ಫ್ಯಾಕ್ಟ್‌ಚೆಕ್: ಮಂಗಳೂರು ರಸ್ತೆ ಕಾಮಗಾರಿ ವೇಳೆ ಚಿನ್ನದ ನಿಧಿ ಪತ್ತೆಯಾಗಿದ್ದು ನಿಜವೇ?

ಮಂಗಳೂರು ಸೆಂಟ್ರಲ್ ಮಾರ್ಕೆಟ್ ಕಾಮಗಾರಿ ವೇಳೆ ಚಿನ್ನದ ನಿಧಿ ಸಿಕ್ಕಿದೆ ಎಂದು ಹೇಳಿಕೊಂಡು ಕಳೆದೊಂದು ವಾರದಿಂದ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಚಿನ್ನದ ಹಳೆಯ ನಾಣ್ಯಗಳನ್ನು ಹೋಲುವ ಫೋಟೋಗಳು ಹರಿದಾಡುತ್ತಿವೆ. ರಸ್ತೆ ಕೆಲಸ ಮಾಡುತ್ತಿರುವಾಗ ನಿಧಿ ಸಿಕ್ಕಿದೆ ಎಂಬ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇದೇ ಪೋಟೋಗಳನ್ನು ನಮ್ಮ ಏನ್‌ಸುದ್ದಿ.ಕಾಂನ ವಾಟ್ಸಾಪ್ ಗೂ ಹಂಚಿಕೊಂಡ ಕೆಲವರು ಈ ಸುದ್ದಿ ನಿಜವೇ, ಈ ಸುದ್ದಿಯ ವಾಸ್ತವವನ್ನು ತಿಳಿಸಿಕೊಡಿ ಎಂಬ ವಿನಂತಿ ಮಾಡಿದ್ದಾರೆ.

ಹಾಗಿದ್ದರೆ ರಸ್ತೆ ಕಾಮಗಾರಿ ವೇಳೆ ಚಿನ್ನದ ನಾಣ್ಯಗಳ ರೂಪದ ನಿಧಿ ಪತ್ತೆಯಾಗಿದೆ ಎಂಬ ಸುದ್ದಿ ನಿಜವೇ? ಎಂದು ವೈರಲ್ ಸಂದೇಶದ ಹಿಂದಿರುವ ಸತ್ಯಾಸತ್ಯತೆ ಏನೆಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮಂಗಳೂರಿನ ಕೆಲವು ರಸ್ತೆಗಳು ಸಂಪೂರ್ಣ ಹಾಳಾಗಿವೆ, ಅಲ್ಲದೆ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮಂಗಳೂರನ ಹಲವು ರಸ್ತೆಗಳ ಅಗಲೀಕರಣದಂತಹ ಕಾಮಗಾರಿಗಳು ನಡೆಯುತ್ತಿವೆ, ಆದರೆ ಇಲ್ಲಿ ಚಿನ್ನದಂತಹ ಯಾವುದೇ ಲೋಹಗಳು ಪತ್ತೆಯಾದ ಸುದ್ದಿಗಳು ವರದಿಯಾಗಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಚಿನ್ನದ ನಿಧಿ ಪತ್ತೆಯಾಗಿದೆ ಎಂದು ಯಾರೋ ಅನಾಮಧೇಯ ವ್ಯಕ್ತಿಗಳು ಸುಳ್ಳು ಸುದ್ದಿಯನ್ನು ಹರಡಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.

ಬೀಬಿ ಅಲಾಬಿ ರಸ್ತೆಯ ಸ್ಮಾರ್ಟ್‌ ಸಿಟಿ ರಸ್ತೆ ಕಾಮಗಾರಿಯ ಇಂಜಿನಿಯರ್ ಲಿಂಗೇಗೌಡರನ್ನು ಈದಿನ.ಕಾಂ ಸಂಪರ್ಕಿಸಿ ಮಾತನಾಡಿಸಿದಾಗ, “ಚಿನ್ನದ ನಿಧಿ ಸಿಕ್ಕಿದೆ ಎಂಬ ವೈರಲ್ ಸಂದೇಶ ನನಗೂ ವಾಟ್ಸಪ್‌ನಲ್ಲಿ ಬಂದಿತ್ತು. ಈ ಬಗ್ಗೆ ಅಧಿಕಾರಿಗಳಲ್ಲಿ ಕೂಡ ಮಾಹಿತಿ ಕೇಳಿದ್ದೆ. ಆದರೆ ಅಂತಹ ಯಾವ ವಸ್ತುಗಳು ಪತ್ತೆಯಾಗಿಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ. ಯಾರೋ ಕೆಲವರು ಚಿನ್ನದ ಬಣ್ಣವಿರುವ ಕಬ್ಬಿಣದ ತುಂಡನ್ನು ಕೈಯಲ್ಲಿ ಹಿಡಿದಿರುವ ಫೋಟೋ ತೆಗೆದು ಹರಿಯಬಿಟ್ಟಿದ್ದಾರೆ. ಈ ಹಿಂದೆ ಕಾರ್‌ಸ್ಟ್ರೀಟ್‌(ರಥಬೀದಿ) ನಲ್ಲಿ ನಡೆಯುತ್ತಿದ್ದ ಸ್ಮಾರ್ಟ್‌ ಸಿಟಿ ಕಾಮಗಾರಿ ವೇಳೆ ಕೂಡ ಇಂತದ್ದೇ ಸಂದೇಶ ಹರಿದಾಡಿತ್ತು. ಆದರೆ ಇವೆಲ್ಲವೂ ಸುಳ್ಳು. ಇಂತಹ ಸಂದೇಶಗಳು ಬಂದಾಗ ಅದನ್ನು ಪರಿಶೀಲಿಸದೆ ಸಾರ್ವಜನಿಕರು ಫಾರ್ವರ್ಡ್‌ ಮಾಡುತ್ತಿದ್ದಾರೆ. ಫೇಕ್ ನ್ಯೂಸ್‌ಗಳ ಬಗ್ಗೆ ಜನರು ಜಾಗೃತರಾಗಬೇಕು” ಎಂದು ಸ್ಪಷ್ಟನೆ ನೀಡಿದ್ದಾರೆ.

ಫೇಕ್ ನ್ಯೂಸ್
ಫೇಕ್ ನ್ಯೂಸ್

ಒಟ್ಟಾರೆಯಾಗಿ ಹೇಳುವುದಾದರೆ, ಮಂಗಳೂರಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಕಾಮಗಾರಿಗಳ ಸಂದರ್ಭವನ್ನು ಬಳಸಿಕೊಂಡು ಅನಾಮಧೇಯ ವ್ಯಕ್ತಿಗಳು ಮಂಗಳೂರು central ಮಾರ್ಕೆಟ್ ಕಾಮಗಾರಿ ವೇಳೆ ಚಿನ್ನದ ನಿಧಿ ಸಿಕ್ಕಿದೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಈ ಸಂದೇಶ ವ್ಯಾಪಕವಾಗಿ ಹಂಚಿಕೆಯಾಗಿ ಹಲವರು ಇದನ್ನು ಸತ್ಯವೆಂದು ನಂಬಿ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ವೈರಲ್ ಸಂದೇಶದಲ್ಲಿ ಹೇಳುವಂತಹ ನಿಧಿ ಪತ್ತೆಯಾಗಿಲ್ಲ ಎಂದು ಇಂಜಿನಿಯರ್ ಲಿಂಗೇಗೌಡ ಅವರ ಸ್ಪಷ್ಟನೆ ನೀಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸೈಕಲ್ ಸವಾರನ ಮೇಲೆ ನಮೀಬಿಯಾದಿಂದ ತಂದಿರುವ ಚೀತಾಗಳು ದಾಳಿ ಮಾಡಿವೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights