ಉಪಚುನಾವಣೆಯಲ್ಲಿ ಸುಮಲತಾ ಬೆಂಬಲ ಕೋರಲಿರುವ ಅನರ್ಹ ಶಾಸಕ…

ಇದುವರೆಗೂ‌ ನಾನು ಮೇಡಮ್ ಜೊತೆ ಆ ಚರ್ಚೆಯನ್ನು ಮಾಡಿಲ್ಲ. ಯಾಕೆಂದ್ರೆ ಚುನಾವಣೆಯೇ ನಡೆಯೋದಿಲ್ಲ ಅನ್ನೋ ಭರವಸೆ ಇದೆ. ನಾನಿನ್ನು ಶಾಸಕನಾಗೇ ಇದ್ದೀನಿ ಸುಪ್ರೀಂಕೋರ್ಟ್ ನಿಂದ ಒಳ್ಳೆಯ ತೀರ್ಪು ಬರುವ ನಿರೀಕ್ಷೆ ಇದೆ ಎಂದು ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಸುಮಲತಾ ಬೆಂಬಲ‌ ಕೋರುವ ವಿಚಾರಕ್ಕೆ ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

ಚುನಾವಣಾ ಆಯೋಗಕ್ಕೆ ಮಾಜಿ ಸ್ವೀಕರ್ ರವರು ಶಾಸಕರ ಸ್ಥಾನ ಖಾಲಿ ಇದೆ ಎಂದು ಬರೆದು ಕಳಿಸಿದ್ದಾರೆ. ಆಗಾಗಿ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ ಅಷ್ಟೆ. ಇನ್ನು ಸುಪ್ರೀಂಕೋರ್ಟ್ ತೀರ್ಮಾನ ಆದ್ಮೇಲೆ ಆ ವಿಚಾರ ಆವಾಗ ನೋಡೋಣ. ನನಗೆ ಎಲ್ಲರ ಬೆಂಬಲ ಬೇಕು ಮೊದಲು ನನ್ನ ತಾಲೂಕಿನ ಜನರ ಬೆಂಬಲ ಬೇಕು. ಚುನಾವಣೆ ವೇಳೆ ಯಾವಾಗ ಯಾರು ಬೇಕಾದರು ಯಾರ ಬಳಿಯಾದ್ರು ಆಶೀರ್ವಾದ ಕೇಳಬಹುದು.

ಇನ್ನು ಕೆಬಿಸಿ ಸುಮಲತಾ ಬೆಂಬಲ ಕೇಳಲು ನಾರಾಯಣಗೌಡಗೆ ನೈತಿಕ ಹಕ್ಕಿಲ್ಲ. ಆಗಿದ್ರೆ ಕೆಬಿಸಿಯವರು ಬಹಿರಂಗವಾಗಿ ಹೇಳಲಿ ನಾವು ಚುನಾವಣೇಲಿ ಸಹಕಾರ ಮಾಡಿದ್ವಿ ಅಂತಾ. ಆಗ ಅವ್ರು ಜೆಡಿಎಸ್ ಜೊತೆ ಅಲೆಯನ್ಸ್ ಇದ್ರು ಅದೇಗೇ ಅವ್ರು ಯಾವ ರೀತಿ ಹೇಳ್ಕೋತ್ತಾರೆ. ಅವ್ರು ಕದ್ದುಮುಚ್ಚಿ ಮಾಡಿರಬೇಕು ಓಪನ್ ಆಗಿ ಮಾಡಿಲ್ಲ. ಆಗ ಮೈತ್ರಿ ಸರ್ಕಾರ ಇತ್ತು. ಆಗಿದ್ರೆ ಅವ್ರು ಅವು ಆಗ್ಲೆ ಕದ್ದುಮುಚ್ಚಿ‌ ಮಾಡಿ ಜೆಡಿಎಸ್ ಗೆ ಪಕ್ಷದ್ರೋಹ ಮಾಡಿದ್ದಾರೆ.

ನಾನು ಆಗ ಜೆಡಿಎಸ್ ಪಕ್ಷದಲ್ಲಿದ್ದೆ , ಆವಾಗ ನಾನು ಮೇಡಮ್ ನವರ ಪರವಾಗಿ ಮಾಡಿಲ್ಲ. ನಾನು ಆಗ ನನ್ನ ಪಕ್ಷದ ಪರವಾಗಿ ಮಾಡಿದ್ದೇನೆ ಹೊರತು ಮೇಡಮ್ ನವರಿಗೆ ಮಾಡಿದ್ದೆ ಎಂದು ಹೇಳಿಲ್ಲ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ಆದ್ರೆ ಅವ್ರೆನು ಮಾಡಿದ್ರು ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ರು. ಆಗಿದ್ಮೇಲೆ ಈಗ ಯಾರು ಹೇಳ್ತಿರೋದು ಸರಿ ಅನ್ನೋದ್ನ‌ ನೀವೇ ನಿರ್ಧರಿಸಿ. ಇವ್ರು‌ ಮುಂಚೆ ಇಂದ್ಲೆ ಜೆಡಿಎಸ್ ಸರ್ಕಾರ ತೆಗೀಲಿಕೆ ಫ್ಲ್ಯಾನ್ ಮಾಡಿಕೊಂಡಿದ್ರು ಅನ್ಸುತ್ತೆ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.