ಒಕ್ಕಲಿಗರಿಗೆ ಮತ್ತೊಮ್ಮೆ ಬಗಣಿ ಗೂಟ ಇಡಲು ಸಿದ್ಧರಾದ ದೇವೇಗೌಡ ಅಂಡ್ ಸನ್..!

ಇತಿಹಾಸ ಎಲ್ಲದಕ್ಕೂ ಸಾಕ್ಷಿ ನುಡಿಯುತ್ತೆ ಎನ್ನುತ್ತಾರೆ… ರಾಜ್ಯ ರಾಜಕೀಯದ ಸದ್ಯದ ಬೆಳವಣಿಗೆಗಳನ್ನ ಗಮನಿಸಿದ್ರೆ ಪುನಃ ಇತಿಹಾಸ ಪುಟಗಳನ್ನ ತಿರುವಿ ಹಾಕಲೇಬೇಕು. ಯಾಕಂದ್ರೆ, ಮಾಜಿ ಪ್ರಧಾನಿ, ಕರ್ನಾಟಕ ಒಕ್ಕಲಿಗ ಸಮುದಾಯದ ಅನಭಿಷಿಕ್ತ ದೊರೆ ದೇವೇಗೌಡರು ಪುನಃ ರಣತಂತ್ರ ಹೆಣೆದಿದ್ದಾರೆ.. ಅದೂ ಕೂಡ ಅಧಿಕಾರಕ್ಕಾಗಿ ಎನ್ನುವ ಸತ್ಯ ಜನರಿಗೂ ಗೊತ್ತು.. ಕೇವಲ ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ನಡೆಸುತ್ತಿದ್ದ ಸಮಯಕ್ಕೆ, ಇದೇ ದೇವೇಗೌಡ ಅಂಡ್ ಸನ್ ಬಿಜೆಪಿಯನ್ನ ನಿಂದಿಸಿದ ರೀತಿ-ನೀತಿ ಅಂತಿಥಾದ್ದಲ್ಲ… ಕುಮಾರಸ್ವಾಮಿ ಅವರಂತೂ ಯಡಿಯೂರಪ್ಪ ಅವರ ಬಗ್ಗೆ ಪ್ರಯೋಗಿಸಿದ ಪದಗಳು ಇತಿಹಾಸ ಪುಸ್ತಕಗಳಲ್ಲಿ ದಾಖಲಾಗಿವೆ… ಆದರೆ ಅದೇ ಜೆಡಿಎಸ್ ಸರದಾರರ ವರಸೆ ಈಗ ಸಂಪೂರ್ಣ ಬದಲಾಗಿ ಹೋಗಿದೆ… 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಳಿದ “ಬಿಜೆಪಿಯ ಬಿ-ಟೀಮ್” ಎನ್ನುವ ಮಾತು ಈಗ ಸತ್ಯವಾಗಿದೆ.. ಯಾಕಂದ್ರೆ ಅಧಿಕಾರಕ್ಕಾಗಿ ದೇವೇಗೌಡ ಅಂಡ್ ಸನ್ BJP ಕೇಳದೇ ಇದ್ರೂ, ಯಡಿಯೂರಪ್ಪ ಬಯಸದೇ ಇದ್ರೂ, ನಾವೇ ಸಪೋರ್ಟ್ ಮಾಡ್ತೀವಿ ಅಂತಾ ಹೇಳಿಕೆ ಕೊಡ್ತಾ ಇದ್ದಾರೆ.. ಅಪ್ಪ-ಮಗ ಇಬ್ಬರೂ ದಿನಬೆಳಕಾದ್ರೆ ಬಿಜೆಪಿಗೆ ಸಪೋರ್ಟ್ ಮಾಡುತ್ತೇವೆ ಎನ್ನುತ್ತಲೇ ಇದ್ದಾರೆ.. ಆದ್ರೆ BJP ಕಡೆಯಿಂದ ಸೌಜನ್ಯಕ್ಕೂ ಒಬ್ಬನೇ ಒಬ್ಬ ಶಾಸಕ ಕೂಡ ರಿಯಾಕ್ಟ್ ಮಾಡಿಲ್ಲ… ಅಲ್ಲಿಗೆ ಅನ್ನ ಹಳಸೋಕೂ ಮೊದಲೇ ನಾಯಿ ಹಸಿದು ಕುಳಿತಿದೆ ಅಂದಹಾಗಾಗಿದೆ JDS ಸ್ಥಿತಿ…

ದೇವೇಗೌಡರು ಇವತ್ತು ಒಂದು ವಿಷಯವನ್ನ ಎದೆ ಮುಟ್ಟಿಕೊಂಡು ಹೇಳಲೇಬೇಕು… ಅದೇನಂದ್ರೆ ಒಕ್ಕಲಿಗರ ಬೆಂಬಲವಿಲ್ಲದೇ ಅವರು ಇಷ್ಟೊಂದು ಎತ್ತರಕ್ಕೆ ಬೆಳೆಯೋಕೆ ಆಗ್ತಾ ಇತ್ತ.. ಯಾಕಂದ್ರೆ, ದೇವೇಗೌಡ ಅಂಡ್ ಫ್ಯಾಮಿಲಿ ಹಾಸನ ಬಿಟ್ಟು ಬೆಂಗಳೂರಿಗೆ ಬಂದಾಗ ಬಸವನಗುಡಿಯಲ್ಲಿ ತಿಂಗಳಿಗೆ 200 ರೂಪಾಯಿಯಂತೆ ಹಂಚಿನ ಮೆಯೊಂದರಲ್ಲಿ ಬಾಡಿಗೆ ಇದ್ದರು. ಆವತ್ತು ದೇವೇಗೌಡರಿಗೆ ತನು ಮನ ಹಾಗೂ ಧನ ಸಹಾಯ ಮಾಡಿದವರು ಹೊಸಕೋಟೆಯ ಬಚ್ಚೇಗೌಡರು… ದೇವೇಗೌಡರು ಸಿಎಂ ಆಗೋಕೆ, ಪಿಎಂ ಆಗೋಕೆ ಬ್ಯಾಕ್ ಗ್ರೌಂಡ್ ನಲ್ಲಿ ಕೆಲಸ ಮಾಡಿದ್ದು ಕೂಡ ಬಚ್ಚೇಗೌಡರೇ… ಬಚ್ಚೇಗೌಡರು ಮಾಡಿರೋ ಸಹಕಾರವನ್ನ ಇಡೀ ಗೌಡರ ಕುಟುಂಬ ಏಳು ಜನುಮಕ್ಕೂ ತೀರಿಸಲು ಅಸಾಧ್ಯ.. ಆದರೆ ಅದೇ ಬಚ್ಚೇಗೌಡರು ಕೊನೆಗೊಂದು ದೇವೇಗೌಡ ಅಂಡ್ ಸನ್ಸ್ ಸಹವಾಸವೇ ಬೇಡ ಎಂದು ಬಿಜೆಪಿ ಸೇರಿಬಿಟ್ಟರು… ಅಷ್ಟೆ ಅಲ್ಲ, ದೇವೇಗೌಡರನ್ನ ಓಪನ್ ಆಗಿ ಕರಿನಾಗರ (Black Cobra) ಎಂದು ಕರೆದುಬಿಟ್ಟರು.. ಯಾಕ್ ಗೊತ್ತಾ, ದೇವೇಗೌಡರು ಅತಿಯಾದ ಸ್ವಾರ್ಥ ಹಾಗೂ ಅತಿಯಾದ ಪುತ್ರ ವ್ಯಾಮೋಹಕ್ಕೆ ಸಿಲುಕಿಬಿಟ್ಟಿದ್ದರು.. ತಮಗೆ ಸಹಾಯ ಮಾಡಿದ, ತಮ್ಮ ಬೆಂಬಲಕ್ಕೆ ನಿಂತ ಪಕ್ಷದ ಯಾವ ನಾಯಕರನ್ನೂ ಬೆಳೆಯೋಕೆ ಬಿಡಲಿಲ್ಲ, ಸ್ವತಃ ಒಕ್ಕಲಿಗ ನಾಯಕರನ್ನೇ ಸಹಿಸಲಿಲ್ಲ.. ಅದೇ ಕಾರಣಕ್ಕೆ ಬಚ್ಚೇಗೌಡರು ಹೊರ ನಡೆದದ್ದು…

ಬಚ್ಚೇಗೌಡರೊಬ್ಬರೇ ಅಲ್ಲ, ಜನತಾದಳದಲ್ಲಿ ಇದ್ದಂತಾ ಒಕ್ಕಲಿಗ ನಾಯಕರಾದ ನಾಗೇಗೌಡ, ಮಾಧುಸ್ವಾಮಿ, ಟಿ.ಬಿ. ಜಯಚಂದ್ರ, ಚನ್ನಿಗಪ್ಪ, ಚಲುವರಾಯ ಸ್ವಾಮಿ, ಬಾಲಕೃಷ್ಣ, ಹೀಗೆ ಸಾಲು ಸಾಲು ನಾಯಕರನ್ನ ತುಳಿದು ನಿಂತರು.. ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎನ್ನುವುದೊಂದೇ ದೇವೇಗೌಡರ ಕಣ್ಣ ಮುಂದೆ ಇದ್ದ ಕನಸು… 2006ರಲ್ಲಿ ಅದೂ ಆಯ್ತು… ಆದ್ರೆ ಆನಂತರವಾದ್ರೂ ಒಕ್ಕಲಿಗ‌ ನಾಯಕರನ್ನ ಬೆಳೆಸುವ ಕಾರ್ಯ ಮಾಡಬಹುದಿತ್ತು… ಆದ್ರೆ ದೇವೇಗೌಡರು ಇಡೀ ಒಕ್ಕಲಿಗ ಸಮುದಾಯವನ್ನ ಗುಲಾಮರಂತೆ‌ ಬಳಸಿಕೊಂಡರು.. ಸ್ವತಃ ಆದಿಚುಂಚನಗಿರಿ ಮಠದ ಗುರುಗಳಾಗಿದ್ದ ಪರಮಪೂಜ್ಯ ಬಾಲ ಗಂಗಾಧರನಾಥ ಸ್ವಾಮಿಗಳಿಗೆ ಕೊಡಬಾರದ ಕಷ್ಟಗಳನ್ನ ಕೊಟ್ಟರು… ಗೌಡರ ಕಿರುಕುಳ ತಾಳದ ಸ್ವಾಮೀಜಿ ಚೆನ್ನೈಗೆ ಓಡಿ ಹೋಗಲು ಸಿದ್ಧರಾಗಿದ್ದರು ಎನ್ನುವ ಸತ್ಯ ಇಡೀ ಅಮುದಾಯದ ನಾಯಕರುಗಳಿಗೆ ತಿಳಿದಿರುವಂಥಾದ್ದು.. ಒಂದು ಹಂತದವರೆಗೆ ಡಿ.ಕೆ. ಶಿವಕುಮಾರ್ ಅವರನ್ನೂ ತುಳಿಯುವ ಪ್ರಯತ್ನ ಮಾಡಿದರು… ಆದ್ರೆ ಬಂಡೆಗೆ ತಲೆ ಚಚ್ಚಿಕೊಳ್ಳಬಾರದು ಎನ್ನುವ ಸತ್ಯ ಗೊತ್ತಾದ ಮೇಲೆ ಶಕುನಿ ಆಟ ಶುರು ಮಾಡಿದರು… ಡಿಕೆ ಶಿವಕುಮಾರ್ ಅವರ ಶ್ರಮದಿಂದಲೇ ಕುಮಾರಸ್ವಾಮಿ ಪುನಃ ಸಿಎಂ ಆಗಿದ್ದು.. ಇದು ಒಕ್ಕಲಿಗರಷ್ಟೆ ಅಲ್ಲ, ಇಡೀ ಜಗತ್ತಿಗೆ ಗೊತ್ತಿರುವ ಸತ್ಯ.. ಕುಮಾರಸ್ವಾಮಿಯವರ ಸರ್ಕಾರವನ್ನ ಉಳಿಸುಕೊಳ್ಳೋಕೆ ಡಿಕೆಎಸ್ ಪಟ್ಟ ಶ್ರಮ, ಮಾಡಿದ ತಂತ್ರಗಳು ಜನರ ಕಣ್ಣ ಮುಂದಿವೆ… ಅದೇ ಕಾರಣಗಳಿಗೆ ಡಿಕೆ ‌ಮನೆ ಮೇಲೆ ಐಟಿ-ಈಡಿ ದಾಳಿಗಳೇ ನಡೆದವು… ಆದರೂ ಡಿಕೆ ಸರ್ಕಾರ ಉಳಿಸುವ ಪ್ರಯತ್ನ ಬಿಡಲಿಲ್ಲ… ಕೊನೆಗೆ ಸ್ವಯಂ ಅಪರಾಧಗಳಿಂದ ಹೆಚ್ ಡಿಕೆ ಸರ್ಕಾರ ಪತನವಾಯ್ತು…

ತಮ್ಮ ಸರ್ಕಾರವನ್ನ ರಕ್ಷಿಸಿಕೊಳ್ಳೊಕೆ ಇದೇ ಕುಮಾರಸ್ವಾಮಿಯವರು ಬಿಜೆಪಿ ನಾಯಕ ಹಾಗೂ ಲಿಂಗಾಯತ ಸಮುದಾಯದ ಅನಭಿಷಿಕ್ತ ದೊರೆ ಯಡಿಯೂರಪ್ಪನವರ ಆಡಿಯೋ ಬಿಡುಗಡೆ ಮಾಡಿದ್ರು… ಬಿಎಸ್ ವೈಗೆ ಇನ್ನಿಲ್ಲದ ಮುಜುಗರವನ್ನೂ ಉಂಟು ಮಾಡಿದ್ರು… ವಾಚಾಮಗೋಚರವಾಗಿ ನಿಂದಿಸಿದ್ರು.. 2006ರಲ್ಲಿ 20 ತಿಂಗಳು ನಿಮ್ಮ ಜೊತೆ ಸರ್ಕಾರ ಮಾಡಿದ್ದು ನನ್ನ ಬದುಕಿನ ಅತೀ ದೊಡ್ಡ ಅಪರಾಧ ಎಂದರು… ಬಿಜೆಪಿ ಜೊತೆ ಹೋಗಿ ನನ್ನ ತಂದೆಗೆ ದ್ರೋಹ ಮಾಡಿದೆ. ನನ್ನ ಇಡೀ ಒಕ್ಕಲಿಗ ಸಮುದಾಯಕ್ಕೆ ದ್ರೋಹ ಮಾಡಿದೆ ಎಂದು ಸದನದಲ್ಲಿ ಘೋಷಿಸಿದರು… ಕಣ್ಣೀರು ಹಾಕುವ ಹಂತಕ್ಕೂ ಹೋದರು.. ಇಂಥಾ ದೊಡ್ಡ ದೊಡ್ಡ ಮಾತುಗಳನ್ನಾನು ಆಡಿದ್ದ ಕುಮಾರಣ್ಣ, ನಾಲ್ಕೇ ತಿಂಗಳಲ್ಲಿ ಉಲ್ಟಾ ಹೊಡೆದಿದ್ದಾರೆ… ಅದಕ್ಕೆ ದೊಡ್ಡಗೌಡರು ಕೂಡ ಸಾಥ್ ಕೊಡುತ್ತಿದ್ದಾರೆ…

ದೇವೇಗೌಡರು ಹಾಗೂ ಕುಮಾರಸ್ವಾಮಿ ಇಬ್ಬರೂ ಅಧಿಕಾರ ಹಿಡಿಯಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಜೊತೆ ಹೋಗುತ್ತಿದ್ದಾರೆ ಎನ್ನುವ ಸತ್ಯವನ್ನ ಅರಿಯದಷ್ಟು ದಡ್ಡರಲ್ಲ ಜನ… ಆದರೆ, ಇದು ದೇವೇಗೌಡರು ಪುನಃ ಒಕ್ಕಲಿಗ ಸಮುದಾಯಕ್ಕೆ ಮಾಡುತ್ತಿರುವ ದ್ರೋಹ ಎನ್ನುವುದನ್ನ ಮರೆಯಬಾರದು…

ಅಪ್ಪ-ಮಗ ಇಬ್ಬರ ಸಹವಾದಿಂದ all ready ಜೆಡಿಎಸ್ ನ ಬಹುತೇಕ ಒಕ್ಕಲಿಗ ನಾಯಕರು ದೂರ ಸರಿದಿದ್ದಾರೆ… ಕಾಂಗ್ರೆಸ್ ನಲ್ಲಿದ್ರೂ ಡಿಕೆ ಮಾತ್ರ ಅಪ್ಪ-ಮಗನಿಗೆ ಬೆಂಬಲವಾಗಿದ್ರು.. ಆದ್ರೆ ಈಗ ಯಾವ ಬಿಜೆಪಿ ಒಕ್ಕಲಿಗರನ್ನ ಟಾರ್ಗೆಟ್ ಮಾಡಿತ್ತೋ, ಅದೇ ಬಿಜೆಪಿಗೆ ಅಪ್ಪ-ಮಗ ಒಕ್ಕಲಿಗರ ಶಕ್ತಿಯನ್ನ ಧಾರೆ ಎರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ… ಯಾವ ಡಿಕೆಯನ್ನ ಅರೆಸ್ಟ್ ಮಾಡಿಸಿ, 50 ದಿನಗಳ ಕಾಲ ಕುಖ್ಯಾತ ತಿಹಾರ ಜೈಲಿನಲ್ಲಿ ಇಟ್ಟು, ಒಕ್ಕಲಿಗ ಸಮಾಜಕ್ಕೆ ಅಪಮಾನ ಮಾಡಿತ್ತೋ, ಅದೇ ಬಿಜೆಪಿಗೆ ಒಕ್ಕಲಿಗರನ್ನ ಅಡವಿಡಲು ಸಿದ್ಧರಾಗಿ ನಿಂತಿದ್ದಾರೆ ಅಪ್ಪ-ಮಗ.. ಒಕ್ಕಲಿಗರ ಸಾಮ್ರಾಜ್ಯವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನೇ ಹಾಕದೇ ಕುಮಾರಸ್ವಾಮಿ ಪುತ್ರನನ್ನೇ ಮಣ್ಣು ಮುಕ್ಕಿಸಿದ ಪಕ್ಷಕ್ಕೆ ಒಕ್ಕಲಿಗರನ್ನ ಬಲಿ ಕೊಡುತ್ತಿದ್ದಾರೆ ಕುಮಾರಸ್ವಾಮಿ.. ಮಾಜಿ ಪ್ರಧಾನಿ ಎನ್ನುವ ಗೌರವಕ್ಕೂ ಬೆಲೆ ಕೊಡದೇ ತುಮಕೂರಿನಲ್ಲಿ ಹೀನಾಯವಾಗಿ ಸೋಲಿಸಿದ ಬಿಜೆಪಿಗೆ ಒಕ್ಕಲಿಗರ ಸ್ವಾಭಿಮಾನವನ್ನ ಒತ್ತೆ ಇಡಲು ಹೊರಟಿದ್ದಾರೆ ದೇವೇಗೌಡರು… ಎಸ್ಎಂ ಕೃಷ್ಣ ಅವರ ಅಳಿಯ, ಕರುನಾಡಿನ ಹೆಮ್ಮೆ ಎನಿಸಿಕೊಂಡಿದ್ದ ಕಾಫಿಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮೇಲೆ ಸಿಬಿಐ-ಈಡಿ ದಾಳಿ ಮಾಡಿಸಿ, ಭಯ ಹುಟ್ಟಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತಾ ಸ್ಥಿತಿಗೆ ತಂದ ಬಿಜೆಪಿಗೆ ಸಪೋರ್ಟ್ ಮಾಡುತ್ತಿದ್ದಾರೆ ದೇವೇಗೌಡ ಅಂಡ್ ಸನ್..

ಏಕೆ, ಒಕ್ಕಲಿಗರಲ್ಲಿರುವ ಸ್ವಾಭಿಮಾನ ದೇವೇಗೌಡರಲ್ಲಿ ಇಲ್ವಾ… ಕುಮಾರಸ್ವಾಮಿ ಅವರಲ್ಲಿ ಇಲ್ವಾ… ಒಮ್ಮೆ ಜೋಡೆತ್ತು ಎಂದು ಹೇಳಿದ್ದ ಡಿಕೆ ಶಿವಕುಮಾರ್ ಈಗ ನೆನಪಿಗೆ ಬರುತ್ತಿಲ್ವಾ… ಕೇವಲ ಅಧಿಕಾರವೇ ಮುಖ್ಯನಾ..?
ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಂದ ಬೆಳೆದ ಒಕ್ಕಲಿಗ ನಾಯಕರ ಸಂಖ್ಯೆ ತುಂಬಾ ಕಡಿಮೆ… ಅದೇ ಅಪ್ಪ-ಮಗನ ಅಧಿಕಾರದಾಸೆಗೆ ಬಲಿಯಾದ ಒಕ್ಕಲಿಗರ ಸಂಖ್ಯೆ 50 ದಾಟುತ್ತೆ…

ಕೃಷಿಯನ್ನೇ ನಂಬಿ ಬದುಕುವ, ಎಲ್ಲರೂ ನಮ್ಮವರೆಂದು ತಿಳಿಯುವ ಸಮುದಾಯ ಒಕ್ಕಲಿಗ ಸಮುದಾಯ… ಆದರೆ ಇಂದು ಯಾವ ಸಮೂದಾಯ ಕೂಡ ಒಕ್ಕಲಿಗರ ಬಗ್ಗೆ ಮೊದಲು ತೋರುತ್ತಿದ್ದ ಪ್ರೀತಿ ವಿಶ್ವಾಸ ಅಭಿಮಾನವನ್ನ ಹೊಂದಿಲ್ಲ.. ಅದಕ್ಕೆ ಕಾರಣ ಯಾರು…? ಒಕ್ಕಲಿಗರೋ ಅಥವಾ ಅವರ ಮನಸಿನಲ್ಲಿ ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕಾಗಿ ಇಡೀ ಸಮುದಾಯವನ್ನೇ ಬಲಿ ಕೊಡುತ್ತಿರುವ ಅಪ್ಪ-ಮಕ್ಕಳೋ… ಪ್ರತಿಯೊಬ್ಬ ಸ್ವಾಭಿಮಾನಿ ಒಕ್ಕಲಿಗ ಕೂಡ ಇದನ್ನ ಯೋಚನೆ ಮಾಡಲೇಬೇಕು… ಡಿಕೆ ಶಿವಕುಮಾರ್ ಅವರಂತಾ ಆಪ್ತಮಿತ್ರ ಹಾಗೂ ಆಪತ್ಬಾಂಧವನನ್ನೇ ಬಲಿ ಕೊಡ್ತಾರೆ ಅಂದ್ರೆ ಸಮುದಾಯದ ಮತದಾರರನ್ನ ಲೆಕ್ಕಕ್ಕೆ ಇಟ್ಟಿದ್ದಾರಾ… ಮಂಡ್ಯ ನನ್ನ ಎರಡನೇ ತವರು ಎನ್ನುತ್ತಿದ್ದವರು, ರಾಮನಗರ ನನ್ನ ಕರ್ಮಭೂಮಿ ಎನ್ನುತ್ತಿದ್ದವರು, ಅಧಿಕಾರ ಹೋದ ಮೇಲೆ ಎಷ್ಟು ಬಾರಿ ಬಂದಿದ್ದಾರೆ… ಯಾರನ್ನ ಮಾತನಾಡಿಸಿದ್ದಾರೆ… ಚುನಾವಣೆ ವೇಳೆ ಕೊಟ್ಟ ಭರವಸೆಗಳು ಏನಾದವು…

ರಾಜಕಾರಣ ಹೊಲಸು ಎನ್ನುವುದಷ್ಟೇ ಜನರಿಗೆ ಗೊತ್ತಿರೋ ವಿಚಾರ.. ಆದರೆ ತಾವು ನಂಬಿರೋ ನಾಯಕ ಕೂಡ ಹೊಲಸು ಎಂದು ಯಾವತ್ತೂ ಜನ ಭಾವಿಸಿರುವುದಿಲ್ಲ.. ಈಗ ಜನ ಯೋಚನೆ ಮಾಡಲೇಬೇಕು… ಜೆಡಿಎಸ್ ಇಂದು ಯಾರ ಕುಟುಂಬದ ಕೈಯಲ್ಲಿದೆ.. ಅಧಿಕಾರದಲ್ಲಿ ಇದ್ದಾಗ ಆ ಕುಟುಂಬ ಯಾರಿಗೆ ಸಹಾಯ ಮಾಡಿದೆ. ಸಮುದಾಯಕ್ಕೆ ಆ ಕುಟುಂಬದ ಕೊಡುಗೆ ಏನು.. ಪ್ರತಿ ಸ್ವಾಭಿಮಾನಿ ಒಕ್ಕಲಿಗ ಯೋಚನೆ ಮಾಡಲೇಬೇಕು… ಯಾರೋ ಒಬ್ಬರ ಸ್ವಾರ್ಥಕ್ಕೆ, ಅಧಿಕಾರ ಲಾಲಸೆಗೆ, ಇಡೀ ಸಮುದಾಯ ಬಲಿಯಾಯ್ತು ಎನ್ನುವ ಸಾಲುಗಳು ಕೂಡ ಇತಿಹಾಸ ಪುಟ ಸೇರಲಿವೆ… ಅದಕ್ಕೂ ಮುನ್ನ ಸ್ವಾಭಿಮಾನಿ ಒಕ್ಕಲಿಗರು ಎಚ್ಚೆತ್ತುಕೊಳ್ಳಬೇಕು…

– ಗಳಗನಾಥ, ನೊಂದ ಕನ್ನಡಿಗ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights