ಕಾರ್ಮಿಕ ಇಲಾಖೆಯ ಆಹಾರ ಕಿಟ್‌ಗಳ ಅಕ್ರಮ ಶೇಖರಣೆ; ಗೋಡೌನ್‌ಗಳ ಮೇಲೆ ಕಾಂಗ್ರೆಸ್‌ ದಾಳಿ

ಕಾರ್ಮಿಕ ಇಲಾಖೆಯ ಆಹಾರ ಕಿಟ್​ಗಳನ್ನ ಅಕ್ರಮವಾಗಿ ಮರು ಪ್ಯಾಕಿಂಗ್‌ ಮಾಡಿ  ಸಾಗಾಟ ಮಾಡುತ್ತಿದ್ದ ಗೋಡೌನ್ ಮೇಲೆ ಕಾಂಗ್ರೆಸ್ ನಾಯಕರು ನಿನ್ನೆ ರಾತ್ರಿ ದಾಳಿ ಮಾಡಿದ್ದಾರೆ.

ಬೆಂಗಳೂರಿನ ರಾಮ ಮೂರ್ತಿನಗರದ ಮುನೇಶ್ವರ ನಗರದಲ್ಲಿರುವ ಲೋಟೋಸ್ ಕಲ್ಯಾಣ ಮಂಟಪದಲ್ಲಿ ದಾಸ್ತಾನುಗಳನ್ನು ಶೇಖರಿಸಿಡಲಾಗಿತ್ತು.  ಆಹಾರ ಕಿಟ್ ಗಳ ಮೇಲಿದ್ದ ಸ್ಟಿಕರ್​ಗಳನ್ನ ತೆಗೆದು ಅಕ್ರಮವಾಗಿ ಬೇಕಾದವರಿಗೆ ಹಂಚಲಾಗ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್‌ ಲಾಕ್‌ಡೌನ್ ಆದ ಸಂದರ್ಭದಿಂದಲೂ ಮಾಡುತ್ತಾ ಬಂದಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಉಗ್ರಪ್ಪ ಮತ್ತು ಎಂಎಲ್​ಸಿ ನಾರಾಯಣಸ್ವಾಮಿ ಅವರು ಗೋಡೌನ್​ನಲ್ಲಿದ್ದ ಕಿಟ್​ಗಳನ್ನ ಪರಿಶೀಲಿಸಿದ್ದಾರೆ.  ಕಾರ್ಮಿಕರಿಗೆ ಸಿಗಬೇಕಿದ್ದ ಕಿಟ್​ಗಳು ಬಿಜೆಪಿ ಕಾರ್ಯಕರ್ತರ ಮನೆ ಸೇರುತ್ತಿವೆ ಅಂತ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿಯೇ ಧರಣಿ ನಡೆಸಿದ್ದಾರೆ.

ಈ ನಡುವೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಸ್ಥಳೀಯ ಶಾಸಕ ಹಾಗೂ ಸಚಿವ ಬೈರತಿ ಬಸವರಾಜ್ ಕಾರ್ಮಿಕ ಇಲಾಖೆಯ ಆಹಾರ ಕಿಟ್‌ಗಳನ್ನು ತಮ್ಮ ಕಾರ್ಯಕರ್ತರಿಗೆ ಅಂಚುತ್ತಿದ್ದಾರೆ,  ಈ ಬಗ್ಗೆ ತನಿಖೆಯಾಗಬೇಕೆಂದು ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದರು.

ಕಾರ್ಮಿಕ ಇಲಾಖೆಯ ಕಿಟ್​ಗಳನ್ನ ಸರ್ಕಾರಿ ಗೋಡೌನ್ ಬಿಟ್ಟು, ಖಾಸಗಿ ಚೌಲ್ಟ್ರಿಯಲ್ಲಿ ಶೇಖರಣೆ ಮಾಡಿದ್ದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಆಹಾರ  ಕಿಟ್​ಗಳನ್ನ ಸಾಗಾಟ ಮಾಡ್ತಿದ್ದ ಚಾಲಕ ಮತ್ತು ಕೆಲವರು ಸ್ಥಳದಿಂದ ಪರಾರಿ ಆಗಿದ್ದು, ಈ ಬಗ್ಗೆ ಕಾಂಗ್ರೆಸ್ ನಿಯೋಗ ಕೆ ಆರ್ ಪುರಂ ಠಾಣೆಗೆ  ದೂರು ನೀಡಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳನ್ನ ಕರೆಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights