ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ‘ಮಣಿವಣ್ಣನ್. ಪಿ’ ವರ್ಗಾವಣೆ ಮಾಡಿದ ಸರ್ಕಾರ

ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಐಎಎಸ್ ಮಣಿವಣ್ಣನ್. ಪಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ.

ಕರ್ನಾಟಕ ಸರ್ಕಾರ ಘೋಷಿಸಿದ ಹಠಾತ್ ನಿರ್ಧಾರದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿ ಮಣಿವಣ್ಣನ್ ಪಿ ಅವರನ್ನು ಸೋಮವಾರ ಅನಿರ್ದಿಷ್ಟವಾಗಿ ವರ್ಗಾಯಿಸಲಾಯಿತು. ಕೊರೊನಾ ರೋಗವನ್ನು ನಿಭಾಯಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿರುವ ಮಧ್ಯೆ ಈ ಪ್ರಕಟಣೆ ಬಂದಿದ್ದು, ಭಾರಿ ಕುತೂಕಲ ಕೆರಳಿಸಿವೆ. ರಾಜ್ಯದ ಕಾರ್ಮಿಕರ ವಿಚಾರವನ್ನು ನಿಭಾಯಿಸುವಲ್ಲಿ ಮಣಿವಣ್ಣನ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಅವರು ನಿರ್ವಹಿಸುತ್ತಿದ್ದ ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಎರಡೂ ಹುದ್ದೆಗಳಿಂದ ಕೂಡಾ ವರ್ಗಾಯಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ (ಗಣಿ ಮತ್ತು ಎಂಎಸ್‌ಎಂಇ) ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಅವರನ್ನು ಎರಡೂ ಹುದ್ದೆಗಳಿಗೆ ನೇಮಿಸಿ ತಕ್ಷಣದಿಂದ ಜಾರಿಗೆ ತರಲಾಗಿದೆ.

ಆದರೆ, ಮಣಿವಣ್ಣನ್ ಅವರಿಗೆ ಯಾವುದೆ ಹೊಸ ಹುದ್ದೆಯನ್ನು ನೀಡದೆ ವರ್ಗಾಯಿಸಲಾಗಿದೆ.

ಮಣಿವಣ್ಣನ್ ಪಿ, ಸಾಮಾಜಿಕ ಜಾಲತಾಣಗಳ ಸಕ್ರಿಯ ಬಳಕೆದಾರರಾಗಿದ್ದರು. ಕರೋನ ವೈರಸ್ ನಂತರದ ಲಾಕ್‌ಡೌನ್ ಬಗ್ಗೆ ಪ್ರಶ್ನೆಗಳನ್ನು ಸಂಗ್ರಹಿಸಲು ಸಾರ್ವಜನಿಕರಿಗಾಗಿ ಪ್ರಾರಂಭಿಸಿದ ಟೆಲಿಗ್ರಾಮ್ ಗುಂಪು ಬಹಳ ಜನಪ್ರಿಯವಾಗಿತ್ತು.

ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ, ಏಪ್ರಿಲ್‌ನಲ್ಲಿ ಉದ್ಯೋಗದಾತರು ಪೂರ್ಣ ವೇತನ ಅಥವಾ ಕೂಲಿಯನ್ನು ನೀಡದೇ ಇರುವುದಕ್ಕೆ ಹೊರಡಿಸಿದ್ದ ನೋಟೀಸನ್ನು 24 ಗಂಟೆಯ ಒಳಗಡೆ ವಾಪಾಸು ಪಡೆಯುವಂತೆ ಅವರನ್ನು ಒತ್ತಾಯಿಸಲಾಗಿತ್ತು. ಆ ಸಮಯದಲ್ಲಿ ಇಲಾಖೆಗೆ 700 ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಈ ಆದೇಶದ ವಿರುದ್ಧ ಸರ್ಕಾರ ವಿವಿಧ ಕೈಗಾರಿಕೆಗಳಿಂದ ತೀವ್ರ ಒತ್ತಡಕ್ಕೆ ಒಳಗಾಯಿತು. ಪ್ರಸ್ತುತ ವರ್ಗಾವಣೆ ಇದೇ ಕಾರಣಕ್ಕೆ ಆಗಿದೆ ಎಂದು ಅನೇಕ ಮೂಲಗಳು ಸೂಚಿಸಿವೆ.

ದೂರು ನೀಡಲು ಕಾರ್ಮಿಕರನ್ನು ಕೇಳುವ ಮೂಲಕ ಅಧಿಕಾರಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಉದ್ಯೋಗದಾತ ಸಂಘ ಮುಖ್ಯಮಂತ್ರಿಗೆ ಪತ್ರ ಬರೆದಿತ್ತು. ಇವರು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಶಾಸಕರಿಗೆ ಪರಿಹಾರ ಕಿಟ್‌ಗಳನ್ನು ಹಸ್ತಾಂತರಿಸಬೇಕೆಂದು ಬಯಸಿದ್ದರು. ಆದರೆ, ಮಣಿವಣ್ಣನ್ ಈ ವಿಚಾರಕ್ಕೆ ವಿರುದ್ಧವಾಗಿದ್ದು ಇಲಾಖೆ ಕಿಟ್‌ಗಳನ್ನು ವಿತರಿಸಿತು. ಇದರಿಂದಾಗಿ ಕಿಟ್‌ಗಳು ಸರಿಯಾಗಿ ಜನರನ್ನು ತಲುಪುತ್ತಿಲ್ಲ ಎಂದು ಅನೇಕ ಶಾಸಕರು ಆರೋಪಿಸಿದ್ದರು.

ಕನಿಷ್ಟ ವೇತನವನ್ನು ನಿಯಂತ್ರಿಸುವ ಕಾರ್ಮಿಕ ಕಾನೂನುಗಳನ್ನು ಸಡಿಲಿಸುವುದು, ಅಧಿಕಾವಧಿ ಕೆಲಸದ ಸಮಯವನ್ನು ಹೆಚ್ಚಿಸುವುದು ಮತ್ತು ಕೈಗಾರಿಕೆಗಳಿಗೆ ಸಹಾಯ ಮಾಡಲು ಪ್ರಮುಖ ಕಾರ್ಮಿಕ ಶಾಸನಗಳ ಅನುಸರಣೆಯನ್ನು ಸರಾಗಗೊಳಿಸುವ ಬಗ್ಗೆ ಕರ್ನಾಟಕ ಸರ್ಕಾರ ಪರಿಗಣಿಸುತ್ತಿರುವ ಸಮಯದಲ್ಲಿ ಮಣಿವಣ್ಣನ್ ಅವರ ವರ್ಗಾವಣೆಯ ಘೋಷಣೆ ಮಾಡಿದೆ.

1998 ರ ಬ್ಯಾಚ್ ಐಎಎಸ್ ಅಧಿಕಾರಿ, ಮಣಿವಣ್ಣನ್ ಅವರು ಕಳೆದ ವಾರದಲ್ಲಿ ಲಾಕ್ ಡೌನ್ ಅವಧಿಯಲ್ಲಿ ಉದ್ಯೋಗದಾತರು ಕಾರ್ಮಿಕರಿಗೆ ಸಂಬಳ ನೀಡದಿರುವ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತಿದ್ದರು.

2019 ರ ಪ್ರವಾಹದಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಅವರು ಸಕ್ರಿಯವಾಗಿ ಭಾಗಿಯಾಗಿದ್ದರು. ಪ್ರವಾಹದಿಂದ ಹಾನಿಗೊಳಗಾದ ಶಿವಮೊಗ್ಗದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಮಣಿವಣ್ಣನ್ ಅವರನ್ನು ನೇಮಿಸಲಾಗಿತ್ತು.

ಈ ಹಿಂದೆ ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಬೆಸ್ಕಾಮ್ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.

ಮಣಿವಣ್ಣನ್ ಪಿ ವರ್ಗಾವಣೆಗೆ ಸಿಪಿಐ(ಎಂ) ಖಂಡನೆ 

ಮಣಿವಣ್ಣನ್ ಅವರ ವರ್ಗಾವಣೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಂದಿರುವ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡುವ ಕ್ರಮಗಳನ್ನು ಸುಗ್ರೀವಾಜ್ಞೆ ಹೊರಡಿಸುವ ತನ್ನ ಕೈಂಕಯ೯ಕ್ಕೆ ಅನುವುಗೊಳಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್ ಅವರಿಗೆ ಕಾಮಿ೯ಕ ಇಲಾಖೆಯ ಪ್ರಧಾನ ಕಾಯ೯ದಶಿ೯ ಹೊಣೆಯನ್ನು ವಹಿಸಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.

ರಾಜ್ಯದ ಕಾಮಿ೯ಕರ ಹಿತಕ್ಕಿಂತ ಕಾಪೋ೯ರೇಟ್ ಬಂಡವಾಳದ ಹಿತವೇ ರಾಜ್ಯ ಸಕಾ೯ರಕ್ಕೆ ಮುಖ್ಯ ವಾಗಿದೆ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ಏನಾದರು ಮಾಡಿ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡಲು ಕೋವಿಡ್ ಪರಿಹಾರವನ್ನು ಸಹಾ ಬಲಿಕೊಡಲು ರಾಜ್ಯ ಸಕಾ೯ರ ಹಿಂಜರಿಯದು ಎಂಬುದನ್ನು ಇದು ತೋರುತ್ತದೆ.

ತನ್ನ ಬಂಡವಾಳಗಾರರ ಪರ ನೀಲುಮೆಯ ಸಾಧನೆಗಾಗಿ ಒಬ್ಬ ದಕ್ಷ ಮತ್ತು ಕೋವಿಡ್ ಪರಿಹಾರ ಕಾಯ೯ವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಯಶಸ್ಸು ಕಾಣುತ್ತಿದ್ದ ಅಧಿಕಾರಿಯನ್ನು ಸಹ ಬಿಜೆಪಿ ಸರಕಾರ ಸಹಿಸದು ಎಂದು ಸಿಪಿಐ(ಎಂ) ಹೇಳಿದೆ.

ರಾಜ್ಯ ಬಿಜೆಪಿ ಸಕಾ೯ರದ ಇಂತಹ ಕ್ರಮಗಳೆ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಜನತೆಗೆ ಪರಿಹಾರವನ್ನು ಸಮ೯ಪಕವಾಗಿ ಸಮಥ೯ವಾಗಿ ನಿವ೯ಹಿಸುವಲ್ಲಿ ವಿಫಲವಾಗುತ್ತಿದೆ. ರಾಜ್ಯ ಸಕಾ೯ರದಲ್ಲಿನ ದ್ವಿಅಧಿಕಾರ ಕೇಂದ್ರಗಳು ಹಾಗು ಸೂಪರ್ ಸಿಎಂ ಸಂತೋಷ್ ಕಪಿಮುಷ್ಟಿಯಲ್ಲಿ ರಾಜ್ಯ ಸಕಾ೯ರವು ಸಿಲುಕಿರುವ ಪರಿಣಾಮ ಇಂತಹ ದೂರದೃಷ್ಟಿ ಹೀನ ಆಡಳಿತಾತ್ಮಕ ಕ್ರಮಗಳನ್ನು ರಾಜ್ಯದ ಜನತೆ ಕಾಣುವಂತಾಗಿದೆ ಎಂದು ಸಿಪಿಐ(ಎಂ) ಹೇಳಿದೆ.

ಕೋವಿಡ್ ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಮಣಿವಣ್ಣನ್ ವಗಾ೯ವಣೆಯನ್ನು ಕೂಡಲೆ ರದ್ದುಪಡಿಸಿ ಕಾಮಿ೯ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನೇ ಮುಂದುವರಿಸ ಬೇಕೆಂದು ಸಿಪಿಐ(ಎಂ) ರಾಜ್ಯ ಸಕಾ೯ರವನ್ನು ಒತ್ತಾಯಿಸಿದೆ.

Spread the love

Leave a Reply

Your email address will not be published. Required fields are marked *