ಕೇರಳದಲ್ಲಿ ನಾಳೆಯಿಂದ ಷರತ್ತುಬದ್ಧ ಸಡಿಲಿಕೆಗೆ ಅನುಮತಿ : ಹೋಟೆಲ್, ರೆಸ್ಟೋರೆಂಟ್ ಓಪನ್
ದೇಶದೆಲ್ಲೆಡೆ ಕೋವಿಡ್-19 ಅಟ್ಟಹಾಸ ಮುಂದುವರೆದಿದ್ದು ಕೆಲ ರಾಜ್ಯಗಳಲ್ಲಿ ವೇಗವಾಗಿ ಕಾಲಿಟ್ಟು ತನ್ನ ಅಸ್ಥತ್ವವನ್ನು ಮುಂದುವರೆಸದರೆ ಇನ್ನೂ ಕೆಲ ರಾಜ್ಯಗಳಲ್ಲಿ ಕೊರೊನಾ ನಿಧಾನಗತಿಯಲ್ಲಿ ಮಾಯವಾಗುತ್ತಿದೆ. ಇದಕ್ಕೆ ಸಾಕ್ಷಿ ಕೇರಳ. ಹೀಗಾಗಿ ಇಲ್ಲಿನ ಸರ್ಕಾರ ಷರತ್ತುಬದ್ಧ ಸಡಿಲಿಕೆಗೆ ಅನುಮತಿ ನೀಡಿದ್ದು ನಾಳೆಯಿಂದ ಷರತ್ತುಬದ್ಧವಾಗಿ ಜನ, ಬಸ್, ಹೋಟೆಲ್ ಹಾಗೂ ರೆಸ್ಟೋರೆಂಟ್ ತೆರೆಯಲಿವೆ.
ಹೌದು… ನಾಳೆಯಿಂದ ಕೇರಳದ 14 ಜಿಲ್ಲೆಗಳಲ್ಲಿ ಜನಜೀವನ ಸಹಜಸ್ಥಿತಿಗೆ ಮರಳಲಿದೆ. 21 ದಿನಗಳ ಲಾಕ್‍ಡೌನ್ ಬಳಿಕ ವಿನಾಯ್ತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೇರಳ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಕೇರಳದಲ್ಲಿರುವ ಒಟ್ಟು 14 ಜಿಲ್ಲೆಗಳನ್ನು ಕೆಂಪು, ಹಳದಿ, ಹಸಿರು ವಲಯವಾಗಿ ವಿಂಗಡಿಸಲಾಗಿದೆ. ನಿನ್ನೆ ಕೇರಳದಲ್ಲಿ ಕೇವಲ ಮೂರು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲ್ಲಪುರಂ ಮೇ3 ರವರೆಗೆ ಸಂಪೂರ್ಣ ಲಾಕ್‍ಡೌನ್ ಆಗಿರಲಿದೆ. ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಸ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳು ಸಂಚರಿಸಬಹುದು. ಮಂಗಳವಾರ, ಗುರುವಾರ ಶನಿವಾರ ಸಮ ಸಂಖ್ಯೆಯೊಂದಿಗೆ ಅಂತ್ಯವಾಗುವ ವಾಹನಗಳ ಓಡಾಟಕ್ಕೆ ಅನುಮತಿ ಸಿಕ್ಕಿದೆ.
ಶನಿವಾರ ಮತ್ತು ಭಾನುವಾರ ಸಲೂನ್ ಅಂಗಡಿ ತೆರೆಯಬಹುದು. ಸಂಜೆ 7 ಗಂಟೆವರೆಗೆ ಹೋಟೆಲ್-ರೆಸ್ಟೋರೆಂಟ್ ತೆರೆಯಬಹುದು, 8 ಗಂಟೆವೆರೆಗೆ ಪಾರ್ಸೆಲ್‍ಗೆ ಅವಕಾಶ ಸಿಕ್ಕಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, ಹಸಿರು ವಲಯದಲ್ಲಿ ಬಟ್ಟೆ ಅಂಗಡಿ ತೆರೆಯಬಹುದು. ವಾರದಲ್ಲಿ ಎರಡು ದಿನ ಮೊಬೈಲ್, ಆಟೋ ವರ್ಕ್‍ಶಾಪ್, ಕಂಪ್ಯೂಟರ್ ಸೆಂಟರ್, ಬುಕ್‍ಸ್ಟೋರ್ ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.
ಶನಿವಾರ ಮತ್ತು ಭಾನುವಾರ ಹೊರತು ಪಡಿಸಿದ ವಾರದ ಎಲ್ಲ ದಿನ ಸರ್ಕಾರಿ ಕಚೇರಿಗಳು ತೆರೆದಿರುತ್ತದೆ. ಸಹಕಾರ ಸಂಸ್ಥೆಗಳಲ್ಲಿ ಶೇ.33 ರಷ್ಟು ಉದ್ಯೋಗಿಗಳು, ಗ್ರಾಮೀಣ ಪಂಚಾಯತ್ ನಲ್ಲಿ ಶೇ. 35ರಷ್ಟು ಉದ್ಯೋಗಿಗಳು ಕರ್ತವ್ಯ ನಿರ್ವಹಿಸಲು ಅನುಮತಿ.
ಬೈಕ್ ಸವಾರರು ತಮ್ಮ ಸಂಬಂಧಿಕರೊಂದಿಗೆ ಡಬಲ್ ರೈಡಿಂಗ್‍ಗೆ ಅವಕಾಶವಿದೆ. ಇನ್ನು ಬಸ್‍ಗೆ ಹತ್ತುವ ಮೊದಲು ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿದ್ದು, ಯಾರೂ ನಿಂತು ಪ್ರಯಾಣಿಸುವಂತಿಲ್ಲ…