ದುಬಾರಿ ಮಾಸ್ಕ್ : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಭೀತಿ : ಮಾಸ್ಕ್ ಖರೀದಿಗೆ ಮುಗಿ ಬಿದ್ದ ಜನ

ಕೊರೊನಾ…. ಕೊರೊನಾ…. ಕೊರೊನಾ…. ಪ್ರತಿ ನಿತ್ಯ ಕೊರೊನಾ ಹೆಸರು ಕಿವಿಗೆ ಬೀಳದೆ ಕಾಲದೂಡುತ್ತಲೇ ಇಲ್ಲ. ಯಾರಾ ಬಾಯಿಯಲ್ಲೇ ಆಗಲಿ ಕೊರೊನಾ ವೈರಸ್ ದ್ದೇ ಮಾತು. ಇಷ್ಟೊಂದು ಭಯಹುಟ್ಟಿಸಿದ ಕೊರೊನಾದಿಂದ ಜನ ತಪ್ಪಿಸಿಕೊಳ್ಳುವುದು ಹೇಗಪ್ಪ ಅಂತ ಯೋಚನೆ ಮಾಡುತ್ತಿದ್ದಾರೆ. ಇದಕ್ಕೆ ಕೊಂಚ ಮಟ್ಟಿಗೆ ರಕ್ಷಣೆ ಅಂದ್ರೆ ಮುಖಕ್ಕೆ ಧರಿಸುವ ಮಾಸ್ಕ್. ಹೀಗಾಗಿ ಮಾಸ್ಕ್ ಗೆ ದೇಶದೆಲ್ಲೆಡೆ ಬೇಡಿಕೆ ಅಧಿಕವಾಗಿದೆ. ಸದ್ಯ ಸಿಲಿಕಾನ್ ಸಿಟಿಯಲ್ಲೂ ಇದರ ಬೇಡಿಕೆ ಅಧಿಕವಾಗಿದೆ.

ಹೌದು… ಬೆಂಗಳೂರಿಗೆ ಆಗಮಿಸಿದ್ದ ತೆಲಂಗಾಣ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಇರುವುದು ದೃಢಪಡುತ್ತಿದ್ದಂತೆ ಇಡೀ ಬೆಂಗಳೂರಿಗರೇ ಬೆಚ್ಚಿ ಬಿದ್ದಿದ್ದಾರೆ. ಆ ವ್ಯಕ್ತಿ ಇದ್ದ ಅಪಾರ್ಟ್ ಮೆಂಟ್, ಅಲ್ಲಿ ವಾಸವಿದ್ದ ಜನ, ಟೆಕ್ಕಿ ಓಡಾಡಿದ ಸ್ಥಳ, ಕಚೇರಿ, ಸಂಪರ್ಕಿಸಿದ ಜನ ಎಲ್ಲರ ತಪಾಸಣೆ ಮಾಡಲಾಗುತ್ತಿದ್ದು, ಬಿಬಿಎಂಪಿಯಿಂದ ಸ್ವಚ್ಚತಾ ಕಾರ್ಯ ಆಯಾ ಸ್ಥಳದಲ್ಲಿ ನಡೆದಿದೆ. ಸೋಂಕು ಹರಡುವ ಭೀತಿಯಲ್ಲಿ ಜನ ಮಾಸ್ಕ್ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಮಾಸ್ಕ್ ಗಳ ಬೆಲೆ ಇದ್ದಕ್ಕಿಂದ್ದಂತೆ ಗಗನಕ್ಕೆರುತ್ತಿದೆ.

ಮೊನ್ನೆಯವರೆಗೂ ಖಾಲಿ ಒಡೆಯುತ್ತಿದ್ದ್ ಮೆಡಿಕಲ್ ಶಾಪ್ ಗಳಲ್ಲಿ ಜನ ಮಾಸ್ಕ್ ಖರೀದಿಗೆ ಮುಗಿ ಬಿದ್ದಿದ್ದಾರೆ. 8-10 ರೂಪಾಯಿಗೆ ದೊರೆಯುವ ಮಾಸ್ಕ್ ಗಳು 30 ರಿಂದ 40 ರೂಪಾಯಿಗೆ ಲಭ್ಯವಾಗುತ್ತಿವೆ. ಇನ್ನೂ ಎನ್ 95 ಎನ್ನುವ ಹೈ ಪ್ರೊಟೆಕ್ಟ್ ಮಾಸ್ಕ್ ಸ್ಟಾಕ್ ಖಾಲಿ ಆಗಿ ಹೋಗಿದೆ. 270 ಇದ್ದ ಈ ಮಾಸ್ಕ್ ಬೆಲೆ 500 ದಾಟಿದೆ ಎನ್ನಲಾಗುತ್ತಿದೆ. ಮೆಡಿಕಲ್ ಶಾಪ್ ಗಳ ಮಾಹಿತಿ ಪ್ರಕಾರ “ಮಾಸ್ಕ್ ಗಳು ಅತೀ ಹೆಚ್ಚು ಚೀನಾ ಮ್ಯಾನಿಫ್ಯಾಕ್ಚರಿಂಗ್ ಆಗಿದ್ವು. ಸದ್ಯ ಆ ಮಾಸ್ಕ್ ಗಳು ನಮ್ಮ ದೇಶಕ್ಕೆ ಬರುತ್ತಿಲ್ಲ. ನಮ್ಮ ದೇಶದಲ್ಲಿ ತಯಾರಿಸಿದ ಮಾಸ್ಕ್ ಗಳೇ ಸೇಲ್ ಆಗುತ್ತಿವೆ. ಅವುಗಳ ಬೆಲೆ ಅಧಿಕವಾಗುತ್ತಿದೆ. ಡಿಲರ್ಸ್ ಗಳು ಸಮಯ ಸಾಧಕರಾಗಿ ಬೆಲೆ ಅಧಿಕವಾಗುತ್ತಿದೆ.” ಎನ್ನುವ ಮಾಹಿತಿ ನೀಡುತ್ತಿದ್ದಾರೆ.

ಇನ್ನೂ ಮಾರಣಾಂತಿಕ ಕೊರೊನಾ ವೈರಸ್​ ದಾಳಿಗೆ ವಿಶ್ವದ 60 ದೇಶಗಳು ತತ್ತರಿಸಿವೆ. ಇದುವರೆಗೂ 3 ಸಾವಿರಕ್ಕೂ ಹೆಚ್ಚು ಜನರು ಈ ವೈರಸ್​ಗೆ ಬಲಿಯಾಗಿದ್ದಾರೆ. 90 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,981ಕ್ಕೆ ಏರಿಕೆಯಾಗಿದ್ದು, ನಿನ್ನೆ ಹೊಸದಾಗಿ 119 ಕೊರೊನಾ ಪ್ರಕರಣಗಳು ದಾಖಲಾಗಿವೆ. ಚೀನಾದಲ್ಲಿ ಇದುವರೆಗೂ 80,700 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಫ್ರಾನ್ಸ್​ನಲ್ಲೂ ಕೊರೊನಾ ವೈರಸ್ ಭೀತಿ ಎದುರಾಗಿದ್ದು, ಪ್ರಾಣಾಪಾಯದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಇಲ್ಲಿನ ಆಸ್ಪತ್ರೆಗಳಲ್ಲಿನ 2,000 ಸರ್ಜಿಕಲ್ ಮಾಸ್ಕ್​ಗಳನ್ನು ಕಳ್ಳತನ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights