ಉಪಗ್ರಹ ಚಿತ್ರ ಹೇಳುವಂತೆ ‘ಉತ್ತರ ಕೋರಿಯಾ ದೊರೆ ಜೀವಂತವಾಗಿದ್ದಾರೆ’

ಉತ್ತರ ಕೋರಿಯಾದ ಅಧ್ಯಕ್ಷ ಕಿಮ್-ಜಂಗ್-ಉನ್ ಸಾವಿಗೀಡಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವಾಗಲೇ ಪೂರ್ವ ಕರಾವಳಿಯ ವೊನ್ಸನ್ ನಲ್ಲಿ ನಿಂತಿದ್ದ ರೈಲಿನ ಬಗ್ಗೆ ಉಪಗ್ರಹ ಚಿತ್ರವೊಂದು ಪ್ರಕಟವಾಗಿದೆ.

ವಿಶ್ವವೇ ಕೊರಾನಾ ಭೀತಿಗೆ ತತ್ತರಿಸಿ ಹೋಗಿದೆ. ಲಕ್ಷ ಲಕ್ಷ ಜನ ಸಾವಿನ ದವಡೆಗೆ ಸಿಲುಕಿದ್ದಾರೆ. ಎಲ್ಲಾ ದೇಶಗಳಲ್ಲಿ ಮಹಾಮಾರಿ ವಿರುದ್ಧ ಹೋರಾಟ ನಡೆದಿದೆ. ಆದರೆ ಉತ್ತರ ಕೋರೊಯಾದಲ್ಲಿ ಮಾತ್ರ ಕೊರೊನಾ ಬಗ್ಗೆ ಮಾತೇ ಇಲ್ಲ. ಆದರೆ ಉತ್ತರ ಕೋರಿಯಾದ ದೊರೆ ‘ಕಿಮ್ ಜಾಂಗ್ ಉನ್’ ಅವರು ಮಾತ್ರ ಕಾಣೆಯಾಗಿದ್ದಾರೆನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ  ಜಪಾನ್ ಮಾಧ್ಯಮಗಳು ಭಾನುವಾರ ಕಿಮ್ ಜಾಂಗ್ ಮೃತಪಟ್ಟಿದ್ದಾರೆಂದು ಸುದ್ದಿ ಪ್ರಕಟಿಸಿತ್ತು.

ಆದರೆ ಕಿಮ್ ಜಾಗ್ ಮೃತಪಟ್ಟಿಲ್ಲ ಏ.13 ರಿಂದ ವೋನ್ಸಾನ್ ನಲ್ಲಿ ಇದ್ದಾರೆ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇಯ್ ಇನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್ ಚುಂಗ್ ಇನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಕೊರಿಯ ಸರ್ಕಾರ ಅಧಿಕೃತ ಹೇಳಿಕೆ ನೀಡಿದ್ದರೂ ಈಗ ಕಿಮ್ ಅವರ ಖಾಸಗಿ ರೈಲಿನ ಬಗ್ಗೆ ಚರ್ಚೆ ಆರಂಭವಾಗಿದೆ.

ಖಾಸಗಿ ಉಪಗ್ರಹ ವೊನ್ಸನ್ ರೈಲ್ವೇ ನಿಲ್ದಾಣದಲ್ಲಿ ಕಿಮ್ ಅವರ ರೈಲು ನಿಂತಿದ್ದ ಚಿತ್ರವನ್ನು ತೆಗೆದಿದೆ.250 ಮೀಟರ್ ಉದ್ದದ ರೈಲು ನಿಲ್ದಾಣದಲ್ಲಿ ನಿಂತರೂ ಅರ್ಧ ಭಾಗ ಹೊರಗಡೆ ಕಾಣುತ್ತದೆ. ಈ ರೈಲು ಏ.15 ರಂದು ಕಾಣಿಸಿರಲಿಲ್ಲ. ಆದರೆ ಏ. 21 ಮತ್ತು ಏ.23 ರಂದು ಕಾಣಿಸಿತ್ತು. ಕಿಮ್ ಜಾಂಗ್ 2014ರಲ್ಲಿ ಅಧಿಕಾರಕ್ಕೆ ಏರಿದ ಬಳಿಕ ವೊನ್ಸನ್ ಕಾಂಪ್ಲೆಕ್ಸ್ ನವೀಕರಣಗೊಂಡಿದೆ. ಶೂಟಿಂಗ್ ರೇಂಜ್, ಕುದುರೆ ಓಡಿಸುವ ಟ್ರ್ಯಾಕ್, ಐಶಾರಾಮಿ ವಿಲ್ಲಾಗಳು ಇಲ್ಲಿ ನಿರ್ಮಾಣಗೊಂಡಿದೆ. ರೈಲು ನಿಂತಿದ್ದ ಹಿನ್ನೆಲೆಯಲ್ಲಿ ಕಿಮ್ ಇಲ್ಲಿ ವಿಶ್ರಾಂತಿ ಪಡೆಯುತ್ತಿರಬಹುದು ಎಂದು ವರದಿಯಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಿಮ್ ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಏಪ್ರಿಲ್ 15 ರಂದು ನಡೆದ ಕಿಮ್ ಅಜ್ಜನ 108ನೇ ಜನ್ಮದಿನಾಚರಣೆಗೆ ಗೈರಾಗಿದ್ದಾರೆ. ಎಂದೆಂದೂ ಮಿಸ್ ಮಾಡಿರದ ಅಜ್ಜನ ಜನ್ಮದಿನಾಚರಣೆಗೆ ಕಿಮ್ ಈ ಬಾರಿ ಗೈರಾಗಿದ್ದಾರೆ. ಮಾತ್ರವಲ್ಲ ಕಿಮ್ ಸಾಕಷ್ಟು ಕಾರ್ಯಕ್ರಮಗಳಿಗೂ ಹಾಜರಾಗಿಲ್ಲ. ಹೀಗೆ ಹಜರಾಗದ ಕಿಂಗ್ ಮೇಲೆ ಅನುಮಾನ ಕಾಡತೊಡಗಿದೆ. ಆಗಲೇ ಕಿಂಗ್ ದೊರೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾನೆನ್ನುವ ಮಾಹಿತಿ ಹೊರಬಿದ್ದಿದೆ.

ಒಟ್ಟಿನಲ್ಲಿ ಉತ್ತರ ಕೊರೊಯಾದ ಅದ್ಯಕ್ಷನ ವಿಚಾರಕ್ಕೆ ಈಗಲೂ ಅನುಮಾನಗಳು ಬಗೆಹರಿದಿಲ್ಲ. ಕಿಮ್ ದೊರೆಯನ್ನು ನೋಡೋವರೆಗೂ ಜನ ಯಾವುದೇ ನಿರ್ಧಾರಕ್ಕೂ ಬರೋದು ಕೂಡ ಕಷ್ಟ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights