ಕಳೆದ ವರ್ಷದ ಕುರ್ಮಘಡ ಜಾತ್ರೆಯ ದೋಣಿ ದುರಂತದ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ…

ಕಾರವಾರದ ಅರಬ್ಬಿ ಸಮುದ್ರದ ನಡುದ್ವೀಪದಲ್ಲಿ ನಡೆಯುವ ಜಾತ್ರೆಗಳಲ್ಲೊಂದಾದ ಕಾಳಿ ಮಾತಾ ಜಾತ್ರಾ ಮಹೋತ್ಸವ ಅತಿ ವಿಜೃಂಭಣೆಯಿಂದ ಸರಳವಾಗಿ ನಡೀತು. ಕಳೆದ ವರ್ಷದ ಕುರ್ಮಘಡ ಜಾತ್ರೆಯ ದೋಣಿ ದುರಂತದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಹೌದು ಕಾಳಿ ಮಾತಾ ಜಾತ್ರೆ ಅಂದ್ರೆ ಅಲ್ಲಿ ಸಾವಿರಾರು ಭಕ್ತರು ಭಕ್ತಿಪರಾಕಷ್ಟೆ ಮೆರೆದು ದೇವರ ಆರಾಧನೆಗೆ ಹೋಗುತ್ತಾರೆ ಹೋಗುವಾಗ ಮತ್ತು ಬರುವಾಗ ಇಲ್ಲಿ ದೋಣಿ ಅಥವಾ ಬೋಟ್ ಮೂಲಕವೇ ಅರಬ್ಬಿ ಸಮುದ್ರದಲ್ಲಿ ಪ್ರಯಾಣ ಮಾಡಬೇಕು ಸಾವಿರಾರು ಭಕ್ತರು ದೋಣಿ ಏರಿ ಸಾಗಿ ಕಾಳಿ ಮಾತಾ ಜಾತ್ರೆಯಲ್ಲಿ ಪಾಲ್ಗೊಂಡ್ರು..

ಕಳೆದ ಬಾರಿ ಇಲ್ಲಿನ‌ ಇನ್ನೊಂದು ಐಲೆಂಡ್ ನಲ್ಲಿ ನಡೆಯುವ ಕುರ್ಮಘಡ ನರಸಿಂಹ ಜಾತ್ರೆಯಲ್ಲಿ ಜಾತ್ರೆ ಮುಗಿಸಿ ಬರುತ್ತಿದ್ದ 16ಭಕ್ತರು ಜಲಸಮಾದಿ ಆಗಿದ್ರು ಇದ್ರಿಂದ ಈ ಜಾತ್ರೆಯ ಕಹಿ ಘಟನೆಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಬಾರಿ ಕಾಳಿ ಮಾತಾ ಜಾತ್ರೆಯಲ್ಲಿ ಬರುವ ಪ್ರತಿಯೊಬ್ಬ ಭಕ್ತನಿಗೂ ಲೈಪ್ ಜಾಕೇಟ್ ಕಡ್ಡಾಯ ಮಾಡಿದೆ..ಹೀಗಾಗಿ ಇವತ್ತು ನಡೆದ ಕಾಳಿ ಮಾತಾ ಜಾತ್ರೆ ಸರಳವಾಗಿ ತುಂಬಾ ಸುರಕ್ಷತೆಯಲ್ಲಿ ನಡೀತು..

 

ಕ್ಷೀಣಿಸಿದ ಭಕ್ತರ ಸಂಖ್ಯೆ..

ಕುರ್ಮಘಡ ನರಸಿಂಹ ದೇವರ ಜಾತ್ರೆಯ ಅವಘಡ ಜನರಲ್ಲಿ ಇನ್ನೂ ಮಾಸಿಲ್ಲ ಹೀಗಾಗಿ ಕಾಳಿ ಮಾತಾ ಜಾತ್ರೆಗೆ ಈ ಬಾರಿ ಭಕ್ತರ ಸಂಖ್ಯೆ ತೀರಾ ಕಡಿಮೆ ಆಗಿ ಕಂಡಿತು..ದೋಣಿ ಪ್ರಯಾಣ ಮಾಡಿ ಸಾಗಬೇಕಾದ ಈ‌ಜಾತ್ರೇಲಿ ಕೆಲವೊಂದಿಷ್ಟು ಜನ ಜೀವ ಭಯಕ್ಕೆ ಜಾತ್ರೆಗೆ ಗೈರಾದ್ರು…ಆದ್ರೆ ಈ ಬಾರಿ ಜಾತ್ರೇಲಿ ಬರುವ ಎಲ್ಲ ಭಕ್ತಾಧಿಗಳಿಗೂ ಲೈಪ್ ಜಾಕೇಟ್ ಕಡ್ಡಾಯಗೊಳಿಸಿ ಸುರಕ್ಷಿತ ವಾಗಿ ಹೋಗಿ ತರುವ ಕಾರ್ಯ ನಡೀತು…

Spread the love

Leave a Reply

Your email address will not be published. Required fields are marked *