ರಮೇಶ್ ರಾಸಲೀಲೆ : ‘ಸಿಡಿಯಲ್ಲಿ ಸತ್ಯಾಂಶವಿಲ್ಲ’ ಆದರೂ ಕೊಡಲಿಲ್ಲ ದೂರು..!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ ರಮೇಶ್ ನೂರಕ್ಕೆ ನೂರುರಷ್ಟು ಸಿಡಿಯಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಹೌದು… ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹುಕಾರ ಸಿಡಿಯಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಸಿಡಿಯಲ್ಲಿ ಸತ್ಯಾಂಶವಿಲ್ಲ ಎಂದು ಹೇಳುವುದಾದರೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ರಮೇಶ್ ಅವರದ್ದು ರಾಜಮನೆತನ. ಸತತವಾಗಿ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸಾವಿರಾರು ಬೆಂಬಲಿಗರನ್ನು ಹೊಂದಿದ್ದಾರೆ. ಉನ್ನತ ಸ್ಥಾನದಲ್ಲಿದ್ದಾರೆ. ಹೀಗಿದ್ದಾಗ ಯಾರೋ ಒಬ್ಬ ಮಹಿಳೆಯೊಂದಿಗೆ ಇವರು ಇರುವ ಸಿಡಿ ಬಯಲಾಗುತ್ತದೆ. ಆ ಸಿಡಿ ಯಲ್ಲಿ ಇರುವ ವ್ಯಕ್ತಿ ನಾನಲ್ಲ. ಸಿಡಿ ನಕಲಿ ಎಂದು ಹೇಳುವ ರಮೇಶ್ ಇಲ್ಲಿವರೆಗೂ ದೂರು ಕೊಟ್ಟಿಲ್ಲ.

ಮಾದ್ಯಮದ ಮುಂದೆ ಮಾತನಾಡಿದ ಅವರು, ಸಿಡಿ ನಕಲಿ ಎಂದೇ ದೂರಿದ್ದಾರೆ. ಹೀಗಿದ್ದರೆ ಕಾನೂನು ಬದ್ಧವಾಗಿ ದೂರು ನೀಡಬೇಕಿತ್ತು? ಇಷ್ಟು ದಿನ ಯಾಕೆ ಸುಮ್ನಿದ್ದಿರಿ..? ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ..? ಸಿಡಿಯಲ್ಲಿರುವ ಮಹಿಳೆ ಗೊತ್ತಿಲ್ಲವಾದರೆ, ಮಹಿಳೆಗೆ ಕೊಟ್ಟ 5 ಕೋಟಿ ವಿಚಾರ ರಮೇಶ್ ಗೆ ಹೇಗೆ ಗೊತ್ತಾಯಿತು? ಯಾರಿಂದ ತಿಳಿಯಿತು? ನಕಲಿ ಸಿಡಿಗಾಗಿ ನೂರಾರು ಕೋಟಿ ಖರ್ಚು ಯಾಕೆ ಮಾಡಬೇಕು?

ಚಾರಿತ್ರೆವದೆಯಾದರೂ ಸುಮ್ಮನಿರುವುದು ಯಾಕೆ..? ಷಡ್ಯಂತ್ರ ಮಾಡಿದ್ದಾರೆ ಎನ್ನುವುದಾದರೆ ಅವರು ಯಾರು? ರಮೇಶ್ ಜಾರಕಿಹೊಳಿ ಅವರು ಹೇಳುವಂತೆ ನಕಲಿ ಸಿಡಿ ತಯಾರಿಸಿದ್ದರೆ, ಇದು ಜಾಮೀನು ರಹಿತ ಅಪರಾದ. ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕಳಂಕ ಹೊತ್ತು ಈಗ ಸಿಡಿ ನಕಲಿ ಅಂದರೆ ಯಾರು ಒಪ್ಪುತ್ತಾರೆ? ಕ್ಷೇತ್ರದ ಬೆಂಬಲಿಗರು ಒಪ್ಪಬಹುದೇ ವಿನ: ನಾಡಿನ ಜನತೆ ಒಪ್ಪುತ್ತಾರಾ? ಇಂತೆಲ್ಲಾ ಪ್ರಶ್ನೆಗಳು ಸಲೀಸಾಗಿ ಹುಟ್ಟುತ್ತವೆ.

ಹೀಗಾಗಿ ಸಿಡಿ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು. ಸಿಡಿಯಲ್ಲಿರುವ ಮಹಿಳೆಯ ಹೇಳಿಕೆ ಈ ವಿಚಾರದಲ್ಲಿ ಮುಖ್ಯವಾಗಿರುತ್ತದೆ. ಮತ್ತೆ ಅನುಮಾನಗಳನ್ನು ಸೃಷ್ಟಿ ಮಾಡಿದ ರಮೇಶ್ ಸಿಡಿ ವಿಚಾರದ ಹೇಳಿಕೆ ತನಿಖೆಗೆ ಒಳಗಾಗಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights