ಕೆಜೆ ಹಳ್ಳಿ ಗಲಭೆ : ನಟ ಪ್ರಥಮ್ ಹಾಕಿದ್ದ ಪೋಸ್ಟ್ ವಿರುದ್ದ ದೂರು…

ಬೆಂಗಳೂರು ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಬಗ್ಗೆ ನಟ ಪ್ರಥಮ್ ಹಾಕಿದ್ದ ಪೋಸ್ಟ್ ಗೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ ಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಆರೋಪಿಗಳ ಸಂಬಂಧಿ ಮಹಿಳೆಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ತಮಗೆ 4 ತಿಂಗಳ ಮಗು ಹಾಗೂ 7 ತಿಂಗಳ ಮಗು ಇದೆ ಎಂದು ಹೇಳಿದ್ದರು. ಇದನ್ನು ವ್ಯಂಗ್ಯದ ಧಾಟಿಯಲ್ಲಿ ಪ್ರಥಮ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು.

ಅಷ್ಟಕ್ಕು ಪ್ರಥಮ್ ಪೋಸ್ಟ್ ಮಾಡಿದ್ದೇನು..?

‘ಇಂತಹ ಮುಗ್ಧ ಮುಸ್ಲಿಮ್‌ಗಳು ಅನ್‌-ಎಜ್ಯುಕೇಟೆಡ್‌ ಇರಬೇಕು. ಇಲ್ಲ ಅಂದ್ರೆ ಅಲ್ಲಾ ಪವಾಡ ಮಾಡಿರಬೇಕು. 4 ತಿಂಗಳು ವ್ಯತ್ಯಾಸ ಲೇ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ?’ ಎಂದು ಪೋಸ್ಟ್ ಹಾಕಿದ್ದರು.

‘4 ತಿಂಗಳು ವ್ಯತ್ಯಾಸ ಲೇ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ? ಸೈನ್ಸ್‌ಗೆ ಅಸಾಧ್ಯವಾದದ್ದು ಅಲ್ಲಾಗೆ ಮಾತ್ರ ಸಾಧ್ಯ. ಖುದಾಫೀಸ್‌. ಸಬ್‌ ಅಲ್ಲಕ್‌ ಮೆಹರುಬಾನಿ!’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು ಪ್ರಥಮ್. ಇಂಥಹ ಪೋಸ್ಟ್ ಗೆ ಪ್ರಥಮ್ ಗೆ ಬೆದರಿಕೆ ಕರೆಗಳು ಕೂಡ ಬಂದಿದ್ವಂತೆ.

ಈ ಸಂಬಂಧ ಎಸ್‌ಡಿಪಿಐ ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯ ಉಮರ್‌ ಫಾರೂಕ್‌ ಹಲಸೂರು ಗೇಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದರನ್ವಯ ಧಾರ್ಮಿಕ ಭಾವನೆಗೆ ಧಕ್ಕೆ ಸೇರಿದಂತೆ ಅನೇಕ ಪರಿಚ್ಚೇದಗಳಡಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಶೀಘ್ರವೇ ವಿಚಾರಣೆಗಾಗಿ ನಟ ಪ್ರಥಮ್ ಗೆ ನೋಟೀಸ್ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights