ಇಸ್ಲಾಮೋಫೋಬಿಕ್: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಉದ್ಯೋಗ ಕಳೆದುಕೊಂಡ ಭಾರತೀಯರು!
ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನ ರಾಸ್ ಅಲ್ ಖೈಮಾದಲ್ಲಿನ ಗಣಿಗಾರಿಕೆ ಸಂಸ್ಥೆಯ ಭಾರತೀಯ ಮೂಲಕ ಉದ್ಯೋಗಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಮುಸ್ಲೀಂ ವಿರೋಧಿ ಇಸ್ಲಾಮಫೋಬಿಕ್ ಫೋಸ್ಟ್ಗಳನ್ನು ಶೇರ್ ಮಾಡಿದ್ದ ಕಾರಣಕ್ಕಾಗಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಭಾರತೀಯ ಮುಸ್ಲಿಮರು ದೇಶಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದಾರೆ ಎಂದು ಕರೆದಿದ್ದಕ್ಕಾಗಿ ಮತ್ತು ದೆಹಲಿ ಗಲಭೆಗಳನ್ನು ದೈವದತ್ತವಾದ ನ್ಯಾಯವೆಂದು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಶ್ಲಾಘಿಸಿದ್ದಕ್ಕಾಗಿ ಬ್ರಜ್ಕಿಶೋರ್ ಗುಪ್ತಾ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ಉದ್ಯೋಗದಿಂದ ವಜಾ ಮಾಡಲಾಗಿದೆ.
ಇಂಥಹ ಕೋಮು ಬಣ್ಣ ಹಚ್ಚಲಾದ ಪೋಸ್ಟರ್ ಗಳಿಂದ ಪ್ರೇರೇಪಿತರಾದ ಜನರ ಕ್ರೌರ್ಯಕ್ಕೆ 50 ಕ್ಕೂ ಹೆಚ್ಚು ಮುಸ್ಲಿಮರು ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಹಿಂಸಾರದಲ್ಲಿ ಕೊಲ್ಲಲ್ಪಟ್ಟರು.
ಮೂಲತಃ ಚಪ್ರಾದಿಂದ ಬಂದ ಗುಪ್ತಾ ಅವರು ರಾಸ್ ಅಲ್ ಖೈಮಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಗಣಿಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
” ಘಟನೆಯನ್ನು ತನಿಖೆ ಮಾಡಲಾಗಿದೆ ಮತ್ತು ಆತನ ಉದ್ಯೋಗ ಕಾರ್ಯಕ್ಷಮತೆಯನ್ನು ಗಮನಿಸದೆ ತಕ್ಷಣವೇ ವಜಾಗೊಳಿಸಲಾಗಿದೆ” ಎಂದು ಕಂಪನಿಯ ವ್ಯವಹಾರ ಅಭಿವೃದ್ಧಿ ಮತ್ತು ಪರಿಶೋಧನಾ ವ್ಯವಸ್ಥಾಪಕ ಜೀನ್-ಫ್ರಾಂಕೋಯಿಸ್ ಮಿಲಿಯನ್ ಭಾನುವಾರ ಗಲ್ಫ್ ನ್ಯೂಸ್ಗೆ ತಿಳಿಸಿದ್ದಾರೆ.
“ನಮ್ಮ ಕಂಪನಿ ನೀತಿಯು ಸಹಿಷ್ಣುತೆ ಮತ್ತು ಸಮಾನತೆಯನ್ನು ಉತ್ತೇಜಿಸುತ್ತದೆ, ಜಾತಿ, ಧರ್ಮ, ವರ್ಣಭೇದ ನೀತಿ ಮತ್ತು ತಾರತಮ್ಯವನ್ನು ಬಲವಾಗಿ ಖಂಡಿಸುವುದರ ಜೊತೆಗೆ ಯುಎಇ ಸರ್ಕಾರದ ನಿರ್ದೇಶನವನ್ನು ಬೆಂಬಲಿಸುತ್ತದೆ. ನಮ್ಮ ಎಲ್ಲ ಉದ್ಯೋಗಿಗಳಿಗೆ ಅವರ ಧಾರ್ಮಿಕ ಅಥವಾ ಜನಾಂಗೀಯ ಹಿನ್ನೆಲೆಯ ಹೊರತಾಗಿಯೂ ಸಂವಹನದಲ್ಲಿ ಒಳಗೊಳ್ಳುತ್ತೇವೆ. ಆದರೆ ಧಾರ್ಮಿಕ ಅಸಹಿಷ್ಣುತೆಗೆ ಇಲ್ಲಿ ಜಾಗವಿಲ್ಲ, ಅಂತಹ ಯಾವುದೇ ನಡವಳಿಕೆಯನ್ನು ಸಹಿಸುವುದಿಲ್ಲ. ಅವರ ಕೋಮುದ್ವೇಷದ ನಡುವಳಿಕೆಯಿಂದಾಗಿ ತಕ್ಷಣವೇ ಅವರನ್ನು ವಜಾಗೊಳಿಸಲು ಕಾರಣವಾಗಿದೆ ” ಎಂದು ಮಿಲಿಯನ್ ಹೇಳಿದರು.
ಯುಎಇಯ ಭಾರತೀಯ ರಾಯಭಾರಿಯವರು, ಯುಎಇಯು ದ್ವೇಷ ಭಾಷಣ ವಿರುದ್ಧ ಕಟ್ಟುನಿಟ್ಟಾದ ಕಾನೂನುಗಳನ್ನು ಹೊಂದಿದೆ. ಅವುಗಳನ್ನು ಉಲ್ಲಂಘಿಸುವುದರ ಪರಿಣಾಮಗಳ ಬಗ್ಗೆ ತಮ್ಮ ದೇಶದಿಂದ ಬರುವವರಿಗೆ ಎಚ್ಚರಿಕೆ ನೀಡಿದ್ದಾರೆ. ಇತರ ಜಿಸಿಸಿ ದೇಶಗಳಲ್ಲಿನ ಇಂತಹ ಉಲ್ಲಂಘನೆಗೂ ಇದೇ ರೀತಿಯ ಎಚ್ಚರಿಕೆಗಳನ್ನು ನೀಡಲಾಗಿದೆ. ಆದರೆ ಅವು ಕಿವುಡ ಕಿವಿಗೆ ಬಿದ್ದಂತೆ ಕಂಡುಬರುತ್ತದೆ.
ಇಂಥಹ ಘಟನೆಗಳಿಂದ ಹಲವಾರು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ನೀಡುವ ಕರೆಗೆ ಬೆಂಬಲಿಸಿ ಪೋಸ್ಟ್ ಮಾಡುವವರು ಕಟ್ಟುನಿಟ್ಟಿನ ಶಿಸ್ತುಕ್ರಮಗಳನ್ನು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಎದುರಿಸಿದ್ದಾರೆ.
ಮೇ ತಿಂಗಳಲ್ಲಿ ಯುಎಇಯಲ್ಲಿ ದ್ವೇಷಭಾವವುಳ್ಳ ಮೂರವರು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕಲಾಯಿತು ಅಥವಾ ಅಮಾನತುಗೊಳಿಸಲಾಯಿತು.
ಇಸ್ಲಾಮೋಫೋಬಿಕ್ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೇಲೆ ವೆಲ್ಲಿಂಗ್ಟನ್ ಜಸ್ಟೀಸ್ ಆಫ್ ಪೀಸ್ ಅಸೋಸಿಯೇಶನ್ನ ಸದಸ್ಯತ್ವದಿಂದ ಭಾರತೀಯ ಗುಜರಾತಿ ಮೂಲದವರನ್ನು ಕಾಂತಿಲಾಲ್ ಭಗಭಾಯ್ ಪಟೇಲ್ ಅವರನ್ನು ವಜಾ ಮಾಡಿದೆ.
ಅರಬ್ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಇಸ್ಲಾಮೋಫೋಬಿಕ್ ಹೇಳಿಕೆಗಾಗಿ ಹಲವಾರು ಭಾರತೀಯ ವಲಸಿಗರು ಕ್ರಮ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸುದ್ದಿ ಬಂದಿದೆ.
ಸಂಘದ ಉಪಾಧ್ಯಕ್ಷ ಆನ್ ಕ್ಲಾರ್ಕ್, “ಸಂಘಕ್ಕೆ ದೂರು ಬಂದಿತು ಮತ್ತು ಅದನ್ನು ತನಿಖೆ ಮಾಡಲಾಗಿದೆ. ಶ್ರೀ ಪಟೇಲ್ ಇನ್ನು ಮುಂದೆ ವೆಲ್ಲಿಂಗ್ಟನ್ ಜೆಪಿ ಅಸೋಸಿಯೇಶನ್ನ ಸದಸ್ಯರಾಗಿಲ್ಲ. ” ಹೇಳಿದ್ದಾರೆ.