FACT CHECK | ಟ್ರಂಪ್‌ ವಿಜಯೋತ್ಸವದ ಭಾಷಣದ ವೇಳೆ ಮೋದಿ ಪರ ಘೋಷಣೆಗಳು ಮೊಳಗಿದ್ದು ನಿಜವೇ?

2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಟ್ರಂಪ್ ತಮ್ಮ ವಿಜಯದ ಭಾಷಣ ಮಾಡುವಾಗ ಜನರು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕೂಗುತ್ತಿದ್ದಾರೆ ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

“ಅಮೆರಿಕವನ್ನು ಮತ್ತೆ ಆರೋಗ್ಯವಂತರನ್ನಾಗಿ ಮಾಡೋಣ” ಎಂದು ಟ್ರಂಪ್ ಹೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ನಂತರ ಪ್ರೇಕ್ಷಕರು ಹೆಸರನ್ನು ಘೋಷಣೆ ಮಾಡುತ್ತಾರೆ. ಈ ಹರ್ಷೋದ್ಗಾರಗಳಿಗೆ ಪ್ರತಿಕ್ರಿಯಿಸಿದ ಟ್ರಂಪ್, ಅವರು ಒಬ್ಬ ಮಹಾನ್ ವ್ಯಕ್ತಿ ಎಂದು ಕೆಲ ಮಾತುಗಳನ್ನು ಆಡುತ್ತಾರೆ. ಇದು ಮೋದಿಗೆ ಸಂಬಂಧಿಸಿದ್ದು ಎಂದು ಅನೇಕರು ಹೇಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಟ್ರಂಪ್ ವಿಜಯದ ಭಾಷಣದ ವೇಳೆ ಮೋದಿ, ಮೋದಿ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು  ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಪೋಸ್ಟ್‌ಗೆ ಬಂದಿರುವ ಕಾಮೆಂಟ್‌ಗಳನ್ನು ಪರಿಶೀಲಿಸಿದ ನಂತರ, ರಾಬರ್ಟ್ ಎಫ್. ಕೆನಡಿ ಜೂನಿಯರ್‌ಗಾಗಿ ಜನಸಮೂಹವು “ಬಾಬಿ, ಬಾಬಿ” ಎಂದು ಘೋಷಣೆ ಕೂಗುತ್ತಿದೆ ಎಂದು ಹಲವಾರು ಬಳಕೆದಾರರು ಸೂಚಿಸುವುದನ್ನು ಕಾಣಬಹುದು.

ಕಮೆಂಟ್‌ಗಳ ಆಧಾರದಲ್ಲಿ ಕೀವರ್ಡ್ಗಳನ್ನು ಬಳಸಿಕೊಂಡು ಎಕ್ಸ್‌ನಲ್ಲಿ ಸರ್ಚ್ ಮಾಡಿದಾಗ, ಎಕ್ಸ್‌  ಬಳಕೆದಾರರು ವೀಡಿಯೊದ ವಿಸ್ತೃತ ಆವೃತ್ತಿಯನ್ನು ಹಂಚಿಕೊಂಡಿರುವುದು ಲಭ್ಯವಾಗಿದೆ. ಟ್ರಂಪ್ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನು ಶ್ಲಾಘಿಸುತ್ತಿರುವುದನ್ನು ಕ್ಲಿಪ್ ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಅವರು “ಅಮೇರಿಕಾವನ್ನು ಮತ್ತೆ ಆರೋಗ್ಯಕರವಾಗಿ” ಮಾಡಲು ಸಹಾಯ ಮಾಡುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ಟ್ರಂಪ್ ವಿಜಯ ಭಾಷಣದ ಸಮಯದಲ್ಲಿ ಕೆನಡಿ ಜೂನಿಯರ್‌ ಘೋಷಣೆಯನ್ನು ಕೂಗಲಾಯಿತು ಎಂದು ಬಳಕೆದಾರರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ, ಇಲ್ಲಿ ಪ್ರೇಕ್ಷಕರನ್ನು “ಬಾಬಿ! ಬಾಬಿ!” ಎಂದು ಜಪಿಸುತ್ತಿದ್ದಾರೆ.

ಇದರ ಆಧಾರದಲ್ಲಿ ಗೂಗಲ್​ನಲ್ಲಿ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ನವೆಂಬರ್ 6, 2024 ರಂದು ಪ್ರಕಟಿಸಲಾದ ಟೈಮ್ ಮ್ಯಾಗಜೀನ್‌ನ ವರದಿ ಲಭ್ಯಯವಾಗಿದೆ. ಲೇಖನದ ಪ್ರಕಾರ, ಟ್ರಂಪ್ ತಮ್ಮ ಭವಿಷ್ಯದ ಆಡಳಿತದ ಬಗ್ಗೆ ಸುಳಿವು ನೀಡುತ್ತಾ, ಸ್ವತಂತ್ರ ಅಧ್ಯಕ್ಷೀಯ ಅಭ್ಯರ್ಥಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನು ಉಲ್ಲೇಖಿಸಿದ್ದಾರೆ. ಕೆನಡಿ ಜೂನಿಯರ್ “ಅಮೆರಿಕವನ್ನು ಮತ್ತೆ ಆರೋಗ್ಯಕರವಾಗಿಸಲು” ಸಹಾಯ ಮಾಡುತ್ತಾರೆ ಎಂದು ಅವರು ಹೇಳಿದರು.

 25 ನಿಮಿಷಗಳ ಕಾಲ ನಡೆದ ಟ್ರಂಪ್ ಅವರ ವಿಜಯದ ಭಾಷಣವನ್ನು ಪರಿಶೀಲಿಸಲಾಗಿದೆ. ನವೆಂಬರ್ 6 ರಂದು NDTV ಇದನ್ನು ಪ್ರಕಟಿಸಿದೆ. 19:35-ನಿಮಿಷಗಳಲ್ಲಿ, ಕಠಿಣ ಪರಿಶ್ರಮದ ಅಮೆರಿಕನ್ನರ ಬಗ್ಗೆ ಮಾತನಾಡುವಾಗ, ಟ್ರಂಪ್ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅನ್ನು ಉಲ್ಲೇಖಿಸಿ, “ಅಮೆರಿಕವನ್ನು ಮತ್ತೊಮ್ಮೆ ಆರೋಗ್ಯಕರವಾಗಿಸಲು” ಸಹಾಯ ಮಾಡುತ್ತಾರೆ ಮತ್ತು ಅವರ ಆಡಳಿತವು ಈ ಕಾರ್ಯಾಚರಣೆಯಲ್ಲಿ ಕೆನಡಿಯನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ವಿಡಿಯೋವನ್ನು ಸ್ಲೋ ಮೋಷನ್​ನಲ್ಲಿ ವೀಕ್ಷಿಸಿದ್ದು, 19:49-ನಿಮಿಷದ ಸಮಯದಲ್ಲಿ, ಕೆನಡಿ ಜೂನಿಯರ್ ಬಗ್ಗೆ ಟ್ರಂಪ್ ಹೊಗಳಿದಾಗ ಪ್ರೇಕ್ಷಕರು “ಬಾಬಿ! ಬಾಬಿ!” ಎಂದು ಘೋಷಣೆ ಕೂಗಿರುವುದು ಕಂಡುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಡೊನಾಲ್ಡ್ ಟ್ರಂಪ್ ಅವರ ವಿಜಯ ಭಾಷಣದ ವೇಳೆ  ಜನರು ಬಾಬಿ ಬಾಬಿ ಎಂದು ಘೋಷಣೆ ಕೂಗಿರುವುದನ್ನು, ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights