ಕಲಹಭರತ ಹತಾಶ ಆರ್ಥಿಕಯಾಗಿ ಭಾರತ ಕುಗ್ಗುತ್ತಿದೆ: ಮನಮೋಹನ್‌ ಸಿಂಗ್‌

ಕುಂಟುತ್ತಿರುವ ಆರ್ಥಿಕತೆಯನ್ನು ಮೇಲೆತ್ತಲು, ಅಶಾಂತಿಯ ಕೋಪದಲ್ಲಿ ಬೇಯುತ್ತಿರುವ ಸಮಾಜದಲ್ಲಿ ಸಾಮರಸ್ಯೆವನ್ನು ಮರಳಿ ತರಲು, ಕೊರೋನಾ ವೈರಸ್‌ನಿಂದ ದೇಶದ ಜನರನ್ನು ರಕ್ಷಸಲು ಪ್ರಧಾಮಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ರೀತಿಯ ಕಾರ್ಯಯೋಜನೆಗಳನ್ನು ರೂಪಿಸಿದೆ ಎಂದು ಬಹಿರಂಗ ಪಡಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಒತ್ತಾಯಿಸಿದ್ದಾರೆ.

ದೇಶವು ಎದುರಿಸುತ್ತಿರುವ ಸಂಕಷ್ಟಗಳನ್ನು ಕುರಿತು ‘ದಿ ಹಿಂದೂ’ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಈ ಬಗ್ಗೆ ವಿಶ್ಲೇಷಿಸಿದ್ದಾರೆ. ಅಶಾಂತಿ, ಗಲಬೆ ಮತ್ತು ಆರ್ಥಿಕ ಹಿನ್ನಡೆಯಿಂದಾಗಿ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಕುಗ್ಗಿಸುತ್ತಿದೆ ಎಂದು ಅವರು ಬರೆದಿದ್ದಾರೆ.

ಭೀರಕ ಹಿಂಸಾಚಾರದಿಂದ ದೆಹಲಿಯು ನಲುಗುತ್ತಿದೆ. ಸಾಮರಸ್ಯ ವಿರೋಧಿ ಸಮಾಜಘಾತುಕ ಶಕ್ತಿಗಳು ದೇಶವನ್ನು ದ್ವೇಷ ಮತ್ತು ಕೋಮುಗಲಬೆ ದಳ್ಳುರಿಯಲ್ಲಿ ಬೇಯುವಂತೆ ಮಾಡಿವೆ. ಜನರನ್ನು ರಕ್ಷಿಸಬೇಕಿದ್ದ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಿದ್ದ ರಾಜಕೀಯ ಪಕ್ಷಗಳು ತಮ್ಮ ಪ್ರಜಾಸತ್ತತೆಯ ಧರ್ಮವನ್ನು ಮರೆತಿವೆ. ನ್ಯಾಯಾಂಗ ಮತ್ತು ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತಿವೆ.

ಉದಾರವಾದಿ ಆರ್ಥಿಕತೆಯೊಂದಿಗೆ ಅಭಿವೃದ್ಧಿಯತ್ತ ಸಾಗುತ್ತಿದ್ದ ಭಾರತವು ಕೆಲವು ವರ್ಷಗಳಿಂದ ಕಲಹಭರಿತ ಹತಾಶ ಆರ್ಥಿಕತೆಯಾಗಿ ಕುಗ್ಗಿತ್ತಿದೆ. ಬಂಡವಾಳದಾರರು, ಉದ್ಯಮಿಗಳು ಹೊಸ ಯೋಜನೆಗಳನ್ನು ಜಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಂಡವಾಳ ಹೂಡಿಕೆಯಾಗದಿದ್ದರೆ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಉದ್ಯೋಗವಿಲ್ಲದೆ ಜನರ ಬಳಿ ಹಣವೂ ಇರುವುದಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದು ಭಾರತವು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ.

ಇಂತಹ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡುವುದು ದೇಶಕ್ಕೆ ದೊಡ್ಡ ಗಂಡಾಂತರವನ್ನು ತಂದೊಡ್ಡಲಿದೆ.  ಈ ವಿಷಮ ಸ್ಥಿತಿಯಲ್ಲಿ ಕೊರೋನಾ ವೈರಸ್‌ ಪಿಡುಗಾಗಿ ಕಾಡಲಾರಂಭಿಸಿದೆ. ಈ ಪಿಡುಗನ್ನು ಎದುರಿಸಲು ಹೊಸ ಯೋಜನೆಗಳನ್ನು ರೂಪಿಸಬೇಕು. ಆದರೆ ಸರ್ಕಾರ ಅಂತಹ ಯಾವ ಮಾರ್ಗಗಳನ್ನು ಕಂಡುಕೊಳ್ಳುವ ಸಿದ್ಧತೆ ನಡೆಸದೇ ಇರುವುದು ದೇಶದ ಬುನಾಧಿಯನ್ನು ಅಲುಗಡಿಸಲಿದೆ.

ಈ ಸೋಂಕಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸರಕು ಸೇವೆಗಳಿಗೆ ದೊಡ್ಡ ಬಾಗಿಲನ್ನೇ ತೆರೆದಿದೆ. ಆದರೆ, ಈ ಅವಕಾಶವನ್ನು ಬಳಸಿಕೊಳ್ಳುವ ಸ್ಥಿತಿಯಲ್ಲಿ ಈಗ ಭಾರತ ಇಲ್ಲ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮೊದಲು ಕೊರೋನಾ ವೈರಸ್‌ ತಡೆಗೆ ಮಾರ್ಗಗಳನ್ನು ರೂಪಿಸಿಬೇಕು. ನಂತರ ಆರ್ಥಿಕತೆ ಉತ್ತೇಜನ ನೀಡಬೇಕು. ಬೇಡಿಕೆ ಹೆಚ್ಚಾದರೆ, ಹೂಡಿಕೆಯೂ ಏರುತ್ತದೆ. ದೇಶವು ಆರ್ಥಿಕವಾಗಿ ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಮನಮೋಹನ್‌ಸಿಂಗ್‌ ವಿಶ್ಲೇಷಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights