‘ಅವನ್ಯಾವನೋ ಮೋದಿ ಅಂತೆ ಹುಣಸೇಕಾಯಿ ಅಂತೆ’ ನಮೋ ವಿರುದ್ದ ಅರಸೀಕೆರೆ ಶಾಸಕ ಆಕ್ರೋಶ…

ಅರಸೀಕೆರೆ ತಾಲೂಕಿನ ಯಾದಾಪುರ ಗ್ರಾಮದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮದರಲ್ಲಿ ಸ್ಥಳೀಯರೊಂದಿಗೆ ಮಾತನಾಡಿದ ಶಾಸಕರು ತಮ್ಮದೇ ಆದ ಶೈಲಿಯಲ್ಲಿ ಪ್ರಧಾನಿ ಮೋದಿ ವಿರುದ್ದ ಕೆಂಡ ಕಾರಿದ್ದಾರೆ. ಅದ್ಯಾವನ್ರೀ ಇತಿಹಾಸದಲ್ಲಿ ಇಷ್ಟು ಕೆಲಸ‌ ಮಾಡೋಕ್ ಅಗುತ್ತೆ. ಅವರ್ ಮನೆ ಹಾಳಾಗಾ ನೋಡಿ ಅದೆಂತಂದೋ ಮೋದಿಯಂತೆ ಮೋದಿ ಎಂದು ಆಕ್ರೋಶಗೊಂಡಿದ್ದಾರೆ.

ಅವನ್ಯಾವನೋ ಮೋದಿ ಅಂತೆ ಹುಣಸೇಕಾಯಿ ಅಂತೆ ಬದನೆಕಾಯಿ ಅಂತೆ ಅನ್ಕೊಂಡು ಓಟ್ ಹಾಕ್ತವಲ್ರೀ ಇವು ಎಂದು ಕಿಡಿಕಾಡಿದ್ದಾರೆ.

ಶಿವಲಿಂಗೇಗೌಡ ಕ್ಷೇತ್ರದಲ್ಲಿ ಕೆಲಸ‌ ಮಾಡಿಸ್ತಾವ್ನನೆ. ಅವನು ಎಲ್ಲಿದ್ದಾನೆ ಅಲ್ಲಿಗೆ ಒಂದು ಓಟ್ ಎಸೀಬೇಕು ಅಷ್ಟೆ. ಕೆಲಸ ಮಾಡಿ ತೋರಿಸಿಲ್ವ,ನಿಮ್ ಊರಿಗೆ ಒಂದು ಹನಿ ನೀರು ಬರ್ತಿತ್ತಾ?ಅದನ್ನ ನಾನು ಮಾಡಿಸ್ಲಿಲ್ವ? ಏನ್ ಮಾಡೋದು ಹತ್ತು ವರ್ಷ ನಮ್ಮ ಸರ್ಕಾರ ಬರಲೇ ಇಲ್ಲ. ಈಗೇನೋ ಒಂದು ಚೂರು ಉಸಿರಾಡನ ಅನ್ನುವಷ್ಟರಲ್ಲಿ ಸರ್ಕಾರನಾ ಢಮಾರ್ ಅನ್ಸುದ್ರು. ಶಾಸಕ ಶಿವಲಿಂಗೇಗೌಡ ವಿಶೇಷ ಶೈಲಿಯ ಮಾತುಗಳಲ್ಲಿ ಕೆಂಡಕಾರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights