ಆಸ್ಪತ್ರೆಯಲ್ಲಿ ಮಗುವಿನ ಮೃತದೇಹ ಬಿಟ್ಟು ಪರಾರಿಯಾದ ದಂಪತಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೆತ್ತ ಮಗು ಅನಾರೋಗ್ಯಕ್ಕೀಡಾದ್ರೆ ತಾಯಿ ಜೀವ ಸಂಕಟ ಪಡುತ್ತದ, ಕೊರಗುತ್ತೆ, ನರಳಾಡುತ್ತೆ. ಆದರೆ ಇಲ್ಲೊಬ್ಬ ಮಹಾತಾಯಿ ಜೀವ ಅದ್ಯಾವುದನ್ನ ಪಡೆದೆ ಪರಾರಿಯಾಗಲು ಬಯಸಿದೆ.

ಸಮಾಜದಲ್ಲಿ ಅತೀ ಹೆಚ್ಚು ಗೌರವ, ಅತೀ ಎತ್ತರ ಸ್ಥಾನಮಾನ ಮಕ್ಕಳು ನೀಡೋದು ತಂದೆ-ತಾಯಿಗೆ. ಆದರೆ ನೀವು ಈ ಮಹಾತಾಯಿ ಮಾಡಿದ ಕಥೆ ಕೇಳಿದ್ರೆ ಅದೇನಂತಿರೋ ಏನೋ..? ಗೊತ್ತಿಲ್ಲ..

ತಾಯಿ ಕುಲಕ್ಕೆ ಕಳಂಕ ತರುವಂತ ಕೆಲಸ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ನಡೆದಿದೆ. ಹೌದು.. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗುವಿನ ಮೃತದೇಹ ಬಿಟ್ಟು ದಂಪತಿ ಪರಾರಿಯಾಗಿದ್ದಾರೆ. ಅನಾರೋಗ್ಯ ಅಂತ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದ ದಂಪತಿ,
ಮಗು ಮೃತಪಟ್ಟಿದೆ ಎಂಬ ಸುದ್ದಿ ತಿಳಿದು ಆಸ್ಪತ್ರಯಿಂದ ಪರಾರಿಯಾಗಿದ್ದಾರೆ. ಇವರಿಬ್ಬರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ದಾದಪೀರ್ ಶೇಕ್ ಹಾಗೂ ಪೂಜಾ ಠಾಕೂರ್ ಪರಾರಿಯಾದ ದಂಪತಿ. ಇವರಿಬ್ಬರು  ನಿನ್ನೆ ರಾತ್ರಿ ಮಗುವಿಗೆ ಅನಾರೋಗ್ಯ ಎಂದು ಕಿಮ್ಸ್‌ಗೆ ಕರೆತಂದಿದ್ದರು. ನಾಲ್ಕು ವರ್ಷದ ಹೆಣ್ಣುಮಗು ಅದು. ಆದರೆ ಆ ಮಗು ಅನುಮಾನಸ್ಪದವಾಗಿ ಸಾವುನ್ನಪ್ಪಿದೆ. ರೌಡಿಶೀಟರ್ ಆಗಿರುವ ಮಗುವಿನ ತಂದೆ ದಾದಾಪೀರ್ ಮತ್ತು ಈತನ ಹೆಂಡತಿ ಆಸ್ಪತ್ರೆಯಿಂದ ಹೊರಟವರೇ ರಾತೋರಾತ್ರಿ ಗೋಕುಲ ಗ್ರಾಮದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ.

ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಕ್ಕೆ ಮತ್ತು ತಂದೆ-ತಾಯಿ ಪರಾರಿಯಾದ್ದರಿಂದ ಪೊಲೀಸರು ಇವರಿಬ್ಬರನ್ನು ಹುಡುಕುತ್ತಿದ್ದಾರೆ.

.

Leave a Reply

Your email address will not be published. Required fields are marked *