ಕಳ್ಳ ಸ್ವಾಮಿ ಕದ್ದು ಮಾಡಿದ ಮೆಸೆಜ್ ಗಳ ಸಂಪೂರ್ಣ ವಿವರ ಇಲ್ಲಿದೆ…..
ಯಾದಗಿರಿ ಜಿಲ್ಲೆಯ ಸುರಪುರದ ಹುಣಸಿಹೊಳಿ ಗ್ರಾಮದ ಕಣ್ವ ಪೀಠದ ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ ಈಗ ಸುದ್ದಿಯಾಗಿರುವುದು ಮಹಿಳೆಯೊಂದಿಗೆ ಮಾಡಿದ್ದಾರೆ ಎನ್ನಲಾದ ವಾಟ್ಸ್ ಆಪ್ ಚಾಟ್ ನಿಂದ. ಮೈಸೂರು ಮೂಲದ ನಂದಿನಿ ಎಂಬುವರ ಜೊತೆ ವಾಟ್ಸ್ ಆಪ್ ಮೂಲಕ ಅಸಭ್ಯವಾಗಿ ಸಂಭಾಷಣೆ ನಡೆಸಿದ್ದು ಎನ್ನಲಾದ ಚಾಟ್, ವಿಡಿಯೋ ಮತ್ತು ಆಡಿಯೋಗಳು ಅನಾಮಧೇಯ ವ್ಯಕ್ತಿಯಿಂದ ಹೊರ ಬಂದಿವೆ. ಈಗ ಅವೆಲ್ಲವೂ ವೈರಲ್ ಆಗಿವೆ.ಹಾಗಿದ್ದರೆ ಸ್ವಾಮೀಜಿ ಮಾಡಿದ್ದ ಆ ಚಾಟ್ ನಲ್ಲಿ ಅಂಥದ್ದೇನಿದೆ?ಮೊದಲು ವಾಟ್ಸ್ ಆಪ್ ನಲ್ಲಿ ಚಾಟ್ ಮಾಡುವಂತೆ ಕೇಳಿಕೊಂಡಿದ್ದಾರೆ ಸ್ವಾಮೀಜಿ. ಆ ಮಹಿಳೆಯೂ ಅದಕ್ಕೆ ಒಪ್ಪಿದ್ದಾಳೆ. ನಂತರ ಫೋಟೊ ಕಳುಹಿಸಲು ಆ ಮಹಿಳೆಯನ್ನು ಕೇಳಿಕೊಂಡಿದ್ದಾರೆ. ಆದರೆ ಆಕೆ ಫೋಟೊ ಕಳುಹಿಸಲು ನಿರಾಕರಿಸಿದ್ದಾಳೆ. ತಾನೇ ನೇರವಾಗಿ ಭೇಟಿ ಮಾಡುವುದಾಗಿ ತಿಳಿಸಿದ್ದಾಳೆ.
ನಂತರ ಮುಂದುವರಿದ ಸಂಭಾಷಣೆ ಹೀಗಿದೆ.
ಸ್ವಾಮೀಜಿ: ಹೌದಾ..? ಸರಿಯಮ್ಮ..ಏನೋ ಬೇಕಾಗಿತ್ತು. ನಿಮ್ಮ ಒಂದು ಸಹಕಾರ. ಫೋನ್ ಮಾಡಿದ್ದಷ್ಟೆಮಹಿಳೆ: ಏನ್ ಬೇಕಾಗಿತ್ತು ಹೇಳಿಸ್ವಾಮೀಜಿ: ಹಹ… ಏನ್ ಹೇಳ್ಬೇಕು ನಿನಗೆಮಹಿಳೆ: ಅಯ್ಯೋ ನನಗೆ ಗೊತ್ತಾಗಲ್ಲ. ಹೇಳ್ಬೇಕು ನೀವು
ಸ್ವಾಮೀಜಿ: ಪರಸ್ಪರ ಸುಖ ಬೇಕು
ಮಹಿಳೆ: ಅಷ್ಟೇ ಸಾಕಾ?
ಸ್ವಾಮೀಜಿ: ನಿರಂತರ ಆತ್ಮೀಯತೆ, ಸಂಬಂಧ ಇರಲಿ. ಆಶ್ರಯ ಇರಲಿ
ಮಹಿಳೆ: ಮತ್ತೆ ಬರೀ ಟೈಮ್ಪಾಸ್ಗಾ..? ಹೇಗೆ..?
ವಿದ್ಯಾವಾರಿಧಿತೀರ್ಥ ಸ್ವಾಮೀಜಿ: ಅಲ್ಲ ಬರೀ ಟೈಮ್ ಪಾಸ್ ಗೂ ಮಾಡಬಹುದು. ಆದ್ರೆ ನನಗೆ..
ಮಹಿಳೆ: ಲೈಫ್ ಲಾಂಗಾ..? ಟೈಮ್ಪಾಸಾ..? ಮಧ್ಯದಲ್ಲಿ ಕೈ ಕೊಟ್ಟು ಹೋಗೋದಾ ಯಾವ್ ಥರಾ..?ನಿಮ್ ಭಕ್ತರಲ್ಲಿ ಯಾರಾದರೂ ನನ್ನನ್ನು ಸಿಕ್ಕಿಸಿದರೆ ಏನು ಮಾಡುವುದು ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ.
ಅದಕ್ಕೆ ಉತ್ತರಿಸಿರುವ ಸ್ವಾಮೀಜಿ, “ಈಗ ನಮ್ ಮನೆಯಲಿ ಏನೋ ಪ್ರಾಬ್ಲಂ ಇತ್ತು. ಗುರುಗಳ ಹತ್ತಿರ ಪರಿಹಾರ ಉಪಾಯಕ್ಕೆ ಬಂದಿದ್ದೀವಿ ಅಂತ ಹೇಳ್ಬೇಕು ಅಷ್ಟೆ, ಏನೂ ಆಗಲ್ಲ ಧೈರ್ಯವಾಗಿರು. ನೀನು ಈಗ ಭಕ್ತರ ರೂಪದಲ್ಲಿ ಬರಬೇಕು. ಯಾರಾದ್ರೂ ಕೇಳಿದ್ರೆ ಗುರುಗಳ ಆಶೀರ್ವಾದ ಪಡೆಯೋಕೆ ಬಂದಿದ್ದೀನಿ ಅಂತ ಹೇಳಿ ಬರಬೇಕು. ಯಾರಾದ್ರೂ ಮಾತನಾಡಿಸಿದ್ರೆ ಗುರುಗಳ ಪೂಜೆ ಮಾಡೋಕೆ ಬಂದಿದ್ದೀವಿ ಅಂತ ಹೇಳ್ಬೇಕು. ಮನೆಯಲ್ಲಿ ಕಷ್ಟ ಇದೆ. ಹೇಳಿಕೊಳ್ಳೋಣ ಅಂತ ಬಂದಿದ್ದೀವಿ ಅಂತ ಹೇಳ್ಬೇಕು” ಎಂದಿದ್ದಾರೆ.ಮಾತಾಡುತ್ತಾ ಮಹಿಳೆ ಹೆಸರು ಕೇಳಿದ್ದಾಳೆ. ಆದರೆ ಗುರೂಜಿ ತಮ್ಮ ಹೆಸರನ್ನು ಹೇಳುವುದೇ ಇಲ್ಲ. “ನಾವು ಸ್ವಾಮೀಜಿ ಆದ್ಮೇಲೆ ಯಾರೂ ಬರ್ತ್ ನೇಮ್ ಕರೆಯೋದಿಲ್ಲ. ನನ್ನನ್ನು ಈಗ ವಿದ್ಯಾವಾರಿಧಿತೀರ್ಥರು ಅಂತಾರೆ” ಎಂದು ಹೇಳಿದ್ದಾರೆ.
ನಂತರ ಆಕೆಯ ವಯಸ್ಸು, ಹುಟ್ಟಿದ ದಿನ, ಮದುವೆ, ಮಕ್ಕಳಿನ ವಿಷಯ ಎಲ್ಲವನ್ನೂ ಕೇಳಿದ್ದಾರೆ. ನಂತರ ಆಮಂತ್ರಣ ಪತ್ರಿಕೆ, ಮ್ಯಾಪ್ ಕಳುಹಿಸಿದ್ದಾರೆ.ಮಹಿಳೆಯ ಪತಿ ವಿರುದ್ಧ ಕಣ್ವ ಪೀಠದ ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ. ನನಗೆ ಗೊತ್ತಿಲ್ಲದೇ ಚಾಟಿಂಗ್ ನಡೆಸಿ ಹೀಗೆ ಮಾಡಿದ್ದಾರೆ. 1 ಕೋಟಿ ಕೊಡದಿದ್ರೆ ಆಡಿಯೋ-ವಿಡಿಯೋ ಲೀಕ್ ಮಾಡ್ತೀನಿ ಅಂದಿದ್ದರು ಎಂದೂ ಹೇಳಿದ್ದಾರೆ. ಇದ್ಯಾವುದಕ್ಕು ಸದ್ಯ ಇನ್ನು ಉತ್ತರ ದೊರಕಿಲ್ಲ. ತನಿಖೆಯ ನಂತರ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.