ಉತ್ತರ ಪ್ರದೇಶ: ಬಿಎಸ್ಪಿ ಮುಖಂಡನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು!
ಬಹುಜನ ಸಮಾಜವಾದಿ ಪಕ್ಷದ ನಾಯಕನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕಾನ್ಫುರ ಜಿಲ್ಲೆಯ್ಲಿ ನಡೆದಿದೆ.
ಜೂನ್ 20 ರಂದು ಬಿಎಸ್ ಪಿ ನಾಯಕ ಪಿಂಟು ಸೆಂಗರ್ ಎಂಬುವವರನ್ನು ಕಾನ್ಪುರ ಜಿಲ್ಲೆಯ ಚಾಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಎಸ್ಎಸ್ ಪಿ ತಿಳಿಸಿದ್ದಾರೆ.
ಪಿಂಟು ಸೆಂಗರ್ ಅವರು ಆಸ್ತಿ (ರಿಯಲ್ ಎಷ್ಟೇಟ್) ವ್ಯಾಪಾರಿಯಾಗಿದ್ದು,ಅವರು ಕಾರಿನಲ್ಲಿ ಕುಳಿತಿದ್ದ ವೇಳೆ ಎರಡು ಬೈಕ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರನ್ನು ಕಾರಿನಿಂದ ಹೊರೆಗೆಳೆದು ಶೂಟ್ ಮಾಡಿದ್ದಾರೆ. ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ರಸ್ತೆ ಮಧ್ಯೆಯೇ ಅತ ಸಾವನ್ನಪ್ಪಿದ್ದಾರೆ. ಚಾಕೇರಿ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

