ಕೆ.ಆರ್.ಪೇಟೆ ಉಪಚುನಾವಣೆಯ ಆಖಾಡದಲ್ಲಿ ಕೋಟಿ ಕುಳಗಳು……

ಕೆ.ಆರ್.ಪೇಟೆ ಉಪ ಚುನಾವಣೆಯ ಆಖಾಡದಲ್ಲಿ ಕೋಟಿ ಕುಳಗಳು ಇರುವುದು ಬೆಳಕಿಗೆ ಬಂದಿವೆ.

ಹೌದು..  ನಾಮಪತ್ರ ಸಲ್ಲಿಕೆಯ ಆಸ್ತಿ ವಿವರದ ಘೋಷಣೆಯಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ಕೋಟಿ ಒಡೆಯರಾಗಿರುವುದು ತಿಳಿದು ಬಂದಿದೆ. ಹಾಗಾದ್ರೆ ಯಾರ ಆಸ್ತಿ ಎಷ್ಟಿದೆ ಎನ್ನುವ ಸಂಪೂರ್ಣ ವಿವಿರ ಇಲ್ಲಿದೆ ನೋಡಿ.

ಜೆಡಿಎಸ್ ನ ಬಿಎಲ್ ದೇವರಾಜು ಆಸ್ತಿ ವಿವರ ಹೀಗಿದೆ :-

ಸ್ವಯಾರ್ಜಿತ ಸ್ವತ್ತಿನ‌ಮೌಲ್ಯ 180,00,00 ರೂ. ಪಿತ್ರಾರ್ಜಿತ ಸ್ವತ್ತಿನ ಮೌಲ್ಯ 80,00,000 ರೂ 20,87,000 ರೂ ಸಾಲ. ಪತ್ನಿ ಸರ್ವ ಮಂಗಳ ಹೆರಲ್ಲಿ ಹೆಸರಲ್ಲಿರುವ ಸ್ವಯಾರ್ಜಿತ ಆಸ್ತಿ ಮೌಲ್ಯ 32,00,000 ರೂ.
ಚರಾಸ್ತಿ ಮೌಲ್ಯ 19,30,000 ರೂ. 1,00,000 ರೂ ಸಾಲ. ದೇವರಾಜು ಬಳಿ ಯಾವುದೇ ಚಿನ್ನ‌ ಒಡವೆಗಳಿಲ್ಲ. ಪತ್ನಿ ಹೆಸರಲ್ಲಿ 500 ಗ್ರಾಂ 15ಲಕ್ಷ ಮೌಲ್ಯದ್ದು ,4 ಕೆಜಿ ಬೆಳ್ಳಿ1,60,000ಮೌಲ್ಯದ್ದು ಇದೆ.

ಇನ್ನು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಆಸ್ತಿ ವಿವರ :-

ಸ್ವಯಾರ್ಜಿತ ಆಸ್ತಿ ಮೌಲ್ಯ 7,19,68,322 ರೂ. ಪಿತ್ರಾರ್ಜಿತ ಆಸ್ತಿ ಮೌಲ್ಯ20,00,000 ರೂ. 20,60,000 ರೂ ಮೌಲ್ಯದ 650 ಗ್ರಾಂ ಚಿನ್ನ. ಸಾಲ21,94,717 ರೂ. ಪತ್ನಿ ದೇವಕಿ ಹೆಸರಲ್ಲಿರುವ ಆಸ್ತಿ ವಿವರ; ಸ್ವಯಾರ್ಜಿತ ಆಸ್ತಿ ಮೌಲ್ಯ 3,23,26,687ರೂ. ಸಾಲ 34,94,717 ರೂ. 26,50,000 ರೂ ಮೌಲ್ಯದ 641 ಚಿನ್ನ‌ ಮತ್ತು 10 ಕೆಜಿ ಬೆಳ್ಳಿ ಇದೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ಘೋಷಿಸಿಕೊಂಡ ಆಸ್ತಿ ವಿವರ :- 

ಚಂದ್ರಶೇಖರ್ ಹೆಸರಲ್ಲಿ ಯಾವುದೇ ಸ್ವಯಾರ್ಜಿತ ಆಸ್ತಿ ಇಲ್ಲ. ಪಿತ್ರಾರ್ಜಿತ ಆಸ್ತಿ ಮೌಲ್ಯ 2,14,00,00 ರೂ. 75 ಸಾವಿರ ಮೌಲ್ಯದ 30. ಗ್ರಾಂ ಚಿನ್ನ. ಪತ್ನಿ ರಮಾಮಣಿ ಬಳಿ 1,35,00,000 ಮೌಲ್ಯ ಸ್ವಯಾರ್ಜಿತ ಆಸ್ತಿ.
25,00,000 ಮೌಲ್ಯ 1 kg ಚಿನ್ನ. 1,50,000 ರೂ ಮೌಲ್ಯ 3 ಕೆಜಿ ಬೆಳ್ಳಿ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights