ಆಕೆಗೆ ಸೌಂದರ್ಯವೇ ಮುಳುವು : ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಯಿಂದ ವಜಾ ಮಾಡಿದ ಆಡಳಿತ ಮಂಡಳಿ
ತುಂಬಾ ಚೆನ್ನಾಗಿ ಕಾಣಬೇಕು ಅನ್ನೋ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಆದರೆ ಅತಿಯಾಗಿ ಸುಂದರವಾಗಿ ಕಂಡರೆ ಅದು ಮುಳುವಾಗುತ್ತದೆ ಅನ್ನೋದಕ್ಕೆ ಈ ವಿದ್ಯಾರ್ಥಿನೇ ಸಾಕ್ಷಿ.
ಹೌದು… ಶಾಲೆ, ಕಾಲೇಜುಗಳಲ್ಲಿ ಸಾಮಾನ್ಯವಾಗಿ ನಿಯಮ ಪಾಲನೆ ಮಾಡದ, ಶಿಸ್ತು ಉಲ್ಲಂಘನೆ ಮಾಡಿರುವ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಲಾಗುತ್ತದೆ. ಆದ್ರೆ ವಿದ್ಯಾರ್ಥಿನಿಯೊಬ್ಬಳಿಗೆ ಸೌಂದರ್ಯವೇ ಮುಳುವಾಗಿದೆ. ಆಕೆ ತುಂಬಾ ಸುಂದರವಾಗಿದ್ದಾಳೆ. ಮಾದಕವಾಗಿ ಕಾಣಿಸ್ತಾಳೆ ಎನ್ನುವ ಕಾರಣ ಹೇಳಿ ವಿದ್ಯಾರ್ಥಿನಿಯನ್ನು ಶಾಲೆಯಿಂದ ವಜಾ ಮಾಡಲಾಗಿದೆ.
ಘಟನೆ ಇಂಗ್ಲೆಂಡ್ ನ ಸಿರಸ್ ಅಕಾಡೆಮಿಯಲ್ಲಿ ನಡೆದಿದೆ. 14 ವರ್ಷದ ಸಮ್ಮರ್ ಬುರ್ಕಿಟ್ ಳನ್ನು ಒಂದು ದಿನದ ಮಟ್ಟಿಗೆ ಶಾಲೆಯಿಂದ ಹೊರ ಹಾಕಲಾಗಿತ್ತು. ಸಮ್ಮರ್ ತಾಯಿ ಕೆಲ್ಲಿ ಇದನ್ನು ಖಂಡಿಸಿದ್ದಾಳೆ. ಸಮ್ಮರ್, ಬ್ಲೇಸರ್ ಬಿಚ್ಚಿದ್ದಳಂತೆ. ಬ್ಲೇಸರ್ ಬಿಚ್ಚಿ ತನ್ನ ಹಾಟ್ನೆಸ್ ಪ್ರದರ್ಶಿಸಲು ಈಕೆ ಮುಂದಾಗಿದ್ದಳು. ಹಾಗಾಗಿ ವಜಾ ಮಾಡಿದ್ದೇವೆ ಎಂದು ಶಾಲೆ ಸಿಬ್ಬಂದಿ ಹೇಳಿದ್ದಾರೆ.
ಸೆಕೆ ಕಾರಣ ಮಗಳು ಬ್ಲೇಸರ್ ಬಿಚ್ಚಿರಬಹುದು. ಆದ್ರೆ ಇದು ಕಾರಣವಲ್ಲವೆಂದು ತಾಯಿ ವಾದಿಸಿದ್ದಾಳೆ. ಶಾಲೆಯ ಈ ನಿಯಮ ಹಾಸ್ಯಾಸ್ಪದವಾಗಿದೆ ಎಂದು ಕೆಲ್ಲಿ ಆರೋಪಿಸಿದ್ದಾರೆ.