ಕೇಂದ್ರ ಸರ್ಕಾರದ ಅಸಮರ್ಥತೆಗೆ ವರದಾನವಾಯ್ತಾ ಕೊರೋನಾ ವೈರಾಸ್‌

ಕೊರೋನಾ ವೈರಸ್‌ ಭೀತಿ ಎಲ್ಲೆಡೆ ಕಾಡಲಾಂಭಿಸಿದೆ. ಪ್ರಮುಖವಾಗಿ ಚೀನಾ, ಇಟಲಿ, ಇರಾಕ್‌, ದಕ್ಷಿಣ ಕೊರಿಯಾ ದೇಶಗಳಲ್ಲಿನ ಜನರಿಗೆ ಕೊರೋನಾ ವೈರಸ್‌ಗೆ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದು ಇಡೀ ಪ್ರಪಂಚದಲ್ಲಿ ಕಾಣಿಸಿಕೊಂಡಿರುವ ಸೋಂಕು ಭಾದಿತರಲ್ಲಿ 98% ಈ ದೇಶವರೇ ಎಂದು ತಿಳಿದುಬಂದಿದೆ.

ಭಾರತದಲ್ಲಿಯೂ ಕೊರೋನಾ ಸೋಂಕು ಇರುವವರನ್ನು ಗುರುತಿಸಲಾಗುತ್ತಿದ್ದು, ಸಧ್ಯಕ್ಕೆ 105 ಜನರಿಗೆ ಸೋಂಕು ಇದೆ ಎಂದು ಹೇಳಲಾಗಿದೆ. ಅಲ್ಲದೆ, ಕಲಬುರ್ಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಚೀನಾದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದಲೂ ಭಾರತೀಯ ಮಾಧ್ಯವುಗಳು ಅದರಲ್ಲೂ ಕನ್ನಡ ಮಾಧ್ಯಮಗಳು ಕೊರೋನಾ ಬಗ್ಗೆ ಅರಿವು ಮೂಢಿಸುವುದಕ್ಕಿಂತ ಹೆಚ್ಚಾಗಿ, ಭಯವನ್ನು ಹರಡುತ್ತಿವೆ. ಕಿಲ್ಲರ್‌ ಕರೋನಾ, ರಣಭೇಟೆಗಾರ ಎಂಬೆಲ್ಲಾ ಟೈಟಲ್‌ಗಳನ್ನಿಟ್ಟುಕೊಂಡು ಬ್ರೇಕಿಂಗ್‌ ನ್ಯೂಸ್‌, ಸೆನ್ಸೇಷನಲ್‌ ನ್ಯೂಸ್‌ ಎಂದೆಲ್ಲಾ ಜನರು ಮನೆಯಿಂದ ಹೊರಗೆ ಬರದೇ ಇರುವಷ್ಟು ಮಟ್ಟಿಗೆ ಭಯ ಹರಡುತ್ತಿವೆ.

ಆದರೆ, ಯಾವ ಒಂದೂ ಟಿವಿ ಚಾನಲ್‌ಗಳೂ ಕೂಡ, ಕೊರೋನಾ ವೈರಸ್‌ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿ ಕ್ರಮಗಳೇನು, ಅದು ಹೇಗೆ ಹರಡುತ್ತದೆ ಎಂಬುದರ ಗೋಜಿಗೆ ಹೋಗಲಿಲ್ಲ. ಇಂತಹ ಭಯದ ಸನ್ನಿವೇಶವನ್ನು ಸರ್ಕಾರಗಳು ಬಳಸಿಕೊಳ್ಳುತ್ತಿವೆಯೇ ಎಂಬುದು ಸಧ್ಯಕ್ಕೆ ಹುಟ್ಟಿಕೊಂಡಿರುವ ಪ್ರಶ್ನೆ.

ಕೇಂದ್ರ ಸರ್ಕಾರ ಒಂದೆಡೆ, ದೇಶದಲ್ಲಿ ಎನ್‌ಪಿಆರ್‌, ಎನ್‌ಆರ್‌ಸಿ ಜಾರಿಮಾಡುತ್ತಿದೆ. ಮತ್ತೊಂದೆಡೆ ಖಾಸಗೀ ಬ್ಯಾಂಕ್‌ ಆದ ಯೆಸ್‌ ಬ್ಯಾಂಕ್‌ ದಿವಾಳಿಯಾಗಿದ್ದು, ದೇಶದ ಆರ್ಥಿಕ ಅಧೋಗತಿಗೆ ಕನ್ನಡಿ ಹಿಡಿದಿದೆ.

ಕಳೆದ ಡಿಸೆಂಬರ್‌ ತಿಂಗಳಿನಿಂದಲೂ ಸಾಮಾನ್ಯ ಜನರು, ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದ ಜನರು, ಮುಸ್ಲೀಮರು ಎನ್‌ಆರ್‌ಸಿ/ಎನ್‌ಪಿಆರ್‌/ಸಿಎಎ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಲೇ ಇದ್ದಾರೆ. ವಿಶೇಷವಾಗಿ ಮಹಿಳೆಯರು ದೆಹಲಿಯ ಶಾಹಿನ್‌ಬಾಗ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಸತ್ಯಾಗ್ರಹ ಧರಣಿಗಳನ್ನು ನೂರಾರು ದಿನಗಳಿಂದ ಮಾಡುತ್ತಲೇ ಇದ್ದಾರೆ.

ಈ ಹೋರಾಟವನ್ನು ಹಣಿಯಲು ಕೇಂದ್ರ ಸರ್ಕಾರ ಹಲವು ತಂತ್ರ-ಕುತಂತ್ರಗಳನ್ನು ರೂಪಿಸಿದರೂ ಹೋರಾಟಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತಿಲ್ಲ. ದೆಹಲಿ ಗಲಬೆ, ಮಂಗಳೂರು ಗೋಲಿಬಾರ್‌ ಸೇರಿದಂತೆ, ಎಲ್ಲೆಡೆ 144 ಸೆಕ್ಷನ್‌ ಹಾಕಿರು ಸರ್ಕಾರದ ಅಸಲಿ ಬಣ್ಣ ಬಯಲಾಗುತ್ತಿದ್ದು, ರಾಜ್ಯಗಳ ಹೈಕೋರ್ಟ್‌ಗಳು ಸರ್ಕಾರಗಳಿಗೆ ಛೀಮಾರಿ ಹಾಕುತ್ತಿವೆ.

ಈ ನಡುವೆ, ಯೆಸ್‌ ಬ್ಯಾಂಕ್‌ ಕೂಡ ದಿವಾಳಿಯಾಗಿದ್ದು, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಯೆಸ್‌ ಬ್ಯಾಂಕ್‌ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಯೆಸ್‌ ಬ್ಯಾಂಕ್‌ನ ಆರ್ಥಿಕ ಬಿಕ್ಕಟ್ಟು, ಲಾಭದ ಬೆನ್ನುಹತ್ತಿದ್ದ ಖಾಸಗೀ ಬ್ಯಾಂಕ್‌ಗಳು ಬಿಕ್ಕಟ್ಟಿಗೆ ಮುನ್ನುಡಿಯಾಗಿದೆ. ಅಲ್ಲದೆ, ಖಾಸಗೀ ಬ್ಯಾಂಕ್‌ಗಳ ಬಿಕ್ಕಟ್ಟಿನ ಪರಿಹಾರಕ್ಕೆ ಸಾರ್ವಜನಿಕ ಬ್ಯಾಂಕ್‌ಗಳ ಹಣವನ್ನು ಸುರಿಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಬ್ಯಾಂಕ್‌ಗಳು ಬಿಕ್ಕಟ್ಟಿಗೆ ಸಿಲುಕಬಹುದಾದ ಸೂಚನೆಗಳನ್ನು ನೀಡುತ್ತಿದೆ. ದೇಶದ ಜಿಡಿಪಿಯೂ ಕುಸಿದಿದ್ದು, ದೇಶದ ಒಟ್ಟೂ ಆರ್ಥಿಕತೆ ನೆಲಕಚ್ಚುತ್ತಿದೆ.

ದೇಶದ ಆರ್ಥಿಕತೆಯನ್ನು ಮೇಲೆತ್ತಲೂ ಯಾವುದೇ ಕಾರ್ಯಸೂಚಿಯೂ ಇಲ್ಲದ ಕೇಂದ್ರ ಸರ್ಕಾರದ ಅಸಮರ್ಥತೆಯ ಬಗ್ಗೆ ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದರೂ, ಕೇಂದ್ರ ಸರ್ಕಾರ ಕಣ್ಣು-ಬಾಯಿ ಮುಚ್ಚಿಕೊಂಡು ಕುಳಿತಿದೆ. ತನ್ನ ಅಸರ್ಥತೆಯನ್ನು ಮುಚ್ಚಿಹಾಕಲು ಸುಳ್ಳಿನ ಕಾರ್ಖಾನೆಯಿಂದ ಫೇಕ್‌ ನ್ಯೂಸ್‌ಗಳನ್ನು ಸೃಷ್ಟಿಸಿ ಹರಿಬಿಡುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳೂ ಸರ್ಕಾರದ ಕೈಗೊಂಬೆಗಳಾಗಿ ಕುಣಿಯುತ್ತಿವೆ.

ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಭಾರತದ ಜನರನ್ನು ಭಯದ ಕೂಪಕ್ಕೆ ದೂಡಿರುವ ಕೊರೋನಾ ವೈರಸ್‌ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವರದಾನವಾಗಿ ಪರಿಣಮಿಸಿದಂತಿದೆಯೇ ಸಾಮಾಜಿಕ ಜಾಲತಾಣವೂ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಕೊರೋನಾ ವೈರಸ್‌ ನಿಯಂತ್ರಿಸಲು ಬೇರಾವ ಕಾರ್ಯ ಕ್ರಮಗಳನ್ನೂ ರೂಪಿಸದ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳಾಗಿ ಸಭೆ ಸೇರುವುದು, ಸಮಾರಂಭಗಳನ್ನು ಮಾಡುವುದನ್ನು ರದ್ದುಗೊಳಿಸುತ್ತಿದೆ. ಇದು, ಎನ್‌ಪಿಆರ್‌/ಎನ್‌ಆರ್‌ಸಿ ವಿರೋಧಿ ಹೋರಾಟಗಳನ್ನು ನಿಯಂತ್ರಿಸಲು ಹಾಗೂ ಆರ್ಥಿಕ ಕುಸಿತದ ಬಗ್ಗೆ ಜನರು ಮಾತನಾಡದಂತೆ ಅವರ ಬಾಯಿ ಮುಚ್ಚಿಸಲು ಕೊರೋನಾ ಭೀತಿಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights