ಇಂದು ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ 113ನೇ ಜಯಂತಿ..

ನಡೆದಾಡುವ ದೇವರು ಎಂದೇ ಪೂಜಿಸಲ್ಪಡುವ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಶ್ರೀಗಳ 113ನೇ ಹುಟ್ಟುಹಬ್ಬ ಇದ್ದು ಮಠದ ಆಡಳಿತ ಮಂಡಳಿಯಿಂದ ಆಚರಣೆ ರದ್ದು ಮಾಡಲಾಗಿದೆ.

ಹೌದು… ಕೊರೊನಾ ವೈರಸ್ ಭೀತಿ ಎಲ್ಲೆಡೆ ಆವರಿಸಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಮಹಾಮಾರಿ ಕೊರೊನಾ ವೈರಸ್ ಗೆ ವಿಶ್ವವೇ ತಲ್ಲಣಗೊಂಡು ಲಾಕ್ ಡೌನ್ ಮಾಡಲಾಗಿದೆ.  ಈ ಹಿನ್ನೆಲೆಯಲ್ಲಿ ಶ್ರೀಗಳ ಹುಟ್ಟುಹಬ್ಬವನ್ನು ರದ್ದು ಮಾಡಕಲಾಗಿದೆ.

ಪ್ರತೀ ವರ್ಷ ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ ಶಿವಕುಮಾರ ಸ್ವಾಮಿಗಳ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾಋಇ ಎಂದಿನಂತೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜೆ ಮಾಡಲಾಗಿದೆ. ಬಳಿಕ ಮಧ್ಯಾಹ್ಣ ಮಠದ ವಿದ್ಯಾರ್ಥಿಗಳಿಗೆ ಸಿಗಿ ವಿತರಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಮನಗಳನ್ನು ತಿಳಿಸಿದ್ದಾರೆ.

https://twitter.com/BSYBJP/status/1245180753312276480

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights