್‌ ಶಾ, ಟಿಎಂಸಿ ಸರ್ಕಾರ ತಾವು ರಾರ‍ಯಲಿಯಲ್ಲಿ ಭಾಗವಹಿಸದಂತೆ ತಡೆಯ ಬಹುದು. ಆದರೆ, ಬಿಜೆಪಿಯ ವಿಜಯ ಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಾನೂ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತೇನೆ. ಸಾಧ್ಯವಿದ್ದರೆ ನನ್ನನ್ನು ಬಂಧಿಸಿ ಎಂದು ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದಾರೆ. ಕಳೆದ ವಾರ ಮೋದಿ ಕೂಡಾ ಮಮತಾಗೆ ಇದೇ ರೀತಿಯ ಸವಾಲು ಹಾಕಿದ್ದರು.

Categories
Breaking News District National Political State

ಮಾರ್ಚ್ 9ಕ್ಕೆ ರಾಹುಲ್ ಗಾಂಧಿ ಉತ್ತರ ಕರ್ನಾಟಕದಲ್ಲಿ ಪರಿವರ್ತನಾ ಯಾತ್ರೆ..

ಮಾರ್ಚ್ 9ಕ್ಕೆ ರಾಹುಲ್ ಗಾಂಧಿ ಉತ್ತರ ಕರ್ನಾಟಕದಲ್ಲಿ ಪರಿವರ್ತನಾ ಯಾತ್ರೆ ಮಾಡಲಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದರು.
ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಮತ್ತು ರಾಹುಲ್ ಗಾಂಧಿ ಕಾರ್ಯಕ್ರಮ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ನಗರದ ಮಂತ್ರಾ ರೆಸಿಡೆನ್ಸಿಯಲ್ಲಿಂದು ಮಹತ್ವದ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಹಾವೇರಿ, ಧಾರವಾಡ ಮಧ್ಯದ ಬಂಕಾಪುರಲ್ಲಿ ಸಮಾವೇಶಕ್ಕೆ ಸ್ಥಳ ನಿಗದಿಗೊಳಿಸಲಾಗಿದೆ.ಹಾವೇರಿ, ಗದಗ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಸುಮಾರು ಮೂರುಲಕ್ಷ ಜನರನ್ನ ಸೇರುವ ನಿರೀಕ್ಷೆಯಿದೆ ಎಂದರು.

ಸ್ಥಳ ಪರಿಶೀಲನೆಯನ್ನ ಶೀಘ್ರವೇ ಮಾಡಲಿದ್ದೇವೆ. ಅಲ್ಲದೇ ಇದೇ ವಿಚಾರವಾಗಿ ಇಂದು ಪೂರ್ವಭಾವಿ ಸಭೆ ನಡೆಸಿದ್ದೇವೆ.ಕಾರ್ಯಕ್ರಮ ಯಶಸ್ವಿಗೆ ಉತ್ತರ ಕರ್ನಾಟಕದ ಎಲ್ಲ ಮುಖಂಡರು, ಕಾರ್ಯಕರ್ತರು ಪಣ ತೊಟ್ಟಿದ್ದಾರೆಂದು ಅವರು ಹೇಳಿದರು.

ಸೇನೆಯ ದಾಳಿಗೆ ಪ್ರಶಂಸೆ ವ್ಯಕ್ತಪಡಿಸಿದ ಗುಂಡೂರಾವ ಈ ವಿಷಯವಾಗಿ ನಾವೆಲ್ಲ ಒಂದಾಗಿ ಎದುರಿಸಬೇಕು.ಬಿಜೆಪಿ ಸ್ವಾರ್ಥಕ್ಕಾಗಿ ಈ ಘಟನೆಯನ್ನ ಬಳಸಿಕೊಳ್ಳುತ್ತಿದೆ.ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ಬಿ.ಎಸ್. ಯಡಿಯೂರಪ್ಪ ಚುನಾವಣ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರಲ್ಲದೇ ಬಿ.ಎಸ್.ವೈ. ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ.
ಯುದ್ಧದಂತಹ ಸನ್ನಿವೇಶವನ್ನ ರಾಜಕೀಯ ಲಾಭದ ಚಿಂತನೆ ನಿಜಕ್ಕೂ ದುರದೃಷ್ಟಕರ.ಯಡಿಯೂರಪ್ಪನವರ ಮಾತುಗಳು ಬೇಜವಾಬ್ದಾರಿ ತನದಿಂದ ಮಾತನಾಡಿದ್ದಾರೆ.ನಮ್ಮ ನಮ್ಮಲ್ಲಿನ ಬಿರುಕುಗಳಿಂದ ಶತ್ರುಗಳಿಗೇ ಲಾಭ.ಇದನ್ನು ಇಡೀ ದೇಶವೇ ನಿಂತು ಎದುರಿಸಬೇಕಾದ ಸಂದರ್ಭ.ಸೈನಿಕರಿಗೆ ಆತ್ಮಸ್ಥೈರ್ಯ ತುಂಬಬೇಕು.ದೇಶಭಕ್ತಿ ಬಿಜೆಪಿ ಸ್ವತ್ತಲ್ಲ.ಕೇಂದ್ರ ಸರ್ಕಾರ ವಿಪಕ್ಷಗಳನ್ನ ಗಣನೆಗೆ ಪಡೆಯಬೇಕು ಎಂದರು

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯಲಿದ್ದು ಧಾರವಾಡ, ಹಾವೇರಿ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ ಎಂದರು.

ಎಚ್.ಕೆ. ಪಾಟೀಲ್, ಜಮೀರ ಅಹ್ಮದ್, ಬಿ.ಸಿ. ಪಾಟಿಲ್, ಎ.ಎಂ. ಹಿಂಡಸಗೇರಿ, ಪ್ರಸಾದ ಅಬ್ಬಯ್ಯ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮ ಸಿದ್ದತೆ ಕುರಿತಂತೆ ಮೂರು ಜಿಲ್ಲೆಗಳ ಪಕ್ಷದ ಕಾರ್ಯಕರ್ತರು, ಮುಖಂಡರು, ಉಸ್ತುವಾರಿ ಸಚಿವರು,ಶಾಸಕರೊಂದಿಗೆ ಗುಂಡೂರಾವ ಸಭೆ ನಡೆಸಿದರು.ಲೋಕ ಸಭಾ ಟಿಕೇಟ್ ಹಂಚಿಕೆ ಕುರಿತಂತೆ ಅಭಿಪ್ರಾಯ ಪಡೆದರು.

ಹಾವೇರಿ, ಗದಗ ಹಾಗೂ ಧಾರವಾಡ ಮೂರು ಜಿಲ್ಲೆಗಳ ಎರಡು ಕ್ಷೇತ್ರಗಳಲ್ಲಿ ಯಾರಿಗೆ ಟಿಕಟ್ ನೀಡಬೇಕೆಂಬ ಬಗೆಗೆ ಎಲ್ಲ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು

Categories
Breaking News National Political

ಬಿಜೆಪಿ ರಥಯಾತ್ರೆಗೆ ಹೈಕೋರ್ಟ್ ಅಸ್ತು : ಪಶ್ಚಿಮ ಬಂಗಾಳದಲ್ಲಿ ಬಾವುಟ ಹಾರಿಸಲು ಮುಂದಾದ ಕಮಲ

ಮಮತಾ ರಾಜ್ಯದಲ್ಲಿ ಬಿಜೆಪಿ ರಥಯಾತ್ರೆಗೆ ಹೈಕೋರ್ಟು ಅಸ್ತು ಎಂದಿದೆ. ಇದರಿಂದಾಗಿ ಶತಾಯಗತಾಯ ಪಶ್ಚಿಮ ಬಂಗಾಳದಲ್ಲಿ ತನ್ನ ಬಾವುಟ ಹಾರಿಸಲು ಮುಂದಾಗಿರುವ ಬಿಜೆಪಿಗೆ ಮೊದಲ ಜಯ ಸಿಕ್ಕಂತಾಗಿದೆ.

ಲೋಕಸಭಾ ಚುನಾವಣೆ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಥಯಾತ್ರೆಗೆ ಮಮತಾ ಬ್ಯಾನರ್ಜಿ ಸರಕಾರ ಎರಡು ಬಾರಿ ಅನುಮತಿ ನಿರಾಕರಿಸಿತ್ತು.

ಇದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್‌ ಮೆಟ್ಟಿಲು ಹತ್ತಿತ್ತು. ವಿಚಾರಣೆ ನಡೆಸಿದ ಹೈಕೋರ್ಟು ರಥಯಾತ್ರೆಗೆ ಷರತ್ತುಬದ್ಧ ಅನುಮತಿ ನೀಡುವಂತೆ ಆಡಳಿತಕ್ಕೆ ಗುರುವಾರ ಸೂಚಿಸಿದೆ.

ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಈ ಹಿಂದೆ ರಥ ಯಾತ್ರೆಗೆ ಅನುಮತಿ ನಿರಾಕರಿಸಿತ್ತು.

ರಥಯಾತ್ರೆಗೆ ಅನುಮತಿ ನಿರಾಕರಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ತಳ್ಳಿ ಹಾಕಿದ್ದು, ರಥಯಾತ್ರೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿದೆ.

ಯಾತ್ರೆಯು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರವೇಶಿಸುವ ಬಗ್ಗೆ ಸಾಕಷ್ಟು ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದೂ ಕೋರ್ಟ್‌ ಸೂಚಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಭಾಗವಹಿಸುವ ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಿದೆ.

Categories
Breaking News National

ಕೈಲಾಸ ಮಾನಸ ಸರೋವರ ಯಾತ್ರೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ..

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರದಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಲಿದ್ದಾರೆ. 12 ದಿನಗಳ ಕಾಲ ಯಾತ್ರೆಗೆ ಹೊರಟಿರುವ ರಾಹುಲ್ ಗಾಂಧಿ ಸೆಪ್ಟೆಂಬರ್ 12 ಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಾಹುಲ್ ಪ್ರಯಾಣಿಸುತ್ತಿದ್ದ ತಾಂತ್ರಿಕ ದೋಷ ಉಂಟಾಗಿ ಆತಂಕ ಎದುರಿಸಿದ್ದರು. ಇದೇ ವೇಳೆ ರಾಹುಲ್ ಗಾಂಧೀ ಕೈಲಾಶ್ ಮಾನಸ ಸರೋವರ ಯಾತ್ರೆಗೆ ತೆರಳುವ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.

ಏಪ್ರಿಲ್ 29 ರಂದು ನವದೆಹಲಿಯಲ್ಲಿ ನಡೆದಿದ್ದ ಆಕ್ರೋಶ್ ರ್ಯಾಲಿಯಲ್ಲಿ ಮಾತನಾಡಿದ್ದ  ರಾಹುಲ್ ಗಾಂಧಿ ಅವರು ‘ ಕರ್ನಾಟಕಕ್ಕೆ ಹೋಗುವಾಗ ನಾನು ಪಯಣಿಸುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ 8000 ಅಡಿ ಕೆಳಗಿಳಿಯಿತು. ಆಗ ಹೆಲಿಕಾಪ್ಟರ್ ಅಪಘಾತಕ್ಕೀಡಾಗುತ್ತದೆ ಎಂದು ನಾನು ತುಂಬ ಭಯಭೀತನಾಗಿದ್ದೆ. ಆಗಲೇ ನನಗೆ ಮಾನಸ ಸರೋವರದ ನೆನಪಾಯಿತು  ‘ ಎಂದಿದ್ದರು.

Categories
Breaking News District

ಚುನಾವಣೆಯಲ್ಲಿ JDS ಗೆದ್ದರೆ ರೈತರನ್ನು ಇಸ್ರೇಲ್‌ಗೆ ಕಳುಹಿಸುತ್ತೇನೆ : HDK

ದಾವಣಗೆರೆ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಗೆದ್ದರೆ ಸಂಶೋಧನೆಗಾಗಿ ರೈತರನ್ನು ಇಸ್ರೇಲ್‌ಗೆ ಕಳುಹಿಸುವುದಾಗಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದಾವಣಗೆರೆಯ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ನಡೆದ ವಿಕಾಸಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ರೇಲ್‌ನಲ್ಲಿ 200 ಸಂಶೋಧಕರನ್ನು ಭೇಟಿಯಾಗಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೃಷಿಯ ಸಂಶೋಧನೆಗಾಗಿ ರೈತರಿಗೆ ಇಸ್ರೇಲ್‌ಗೆ ಕಳುಹಿಸುವುದಾಗಿ ಹೇಳಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ಪಕ್ಷಗಳ ವಿರುದ್ದ ಗುಡುಗಿದ ಎಚ್‌ಡಿಕೆ, ಜನರು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಜಾಹೀರಾತಿಗಾಗಿ 1 ಸಾವಿರ ಕೋಟಿ ರೂ ಖರ್ಚು ಮಾಡಿದ್ದಾರೆ. ಟಿವಿ ಆನ್‌ ಮಾಡಿದರೆ ಸಾಕು ಸರ್ಕಾರದ ಜಾಹೀರಾತುಗಳೇ ಕಾಣಿಸುತ್ತವೆ ಎಂದು ಆರೋಪಿಸಿದ್ದಾರೆ.
ಮೇ.12ರಂದು ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ 6.5 ಕೋಟಿ ಜನರ ಭವಿಷ್ಯ ಅಡಗಿದೆ. ಎರಡೂ ಪಕ್ಷದ ನಾಯಕರು ತಮ್ಮ ರಾಷ್ಟ್ರೀಯ ನಾಯಕರ ಜೊತೆ ಪ್ರವಾಸ ಮಾಡುತ್ತಿದ್ದಾರೆ. ಆದರೆ ರೈತರ ಸಮಸ್ಯೆಗಳ ಬಗ್ಗೆ ಒಬ್ಬರೂ ಮಾತನಾಡುತ್ತಿಲ್ಲ. ನನಗೆ ಒಂದು ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದ್ದಾರೆ.

Categories
Breaking News Political

ಕಾಂಗ್ರೆಸ್‌ ನಿರ್ನಾಮ ಮಾಡುವುದು ಈ ಸಿದ್ದರಾಮಯ್ಯನವರೇ ಅಂತ ಎಲ್ಲರಿಗೂ ಗೊತ್ತಿದೆ : HDK

ಮಾಗಡಿ : ಜೆಡಿಎಸ್ ಪಕ್ಷ 20 ರಿಂದ 40 ಸ್ಥಾನ ಬರುವುದಿಲ್ಲ ಎಂದು ಇಲ್ಲಿನ ಶಾಸಕರು ಹೇಳಿ ಹೋಗಿದ್ದರು. ಆದರೆ ಜನರೇ ಅದಕ್ಕೆ ಇಂದು ಉತ್ತರ ನೀಡಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ಮಾಗಡಿಯಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷ ಬಿಟ್ಟು ಹೋದ 7 ಮಂದಿ ಶಾಸಕರಿಗೆ ಟಾಂಗ್ ನೀಡಿದ್ದು, ಅಂತಹವರ ಬಗ್ಗೆ ಮಾತನಾಡಿ ಕೆಸರಿನ ಮೇಲೆ ಕಲ್ಲು ಹಾಕಲು ಇಷ್ಟಪಡಲ್ಲ. ನಮ್ಮಲ್ಲಿದ್ದ ಕೆಸರು ಇಂದು ದೂರವಾಗಿದೆ. ಎರಡು ವರ್ಷಗಳ ಹಿಂದೆ ನನಗೆ ಟೋಪಿ ಹಾಕಿ ಹೋಗಿದ್ದಾರೆ. ನಿಮ್ಮ ಆಶಿರ್ವಾದ ನನಗೆ ಬಹಳ ಮುಖ್ಯ. ರಾಹುಲ್‌ , ಸಿದ್ದರಾಮಯ್ಯ, ಬಿಜೆಪಿಯಿಂದ ಪ್ರಧಾನಿ ಅಮಿತ್ ಶಾ ರಾಜ್ಯದಲ್ಲಿ ಬಂದು ಹೋಗುತ್ತಿದ್ದಾರೆ. ರಾಹುಲ್ ಭಾಷಣ ನೋಡಿದ್ರೆ ಅವರು ಸಿದ್ದರಾಮಯ್ಯ ಅವರ ಪಂಜರದ ಗಿಳಿಯಾಗಿದ್ದಾರೆ ಎಂದು ತಿಳಿಯುತ್ತದೆ. ಜೆಡಿಎಸ್ ಸಂಘ ಪರಿವಾರ ಅಂತಾ ರಾಹುಲ್ ಹೇಳಿದ್ದಾರೆ. ಕಾವೇರಿ ನದಿ ನೀರು ಹರಿಯುವ ಪ್ರದೇಶದಲ್ಲಿ ಬಂದು ಜೆಡಿಎಸ್ ಪಕ್ಷವನ್ನ ಕೆಣಕಿದ್ದೀರಿ. ಇದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡುವುದು ಸತ್ಯ ಎಂಬುದು ಪರಮೇಶ್ವರ್ ಹಾಗು ಖರ್ಗೆ ಅವರಿಗೆ ಚನ್ನಾಗಿ ಗೊತ್ತಿದೆ. ರಾಜ್ಯಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರದ ಕೊಡುಗೆ ಏನು ಎಂಬ ಬಗ್ಗೆ ರಾಜ್ಯದ ಜನತೆಯಲ್ಲಿ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುತ್ತೇವೆ. ಕೇವಲ ಸಾಲ ಮನ್ನಾ ದಿಂದ ರೈತರ ಬದುುಕು ಸರಿಯಾಗುವುದಿಲ್ಲ. ಅದಕ್ಕೆ ಇಂತಹ ಹೊಸ ಹೊಸ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ಹೊರ ದೇಶಕ್ಕೆ ಹೋಗಿದ್ದೆ ಎಂದಿದ್ದಾರೆ.

Categories
Breaking News District

ಮಂಗಳೂರಲ್ಲಿ ರಾಹುಲ್‌ ಗಾಂಧಿ ಯಾತ್ರೆ : ಬೆಂಗಾವಲು ಜೀಪ್‌ ಹತ್ತಿ ಕಾರ್ಯಕರ್ತರ ಪುಂಡಾಟ

ಮಂಗಳೂರು : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಂಗಳೂರು ಪ್ರವಾಸದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದಾರೆ. ರಾಹುಲ್‌ ಗಾಂಧಿ ಅವರ ಬೆಂಗಾವಲು  ವಾಹನದ ಮೇಲೆ ಹತ್ತಿ ಯಾತ್ರೆ ನಡೆಸಿರುವುದಾಗಿ ತಿಳಿದುಬಂದಿದೆ.

ಕಾರ್ಯಕರ್ತರನ್ನು ಜೀಪಿನಿಂದ ಕೆಳಗಿಳಿಯಲು ಪೊಲೀಸರು ಸೂಚಿಸಿದರೂ ಇಳಿಯದೇ ತಮ್ಮದೇ ರಾಜ್ಯಭಾರ ನಡೆಸಿದ್ದಾರೆ.  ಅಲ್ಲದೆ ಪೊಲೀಸರ ಕೆಲಸಕ್ಕೂ ಅಡ್ಡಿ ಪಡಿಸಿದ್ದು, ಭದ್ರತೆಗೆಂದು ನಿಯೋಜನೆಗೊಂಡಿದ್ದ ಪೊಲೀಸರ ಲಾಠಿ, ಹಗ್ಗ ಹಿಡಿದು ಜಗ್ಗಾಡಿದ್ದಾರೆ. ಈ  ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.

ಕಾರ್ಯಕರ್ತರ ಪುಂಡಾಟಿಕೆಯಿಂದ ಕಾಂಗ್ರೆಸ್‌ ಇಮೇಜಿಗೆ ಧಕ್ಕೆಯುಂಟಾಗಿದ್ದು, ಈ ರೀತಿ ಮಾಡಿದವರು ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿದೆ. ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

Categories
Breaking News District

ಕಾಂಗ್ರೆಸ್‌, ಬಿಜೆಪಿಯವರಿಗೆ ಬೇಕಾದಷ್ಟು ಬಯ್ಯಬಹುದು, ಆದರೆ ಜನರಿಗೆ ಪ್ರಯೋಜನವಾಗಲ್ಲ : HDK

ರಾಯಚೂರು : ಜೆಡಿಎಸ್‌ನ ವಿಕಾಸಪರ್ವ ಯಾತ್ರೆ ರಾಯಚೂರಿಗೆ ತಲುಪಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದಾರೆ.

ಒಂದು ಕಡೆ ಬಿಜೆಪಿ ಪ್ರಧಾನಿ ಒಳಗೊಂಡಂತೆ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನಿಂದ ರಾಹುಲ್, ಸಿಎಂ ಬಂದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಪರಸ್ಪರ ಕೆಸರು ಎರಚಾಟಕ್ಕಷ್ಟೇ ಬಳಸಿಕೊಳ್ತಿದ್ದಾರೆ. ಎರಡೂ ಪಕ್ಷಗಳು ಸಮಸ್ಯೆಗಳ ಪರಿಹಾರದ ಬಗ್ಗೆ ಕಾರ್ಯಕ್ರಮಗಳಲ್ಲಿ ಮಾತನಾಡುತ್ತಿಲ್ಲ. ಬಿಜೆಪಿ ಅವರು ಅಧಿಕಾರ ಕೊಟ್ರೆ ಸಿದ್ದರಾಮಯ್ಯನವರನ್ನ ಜೈಲಿಗೆ ಕಳುಸ್ತೀನಿ ಅಂತಿದಾರೆ. ಸಿದ್ದರಾಮಯ್ಯ ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನ ಪ್ರಸ್ತಾಪಿಸುತ್ತಾರೆ. ಇವರಿಬ್ಬರ ಜಗಳದಲ್ಲಿ ಕರಾವಳಿಯಲ್ಲಿ ಹಲವು ಜನ ಬಲಿಯಾಗಿರುವುದಾಗಿ ಹೇಳಿದ್ದಾರೆ.

ಕರಾವಳಿಯಲ್ಲಿ ಬಿಜೆಪಿ ಕಾಂಗ್ರೆಸ್ ನವರು ರ್ಯಾಲಿ ಮಾಡಿ ಅಲ್ಲಿನ ಶಾಂತಿ ಕೆಡಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲೂ ಆಸ್ಪತ್ರೆಗೆ ಹೋದ ಮಕ್ಕಳು ಆಸ್ಪತ್ರೆಯಲ್ಲಿ ಆಮ್ಲಜನಕವಿಲ್ಲದೆ ಸಾಯುತ್ತಿವೆ. ಅಲ್ಲಿ ಯೋಗಿ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿಲ್ಲ. ಇಂತವರು ಸುರಕ್ಷೆ ಕೊಡುವ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಅವರ ರಾಜ್ಯದಲ್ಲೇ ಸುರಕ್ಷತೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕರನ್ನು ,ಬಿಜೆಪಿಯವರನ್ನು ಗಂಟೆಗಟ್ಟಲೆ ಬಯ್ಯಬಹುದು ಅದರಿಂದ ಜನರ ಕಷ್ಟಗಳಿಗೆ ಪರಿಹಾರವಿಲ್ಲ. ಆತ್ಮಹತ್ಯೆ ಮಾಡಿಕೊಂಡ 3500 ರೈತರ ಕುಟುಂಬಗಳ ಬಗ್ಗೆ ಮಾತಾಡಬೇಕಿದೆ. ರಾಯಚೂರಿನಲ್ಲಿ 78 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರನ್ನ ಸರ್ಕಾರ ನೋಡಲಿಲ್ಲ. ನಾನು ಐವತ್ತು ಸಾವಿರ ಪರಿಹಾರ ಒದಗಿಸಿದ್ದೇನೆ ಎಂದಿದ್ದಾರೆ.

ಇಂದಿಗೂ ರೈತರು ಸಾಯ್ತಾರೆ. ಸರ್ಕಾರಗಳು ಸೂಟ್ ಹಾಕಿಕೊಂಡವರ ಸಾಲ ಮನ್ನಾ ಮಾಡ್ತಾರೆ. ರೈತರು ಮಾಡಿಕೊಂಡಿರುವ 58 ಸಾವಿರ  ಕೋಟಿ ಸಾಲ ಮಾಡಿದ್ದೀರಿ. ಪಕ್ಷ ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ಅಷ್ಟೂ ಸಾಲ ಮನ್ನಾ ಮಾಡ್ತೇವೆ. ಎಷ್ಟೆ ತಿಪ್ಪರಲಾಗ ಹಾಕಿದ್ರೂ ಪರಮೇಶ್ವರ್ ಗೆಲ್ಲೋದಿಲ್ಲ. ಸಿದ್ದರಾಮಯ್ಯ ಮಾತೃಪೂರ್ಣ ಯೋಜನೆ ಮಾಡಿದ್ದಾರೆ..ಹೊಟ್ಟೆಯೊಳಗೆ ಮಗು ಇಟ್ಕೊಂಡು ಹೋಗಿ ಊಟ ಮಾಡಿಕೊಂಡು ಬರಬೇಕು. ಇದರ ಬದಲಿಗೆ ನಾವು ತಾಯಿ ಮಗು ರಕ್ಷಣೆಗೆ ಆರು ತಿಂಗಳ ಕಾಲ ಪ್ರತೀ ತಿಂಗಳು ಆರು ಸಾವಿರ ಕೊಡಲಾಗುವುದಾಗಿ ಘೋಷಿಸಿದ್ದಾರೆ.

 

Categories
Breaking News District

ಹಾಸನದಲ್ಲಿ JDS ವಿಕಾಸ ಪರ್ವ ಯಾತ್ರೆ : ಆರಂಭದಲ್ಲೇ ಎದುರಾಯ್ತು ವಿಘ್ನ

ಹಾಸನ : ಜೆಡಿಎಸ್‌ನ ವಿಕಾಸಪರ್ವ ಯಾತ್ರೆ ಇಂದು ಹಾಸನಕ್ಕೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಭುವನಹಳ್ಳಿ ಬಳಿ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಲಾಗಿದ್ದು, ಆರತಿ ಎತ್ತುವ ಮೂಲಕ ಮಹಿಳೆಯರು ರಥಯಾತ್ರೆಗೆ ಸ್ವಾಗತ ಕೋರಿದ್ದಾರೆ.

ಆದರೆ ಈ ಕಾರ್ಯಕ್ರಮಕ್ಕೆ ಆರಂಭದಲ್ಲಿ ವಿಘ್ನ ಎದುರಾಗಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ವೇದಿಕೆ ಮೇಲೆ ಹಾಕಿದ್ದ ಶಾಮಿಯಾನದ ಕಂಬ ಮುರಿದುಬಿದ್ದಿದೆ. ಈ ಹಿನ್ನೆಲೆಯಲ್ಲಿ ವೇದಿಕೆ ಕೆಳಭಾಗದಲ್ಲಿ ಕುಳಿತಿದ್ದ ಐದಾರು ಮಂದಿಗೆ ಗಾಯಗಳಾಗಿದ್ದು, ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಅವಗಢ ನಡೆದಿಲ್ಲ ಎಂದು ತಿಳಿದುಬಂದಿದೆ.