ಎಲ್ಲೆಡೆ ‘ಹೆಬ್ಬುಲಿ’ ಕಿಚ್ಚಾಂದೆ ಹವಾ : ಅಭಿಮಾನಿಗಳಿಂದ ಎತ್ತರದ ‘ಪೈಲ್ವಾನ್’ ಕಟೌಟ್
‘ಹೆಬ್ಬುಲಿ’ ನಿರ್ದೇಶಕ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ‘ಪೈಲ್ವಾನ್’ ಚಿತ್ರದಲ್ಲಿ ಕಿಚ್ಚ ಸುದೀಪ್ ಬಾಕ್ಸರ್ ಮತ್ತು ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಆರಂಭದಿಂದಲೂ ಭಾರಿ ಕುತೂಹಲ ಮೂಡಿಸಿರುವ ‘ಪೈಲ್ವಾನ್’ ಸೆಪ್ಟೆಂಬರ್ 12 ರಂದು ತೆರೆ ಕಾಣಲಿದ್ದು, ಈಗಾಗಲೇ ‘ಪೈಲ್ವಾನ್’ ಹವಾ ಜೋರಾಗಿದೆ.
ಚಿತ್ರ ಬಿಡುಗಡೆಯಾಗಲಿರುವ ಚಿತ್ರಮಂದಿರಗಳ ಬಳಿ ಎತ್ತರದ ‘ಪೈಲ್ವಾನ್’ ಕಟೌಟ್ ನಿಲ್ಲಿಸಲಾಗಿದೆ. ಇನ್ನು ಚಿತ್ರಕ್ಕೆ ಶುಭಕೋರಿ ಸುದೀಪ್ ಅಭಿಮಾನಿಗಳು ಭಾರೀ ಫ್ಲೆಕ್ಸ್ ಗಳನ್ನು ಹಾಕಿ ಚಿತ್ರಮಂದಿರವನ್ನು ಸಿಂಗರಿಸಲು ಮುಂದಾಗಿದ್ದಾರೆ. ಹಳ್ಳಿಗಳಲ್ಲಿಯೂ ಚಿತ್ರಕ್ಕೆ ಶುಭ ಕೋರಿ ಫ್ಲೆಕ್ಸ್ ಹಾಕಲಾಗಿದೆ.
‘ಪೈಲ್ವಾನ್’ ತೆರೆಕಾಣಲಿರುವ ಚಿತ್ರಮಂದಿರಗಳಂತೂ ರಾರಾಜಿಸತೊಡಗಿವೆ. ಅಭಿಮಾನಿಗಳ ಸಂಭ್ರಮ ಕೂಡ ಜೋರಾಗಿದೆ. ಬಹುಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಪೈಲ್ವಾನ್’ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಥಿಯೇಟರ್ ಗಳಲ್ಲಿ ತೆರೆಕಾಣಲಿದೆ.
ಸುದೀಪ್, ಸುನಿಲ್ ಶೆಟ್ಟಿ, ಆಕಾಂಕ್ಷ ಸಿಂಗ್ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರದ ಕುರಿತಾದ ಕುತೂಹಲ ಹೆಚ್ಚಾಗಿದೆ. ಟಿಕೆಟ್ ಬುಕ್ಕಿಂಗ್ ಮಾಡಿರುವ ಅಭಿಮಾನಿಗಳು ಮೊದಲ ದಿನವೇ ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ.